ಹೊಸ Honda City 2026 ಹಾಗೂ Honda ZR-V ಬಿಡುಗಡೆ; ತಿಳಿಯಿರಿ ಸಂಪೂರ್ಣ ವಿವರ

Honda City

Honda ZR-V Hybrid SUV ಭಾರತದಲ್ಲಿ ಬಿಡುಗಡೆ: ಬೆಲೆ, ಮೈಲೇಜ್, ಫೀಚರ್ಸ್ ಹೀಗಿವೆ…

ಪ್ರೀಮಿಯಂ ಕಾರುಗಳ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನ ಹೊಂದಿರುವ ಹೊಂಡಾ ಕಾರ್ಸ್ ಇಂಡಿಯಾ, ಭಾರತೀಯ ಗ್ರಾಹಕರಿಗೆ ಒಂದೇ ವೇದಿಕೆಯಲ್ಲಿ ಎರಡು ಹೊಸ ಮಾದರಿಗಳನ್ನು ಪರಿಚಯಿಸಿದೆ. ಹೊಸ ತಲೆಮಾರಿನ ಹೊಂಡಾ ಸಿಟಿ ಸೆಡಾನ್ ಮತ್ತು ಜಾಗತಿಕವಾಗಿ ಜನಪ್ರಿಯತೆ ಪಡೆದಿರುವ ಝಡ್‌ಆರ್-ವಿ ಇ:ಎಚ್‌ಇವಿ ಹೈಬ್ರಿಡ್ ಎಸ್‌ಯುವಿ ಇದೀಗ ಭಾರತೀಯ ರಸ್ತೆಗಳಿಗೆ ಕಾಲಿಡಲಿವೆ.

ಕಂಪನಿಯ ಪ್ರಕಾರ, ಈ ಎರಡೂ ವಾಹನಗಳು ಕೇವಲ ಹೊಸ ಮಾದರಿಗಳಷ್ಟೇ ಅಲ್ಲ. ಆಧುನಿಕ ವಿನ್ಯಾಸ, ಸ್ಪೋರ್ಟಿ ಚಾಲನಾ ಅನುಭವ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಉತ್ತಮ ಇಂಧನ ದಕ್ಷತೆಯನ್ನು ಬಯಸುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾದ ಹೊಸ ತಲೆಮಾರಿನ ವಾಹನಗಳಾಗಿವೆ.

ಹೊಸ ರೂಪದಲ್ಲಿ ಹೊಂಡಾ ಸಿಟಿ

ಭಾರತೀಯ ಮಾರುಕಟ್ಟೆಯಲ್ಲಿ ವರ್ಷಗಳಿಂದ ಜನಪ್ರಿಯತೆ ಉಳಿಸಿಕೊಂಡಿರುವ ಹೊಂಡಾ ಸಿಟಿ ಇದೀಗ ಇನ್ನಷ್ಟು ಆಕರ್ಷಕ ರೂಪದಲ್ಲಿ ಬಂದಿದೆ. ಉದ್ದವಾದ ಮತ್ತು ಏರೋಡೈನಮಿಕ್ ವಿನ್ಯಾಸ, ಹೊಸ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ವಿಶಾಲವಾದ ಫ್ರಂಟ್ ಗ್ರಿಲ್, ಡೈಮಂಡ್ ಕಟ್ ಅಲಾಯ್ ವೀಲ್ಸ್ ಹಾಗೂ ಹೊಸ ಕ್ರಿಸ್ಟಲ್ ಬ್ಲಾಕ್ ಪರ್ಲ್ ಬಣ್ಣ ಕಾರಿಗೆ ವಿಭಿನ್ನ ಮೆರುಗು ನೀಡುತ್ತವೆ.

ಒಳಾಂಗಣದಲ್ಲಿಯೂ ಹಲವು ಬದಲಾವಣೆಗಳಾಗಿವೆ. 10.1 ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಆಂಬಿಯೆಂಟ್ ಲೈಟಿಂಗ್, ವೆಂಟಿಲೇಟೆಡ್ ಸೀಟುಗಳು ಮತ್ತು 360 ಡಿಗ್ರಿ ಕ್ಯಾಮೆರಾ ಮೊದಲಾದ ಸೌಲಭ್ಯಗಳು ಪ್ರಯಾಣವನ್ನು ಮತ್ತಷ್ಟು ಆರಾಮದಾಯಕವಾಗಿಸುತ್ತವೆ.

ಸುರಕ್ಷತೆಯ ವಿಚಾರದಲ್ಲಿ ಹೊಂಡಾ ಯಾವುದೇ ರಾಜಿ ಮಾಡಿಕೊಳ್ಳಿಲ್ಲ. ಹೊಂಡಾ ಸೆನ್ಸಿಂಗ್ ತಂತ್ರಜ್ಞಾನ ಅಡಿಯಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್, ಕೊಲಿಷನ್ ಮಿಟಿಗೇಷನ್ ಬ್ರೇಕಿಂಗ್ ಸಿಸ್ಟಂ ಸೇರಿದಂತೆ ಹಲವು ಸುಧಾರಿತ ಸುರಕ್ಷತಾ ವ್ಯವಸ್ಥೆಗಳು ಲಭ್ಯವಿವೆ.

ಪೆಟ್ರೋಲ್ ಹಾಗೂ ಹೈಬ್ರಿಡ್ ಆಯ್ಕೆ

ಹೊಸ ಸಿಟಿ ಪೆಟ್ರೋಲ್ ಮತ್ತು ಸ್ಟ್ರಾಂಗ್ ಹೈಬ್ರಿಡ್ ಎರಡೂ ರೂಪಗಳಲ್ಲಿ ದೊರೆಯಲಿದೆ. 1.5 ಲೀಟರ್ ಪೆಟ್ರೋಲ್ ಎಂಜಿನ್ ಉತ್ತಮ ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆಯನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ.

ಇನ್ನೊಂದೆಡೆ, ಹೈಬ್ರಿಡ್ ಆವೃತ್ತಿಯು 27.26 ಕಿ.ಮೀ. ಪ್ರತಿ ಲೀಟರ್ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ಹೇಳಿದೆ. ಅಗತ್ಯಕ್ಕೆ ತಕ್ಕಂತೆ ಎಲೆಕ್ಟ್ರಿಕ್, ಹೈಬ್ರಿಡ್ ಮತ್ತು ಎಂಜಿನ್ ಮೋಡ್‌ಗಳ ನಡುವೆ ಸ್ವಯಂಚಾಲಿತವಾಗಿ ಬದಲಾಯಿಸಿಕೊಳ್ಳುವ ವ್ಯವಸ್ಥೆಯೂ ಇದರಲ್ಲಿದೆ.

ಭಾರತೀಯ ಮಾರುಕಟ್ಟೆಗೆ ಬಂದ ಝಡ್‌ಆರ್-ವಿ

ಹೊಂಡಾದ ಮತ್ತೊಂದು ಪ್ರಮುಖ ಘೋಷಣೆ ಝಡ್‌ಆರ್-ವಿ ಇ:ಎಚ್‌ಇವಿ. ಜಾಗತಿಕ ಮಾರುಕಟ್ಟೆಗಳಲ್ಲಿ ಈಗಾಗಲೇ ಯಶಸ್ಸು ಕಂಡಿರುವ ಈ ಪ್ರೀಮಿಯಂ ಹೈಬ್ರಿಡ್ ಎಸ್‌ಯುವಿ ಇದೀಗ ಭಾರತಕ್ಕೂ ಬಂದಿದೆ.

ಆಕರ್ಷಕ ಎಸ್‌ಯುವಿ ವಿನ್ಯಾಸ, ಸ್ಪೋರ್ಟಿ ಚಾಲನಾ ಗುಣಲಕ್ಷಣಗಳು, ಉತ್ತಮ ಇಂಧನ ದಕ್ಷತೆ ಮತ್ತು ಪ್ರೀಮಿಯಂ ಒಳಾಂಗಣ ಇದರ ಪ್ರಮುಖ ಆಕರ್ಷಣೆಗಳು. 2.0 ಲೀಟರ್ ಇ:ಎಚ್‌ಇವಿ ಸ್ಪೋರ್ಟ್ಸ್ ಹೈಬ್ರಿಡ್ ಪವರ್‌ಟ್ರೇನ್ ಹೊಂದಿರುವ ಈ ಎಸ್‌ಯುವಿಯನ್ನು ಹೊಂಡಾದ ಅತ್ಯಾಧುನಿಕ ಹೈಬ್ರಿಡ್ ವಾಹನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಜಾಗತಿಕ ಮಟ್ಟದಲ್ಲಿ 8 ಲಕ್ಷಕ್ಕೂ ಹೆಚ್ಚು ಮಾರಾಟ ಕಂಡಿರುವ ಝಡ್‌ಆರ್-ವಿ, ವಿಭಿನ್ನ ಹಾಗೂ ಪ್ರೀಮಿಯಂ ಎಸ್‌ಯುವಿ ಅನುಭವವನ್ನು ಹುಡುಕುತ್ತಿರುವ ಗ್ರಾಹಕರನ್ನು ಗುರಿಯಾಗಿಸಿಕೊಂಡಿದೆ.

ಹೊಂಡಾಗೆ ಭಾರತ ಪ್ರಮುಖ ಮಾರುಕಟ್ಟೆ

ಈ ಸಂದರ್ಭದಲ್ಲಿ ಮಾತನಾಡಿದ ಹೊಂಡಾ ಕಾರ್ಸ್ ಇಂಡಿಯಾದ ಅಧ್ಯಕ್ಷ ಹಾಗೂ ಸಿಇಒ ತಕಾಶಿ ನಕಜಿಮಾ, ಭಾರತವು ಹೊಂಡಾದ ಭವಿಷ್ಯದ ಬೆಳವಣಿಗೆಯಲ್ಲಿ ಅತ್ಯಂತ ಮಹತ್ವದ ಮೂರು ಮಾರುಕಟ್ಟೆಗಳಲ್ಲಿ ಒಂದಾಗಿದೆ ಎಂದು ಹೇಳಿದರು.

“ಹೊಸ ಹೊಂಡಾ ಸಿಟಿ ಮತ್ತು ಝಡ್‌ಆರ್-ವಿ ಬಿಡುಗಡೆ ನಮ್ಮ ಮುಂದಿನ ಬೆಳವಣಿಗೆಯ ದಿಕ್ಕನ್ನು ತೋರಿಸುತ್ತದೆ. ಭಾರತೀಯ ಗ್ರಾಹಕರಿಗೆ ಪ್ರೀಮಿಯಂ, ಸ್ಪೋರ್ಟಿ ಮತ್ತು ತಾಂತ್ರಿಕವಾಗಿ ಅತ್ಯಾಧುನಿಕ ವಾಹನಗಳನ್ನು ಪರಿಚಯಿಸುವ ಬದ್ಧತೆಯನ್ನು ನಾವು ಮುಂದುವರಿಸುತ್ತೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಮಾದರಿಗಳನ್ನು ಭಾರತೀಯ ಮಾರುಕಟ್ಟೆಗೆ ತರಲಿದ್ದೇವೆ” ಎಂದು ಅವರು ತಿಳಿಸಿದರು.

ಒಟ್ಟಾರೆ, ಸೆಡಾನ್ ಪ್ರಿಯರಿಗೆ ಹೊಸ ಹೊಂಡಾ ಸಿಟಿ ಹಾಗೂ ಪ್ರೀಮಿಯಂ ಹೈಬ್ರಿಡ್ ಎಸ್‌ಯುವಿ ಬಯಸುವವರಿಗೆ ಝಡ್‌ಆರ್-ವಿ ಉತ್ತಮ ಆಯ್ಕೆಯಾಗುವ ಸಾಧ್ಯತೆ ಇದೆ. ಹೊಂಡಾದ ಈ ಹೊಸ ಜೋಡಿ ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಯಾವ ಮಟ್ಟದ ಯಶಸ್ಸು ಕಾಣಲಿದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಸಿಟಿ ಬೆಲೆ ಎಷ್ಟು?

ಹೊಸ ಹೊಂಡಾ ಸಿಟಿ ವಿವಿಧ ಮಾದರಿಗಳಲ್ಲಿ ಲಭ್ಯವಿದೆ. ದೆಹಲಿ ಎಕ್ಸ್ ಶೋರೂಂ ದರದ ಪ್ರಕಾರ, ಸಿಟಿ ಎಸ್‌ವಿ ಮ್ಯಾನುಯಲ್ ಮಾದರಿಯ ಬೆಲೆ ₹11.99 ಲಕ್ಷದಿಂದ ಆರಂಭವಾಗುತ್ತದೆ. ಟಾಪ್ ಎಂಡ್ ಝಡ್ಎಕ್ಸ್+ ಮ್ಯಾನುಯಲ್ ಮಾದರಿ ₹16.14 ಲಕ್ಷಕ್ಕೆ ಲಭ್ಯವಿದ್ದರೆ, ಸಿವಿಟಿ ಆವೃತ್ತಿಯ ಬೆಲೆ ₹14.29 ಲಕ್ಷದಿಂದ ₹17.14 ಲಕ್ಷದವರೆಗೆ ಇದೆ. ಹೈಬ್ರಿಡ್ ಇ:ಎಚ್‌ಇವಿ ಆವೃತ್ತಿಯ ಬೆಲೆ ₹20.99 ಲಕ್ಷವಾಗಿದೆ.

ಭಾರತಕ್ಕೆ ಕಾಲಿಟ್ಟ ಹೊಂಡಾದ ಪ್ರೀಮಿಯಂ ಹೈಬ್ರಿಡ್ ಎಸ್‌ಯುವಿ

ಭಾರತೀಯ ಮಾರುಕಟ್ಟೆಗೆ ಹೊಸದಾಗಿ ಪ್ರವೇಶಿಸಿರುವ ಝಡ್ಆರ್-ವಿ, ಹೊಂಡಾದ ಪ್ರೀಮಿಯಂ ಎಸ್‌ಯುವಿ ವಿಭಾಗದ ಹೊಸ ಫ್ಲ್ಯಾಗ್‌ಶಿಪ್ ಆಗಿದೆ. “ಬ್ರಿಲಿಯೆಂಟ್ ಲಿಬರೇಷನ್” ಪರಿಕಲ್ಪನೆಯಡಿ ಅಭಿವೃದ್ಧಿಪಡಿಸಲಾದ ಈ ವಾಹನವು ಸ್ಟೈಲ್, ಕಾರ್ಯಕ್ಷಮತೆ ಮತ್ತು ಆರಾಮವನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಗುರಿ ಹೊಂದಿದೆ.

ಮೊದಲ ನೋಟದಲ್ಲೇ ಗಮನ ಸೆಳೆಯುವ ಸ್ಪೋರ್ಟಿ ವಿನ್ಯಾಸ, ಎತ್ತರದ ಗ್ರೌಂಡ್ ಕ್ಲಿಯರೆನ್ಸ್, ವಿಶಾಲ ಕ್ಯಾಬಿನ್ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳು ಈ ಎಸ್‌ಯುವಿಯ ಪ್ರಮುಖ ಆಕರ್ಷಣೆಗಳಾಗಿವೆ. ನಗರ ರಸ್ತೆಗಳಿಂದ ಹಿಡಿದು ಹೆದ್ದಾರಿಗಳವರೆಗೆ ಎಲ್ಲ ರೀತಿಯ ಚಾಲನಾ ಪರಿಸ್ಥಿತಿಗಳಲ್ಲೂ ಆತ್ಮವಿಶ್ವಾಸದ ಅನುಭವ ನೀಡುವಂತೆ ವಾಹನವನ್ನು ರೂಪಿಸಲಾಗಿದೆ.

ಶಕ್ತಿಶಾಲಿ ಹೈಬ್ರಿಡ್ ಎಂಜಿನ್

ಝಡ್ಆರ್-ವಿ 2.0 ಲೀಟರ್ ಇ:ಎಚ್‌ಇವಿ ಸ್ಪೋರ್ಟ್ಸ್ ಹೈಬ್ರಿಡ್ ಪವರ್‌ಟ್ರೇನ್ ಹೊಂದಿದೆ. ಡ್ಯುಯಲ್ ಮೋಟಾರ್ ತಂತ್ರಜ್ಞಾನದ ನೆರವಿನಿಂದ ಒಟ್ಟು 184 ಪಿಎಸ್ ಶಕ್ತಿ ಹಾಗೂ 315 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಕಂಪನಿಯ ಪ್ರಕಾರ, ವಾಹನವು ಲೀಟರ್‌ಗೆ 22.79 ಕಿಲೋಮೀಟರ್‌ಗಳವರೆಗೆ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಎಲೆಕ್ಟ್ರಿಕ್, ಹೈಬ್ರಿಡ್ ಮತ್ತು ಎಂಜಿನ್ ಮೋಡ್‌ಗಳ ನಡುವೆ ಸ್ವಯಂಚಾಲಿತವಾಗಿ ಬದಲಾಗುವ ವ್ಯವಸ್ಥೆ ಇದರ ವಿಶೇಷತೆ. ಜೊತೆಗೆ ಸ್ಪೋರ್ಟ್, ನಾರ್ಮಲ್ ಮತ್ತು ಇಕೊ ಡ್ರೈವಿಂಗ್ ಮೋಡ್‌ಗಳ ಆಯ್ಕೆಯೂ ಇದೆ.

ಹೊರಾಂಗಣದಲ್ಲೇ ವಿಭಿನ್ನತೆ

ಝಡ್ಆರ್-ವಿ ವಿನ್ಯಾಸದಲ್ಲಿ ಸ್ಪೋರ್ಟಿನೆಸ್ ಮತ್ತು ಪ್ರೀಮಿಯಂ ಲುಕ್ ಎರಡಕ್ಕೂ ಒತ್ತು ನೀಡಲಾಗಿದೆ. ಫುಲ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಸಿಕ್ವೆನ್ಷಿಯಲ್ ಟರ್ನ್ ಇಂಡಿಕೇಟರ್‌ಗಳು, 18 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಸ್, ಡ್ಯುಯಲ್ ಎಕ್ಸಾಸ್ಟ್ ಫಿನಿಷರ್ ಹಾಗೂ ವಿಶಿಷ್ಟ ಹಿಂಬದಿ ವಿನ್ಯಾಸ ವಾಹನಕ್ಕೆ ರಸ್ತೆ ಮೇಲೆ ವಿಭಿನ್ನ ಗುರುತನ್ನು ನೀಡುತ್ತವೆ.

4567 ಮಿ.ಮೀ. ಉದ್ದ, 1840 ಮಿ.ಮೀ. ಅಗಲ ಮತ್ತು 2655 ಮಿ.ಮೀ. ವೀಲ್‌ಬೇಸ್ ಹೊಂದಿರುವ ಈ ಎಸ್‌ಯುವಿ ಗಾತ್ರದಲ್ಲೂ ಗಮನಾರ್ಹವಾಗಿದೆ.

ಒಳಾಂಗಣದಲ್ಲೂ ಪ್ರೀಮಿಯಂ ಸ್ಪರ್ಶ

ಆಲ್-ಬ್ಲ್ಯಾಕ್ ಸ್ಪೋರ್ಟಿ ಕ್ಯಾಬಿನ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ಲೆದರ್ ಸೀಟುಗಳು, ಪ್ರೀಮಿಯಂ ಮೆಟಾಲಿಕ್ ಫಿನಿಶ್ ಹಾಗೂ ವಿಶಾಲವಾದ ಡ್ಯಾಶ್‌ಬೋರ್ಡ್ ವಿನ್ಯಾಸ ಪ್ರಯಾಣಿಕರಿಗೆ ಐಷಾರಾಮಿ ಅನುಭವ ನೀಡುತ್ತವೆ.

9 ಇಂಚಿನ ಟಚ್‌ಸ್ಕ್ರೀನ್ ಇನ್ಫೊಟೈನ್‌ಮೆಂಟ್ ಸಿಸ್ಟಮ್, ವೈರ್ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೊ, 12 ಸ್ಪೀಕರ್‌ಗಳ ಬೋಸ್ ಸೌಂಡ್ ಸಿಸ್ಟಮ್ ಹಾಗೂ 10.2 ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ತಂತ್ರಜ್ಞಾನದ ಪ್ರಮುಖ ಆಕರ್ಷಣೆಗಳಾಗಿವೆ.

ಪ್ರಯಾಣಿಕರ ಅನುಕೂಲಕ್ಕೆ ಒತ್ತು

ಹ್ಯಾಂಡ್ಸ್-ಫ್ರೀ ಪವರ್ ಟೇಲ್‌ಗೇಟ್, ಪವರ್ ಅಡ್ಜಸ್ಟಬಲ್ ಸೀಟುಗಳು, ವೈರ್‌ಲೆಸ್ ಚಾರ್ಜಿಂಗ್, ಹಿಂಬದಿ ಎಸಿ ವೆಂಟ್‌ಗಳು ಹಾಗೂ 1313 ಲೀಟರ್ ಸಾಮರ್ಥ್ಯದ ವಿಶಾಲ ಕಾರ್ಗೊ ಸ್ಪೇಸ್ ಕುಟುಂಬ ಪ್ರಯಾಣಗಳನ್ನು ಹೆಚ್ಚು ಅನುಕೂಲಕರವಾಗಿಸುತ್ತದೆ.

60:40 ಅನುಪಾತದಲ್ಲಿ ಮಡಚಬಹುದಾದ ಹಿಂಬದಿ ಸೀಟುಗಳು ಹೆಚ್ಚಿನ ಲಗೇಜ್ ಸಾಗಿಸಲು ನೆರವಾಗುತ್ತವೆ.

ಸುರಕ್ಷತೆಯಲ್ಲಿ ರಾಜಿ ಇಲ್ಲ

ಝಡ್ಆರ್-ವಿಯಲ್ಲಿ ಹೊಂಡಾ ಸೆನ್ಸಿಂಗ್ ಸುರಕ್ಷತಾ ತಂತ್ರಜ್ಞಾನ ಅಳವಡಿಸಲಾಗಿದೆ. ಕೊಲಿಷನ್ ಮಿಟಿಗೇಷನ್ ಬ್ರೇಕಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪಿಂಗ್ ಅಸಿಸ್ಟ್, ರೋಡ್ ಡಿಪಾರ್ಚರ್ ಮಿಟಿಗೇಷನ್ ಸೇರಿದಂತೆ ಹಲವು ಚಾಲಕ ಸಹಾಯಕ ವ್ಯವಸ್ಥೆಗಳು ಲಭ್ಯವಿವೆ.

ಇದರ ಜೊತೆಗೆ ಆರು ಏರ್‌ಬ್ಯಾಗ್‌ಗಳು, 360 ಡಿಗ್ರಿ ಕ್ಯಾಮೆರಾ, ಡ್ರೈವರ್ ಅಟೆನ್ಷನ್ ಮಾನಿಟರ್, ಹಿಲ್ ಡಿಸೆಂಟ್ ಕಂಟ್ರೋಲ್, ವೆಹಿಕಲ್ ಸ್ಟೆಬಿಲಿಟಿ ಅಸಿಸ್ಟ್ ಮತ್ತು ನಾಲ್ಕು ಚಕ್ರಗಳಲ್ಲೂ ಡಿಸ್ಕ್ ಬ್ರೇಕ್ ವ್ಯವಸ್ಥೆ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ.

ಬುಕಿಂಗ್ ಆರಂಭ

ಜಪಾನ್‌ನಿಂದ ಸಂಪೂರ್ಣ ನಿರ್ಮಿತ (CBU) ಮಾದರಿಯಾಗಿ ಭಾರತಕ್ಕೆ ಆಮದು ಮಾಡಲಾಗುತ್ತಿರುವ ಝಡ್ಆರ್-ವಿಗೆ ದೇಶದಾದ್ಯಂತ ಹೊಂಡಾ ಡೀಲರ್‌ಶಿಪ್‌ಗಳಲ್ಲಿ ಬುಕ್ಕಿಂಗ್ ಆರಂಭವಾಗಿದೆ. ಗ್ರಾಹಕರಿಗೆ ವಾಹನ ವಿತರಣೆ 2026ರ ಜುಲೈ ತಿಂಗಳಿಂದ ಆರಂಭವಾಗಲಿದೆ.

ಕಂಪನಿಯು ಮೂರು ವರ್ಷದ ಅನಿಯಮಿತ ಕಿಲೋಮೀಟರ್ ವಾರಂಟಿ, ಏಳು ವರ್ಷದ ವಿಸ್ತರಿತ ವಾರಂಟಿ ಹಾಗೂ ಹೈಬ್ರಿಡ್ ಬ್ಯಾಟರಿಗೆ ಎಂಟು ವರ್ಷದ ವಿಶೇಷ ವಾರಂಟಿಯನ್ನೂ ಘೋಷಿಸಿದೆ.

Honda ZR-V ಬೆಲೆ ಎಷ್ಟು?
ಕಂಪನಿಯು ಇನ್ನೂ ಅಧಿಕೃತ ಬೆಲೆಯನ್ನು ಪ್ರಕಟಿಸಿಲ್ಲ. ಬುಕ್ಕಿಂಗ್ ಆರಂಭವಾಗಿದೆ.

Honda ZR-V ಮೈಲೇಜ್ ಎಷ್ಟು?
ಕಂಪನಿಯ ಪ್ರಕಾರ 22.79 ಕಿ.ಮೀ./ಲೀ. ಮೈಲೇಜ್ ನೀಡುತ್ತದೆ.

Honda ZR-V ಯಾವ ಎಂಜಿನ್ ಹೊಂದಿದೆ?
2.0 ಲೀಟರ್ e:HEV ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್.

ಹೊಸ Honda City ಬೆಲೆ ಎಷ್ಟು?
₹11.99 ಲಕ್ಷದಿಂದ ₹20.99 ಲಕ್ಷ (ಎಕ್ಸ್ ಶೋರೂಂ, ದೆಹಲಿ).

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ