Explainer | BH ನೋಂದಣಿ ಲಾಭವೇ? ಯಾರಿಗೆ? ಹೇಗೆ? ಒಂದು ಡೀಟೇಲ್ ರಿಪೋರ್ಟ್
ರಸ್ತೆಯಲ್ಲಿ ಇತ್ತೀಚೆಗೆ BH ನೋಂದಣಿಯ ಕಾರು ಹಾಗೂ ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಬಹಳಷ್ಟು ಜನ ತೆರಿಗೆ ಉಳಿತಾಯಕ್ಕಾಗಿ BH ನೋಂದಣಿ ಲಾಭದಾಯಕ ಎಂದೆನ್ನುತ್ತಾರೆ. ಇನ್ನೂ ಕೆಲವರು…
Kannada 1st Auto News Portal
ರಸ್ತೆಯಲ್ಲಿ ಇತ್ತೀಚೆಗೆ BH ನೋಂದಣಿಯ ಕಾರು ಹಾಗೂ ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಬಹಳಷ್ಟು ಜನ ತೆರಿಗೆ ಉಳಿತಾಯಕ್ಕಾಗಿ BH ನೋಂದಣಿ ಲಾಭದಾಯಕ ಎಂದೆನ್ನುತ್ತಾರೆ. ಇನ್ನೂ ಕೆಲವರು…
ಕಾಲಕಾಲಕ್ಕೆ ಸ್ಪಾರ್ಕ್‌ಪ್ಲಗ್‌ಗಳ ಬದಲಾವಣೆ, ಟೈರ್‌ಗಳಿಗೆ ಸೂಕ್ತ ಪ್ರಷರ್ ಸೇರಿದಂತೆ ನಿಮ್ಮ ಬಳಿ ಇರುವ ಕಾರು, ಎಸ್‌ಯುವಿ ಅಥವಾ ಟ್ರಕ್‌ಗಳ ಉತ್ತಮ ನಿರ್ವಹಣೆಗೆ ಮತ್ತು ದೀರ್ಘ ಕಾಲ ಬಾಳಿಕೆಗೆ…
ದುಂಡುಮೊಗದ ಸುಂದರ ಹ್ಯಾಚ್‌ಬ್ಯಾಕ್ ಸ್ವಿಫ್ಟ್ ಭಾರತದ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ ಪುಟ್ಟ ಕಾರು. ರಸ್ತೆಯಲ್ಲಿ ಅದು ಸಾಗುತ್ತಿದ್ದರೆ ಅದರ ನೋಟಕ್ಕೆ ಮನಸೋಲದವರೇ ಇಲ್ಲ. ಈಗಲೂ ಬಹುತೇಕರ ಅಚ್ಚುಮೆಚ್ಚಿನ…
ಮಾಲಿನ್ಯ ನಿಯಂತ್ರಿಸಲು ಸರ್ಕಾರದ ಕಠಿಣ ಕ್ರಮದ ಪರಿಣಾಮ ಬಹುತೇಕ ಕಾರು ತಯಾರಿಕಾ ಕಂಪನಿಗಳು ಪೆಟ್ರೋಲ್ ಕಾರುಗಳತ್ತ ಮುಖ ಮಾಡಿದ್ದಾರೆ. ಆದರೆ ಈಗಲೂ ಭಾರತದಲ್ಲಿ ಡೀಸೆಲ್ ಕಾರುಗಳಿಗೆ ಹೆಚ್ಚಿನ…
ಟಿಗ್ವಾನ್ ಆರ್–ಲೈನ್ ಅನ್ನು ಪರಿಚಯಿಸಿದ ಕೆಲವೇ ತಿಂಗಳುಗಳಲ್ಲಿ ಜರ್ಮನಿಯ ಫೋಕ್ಸ್‌ವ್ಯಾಗನ್ ಕಂಪನಿಯು ಮೂರು ಸಾಲಿನ ಆಸನಗಳುಳ್ಳ ಎಸ್‌ಯುವಿ ಪರಿಚಯಿಸಲು ಸಿದ್ಧತೆ ನಡೆಸಿದೆ. ಟೈರನ್ ಎಂಬ ಹೆಸರಿನ ಈ…
ವರ್ಷದಿಂದ ವರ್ಷಕ್ಕೆ ಬಿಸಿಲ ಝಳ ಏರುತ್ತಲೇ ಸಾಗುತ್ತಿದೆ. ಇದರಿಂದ ತ್ವಚೆಯ ಜತೆಗೆ ಜೀವ ರಕ್ಷಣೆಯೂ ಅತ್ಯಗತ್ಯ. ಇದರೊಂದಿಗೆ ನಾವು ಹೆಚ್ಚಾಗಿ ಪ್ರೀತಿಸುವ ನಮ್ಮ ಬೈಕ್, ಸ್ಕೂಟರ್‌ಗಳನ್ನೂ ಬಿಸಿಲಿನ…
ವಾಯು ಮಾಲಿನ್ಯ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವ ಡೀಸೆಲ್ ಎಕ್ಸಾಸ್ಟ್ ಫ್ಲೂಯಿಡ್ ಅನ್ನು ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ (ಎಚ್‌ಪಿಸಿಎಲ್) ಹಾಗೂ ಟಾಟಾ ಮೋಟರ್ಸ್ ಅಭಿವೃದ್ಧಿಪಡಿಸಿವೆ. ಡೀಸೆಲ್ ವಾಹನಗಳಲ್ಲಿ…
ಬೆಂಗಳೂರು ಸೇರಿ ದೇಶದ 50ಕ್ಕೂ ಹೆಚ್ಚು ನಗರಗಳಲ್ಲಿ ವಾಣಿಜ್ಯ ವಾಹನಗಳಿಗಾಗಿ 250 ಹೊಸ ವಿದ್ಯುತ್‌ಚಾಲಿತ ಚಾರ್ಜಿಂಗ್ ಕೇಂದ್ರ ತೆರೆಯಲು ಟಾಟಾ ಮೋಟರ್ಸ್ ನಿರ್ಧರಿಸಿದೆ. ಅತಿವೇಗದ ಚಾರ್ಜಿಂಗ್ ಕೇಂದ್ರಗಳ…
ಈ ಹಬ್ಬದ ಋತುವಿನಲ್ಲಿ ದೇಶೀಯ ವಿಮಾನ ಟಿಕೆಟ್ ದರದಲ್ಲಿ ಸಾಕಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಟ್ರಾವೆಲ್ ಪೋರ್ಟಲ್ ಇಕ್ಸಿಗೊ ತಿಳಿಸಿದೆ. ದೀಪಾವಳಿಗೆ ಏಕಮುಖ ಸಂಚಾರ ದರದಲ್ಲಿ ಶೇ…
ನಿಸ್ಸಾನ್ ಮೋಟಾರ್ ಇಂಡಿಯಾ ಕಂಪನಿಯು ಆಗಸ್ಟ್ 31ರವರೆಗೆ ತನ್ನ ಗ್ರಾಹಕರಿಗೆ ಮಳೆಗಾಲದ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಿದೆ. ಭಾರತದಲ್ಲಿರುವ ನಿಸ್ಸಾನ್ ನ ಎಲ್ಲಾ ಅಧಿಕೃತ ವರ್ಕ್ ಶಾಪ್ ಗಳಲ್ಲಿ ಈ ಉಚಿತ ತಪಾಸಣೆ ಶಿಬಿರ ನಡೆಯಲಿದೆ. ಮಳೆಗಾಲದಲ್ಲಿ ನಿಸ್ಸಾನ್ ಗ್ರಾಹಕರು ಸುರಕ್ಷಿತವಾಗಿ ವಾಹನ ಚಾಲನೆ ಮಾಡುವ ಉದ್ದೇಶ ಕಂಪನಿಗಿದೆ. ಉಚಿತ ಬ್ಯಾಟರಿ ತಪಾಸಣೆ, ಸಂಪೂರ್ಣ ಬಾಹ್ಯ ಮತ್ತು ಆಂತರಿಕ ತಪಾಸಣೆ, ಕೆಳಭಾಗದ ತಪಾಸಣೆ ಮತ್ತು ರೋಡ್ ಟೆಸ್ಟ್ ಸೇರಿದಂತೆ 30-ಪಾಯಿಂಟ್ ಚೆಕ್ಅಪ್ ಅನ್ನು ಈ ಶಿಬಿರದಲ್ಲಿ ಮಾಡಲಾಗುತ್ತದೆ. ಜೊತೆಗೆ ವಿಶೇಷವಾಗಿ ಉಚಿತ ಟಾಪ್ ವಾಶ್ ಸೌಲಭ್ಯ ದೊರೆಯಲಿದೆ. ಈ ಯೋಜನೆಯ ಭಾಗವಾಗಿ ಬ್ರೇಕ್ ಪ್ಯಾಡ್ ಬದಲಾವಣೆ ಸೇರಿದಂತೆ ಲೇಬರ್ ಶುಲ್ಕಗಳ ಮೇಲೆ ಶೇ 10ರಷ್ಟು ರಿಯಾಯಿತಿ ನೀಡಲಾಗುತ್ತದೆ. ಅಂಡರ್ ಬಾಡಿ ಕೋಟಿಂಗ್, ರೊಡೆಂಟ್ ರಿಪೆಲ್ಲೆಂಟ್, ಎ.ಸಿ. ಡಿಸ್‌ಇನ್ಫೆಕ್ಷನ್ ಇತ್ಯಾದಿಗಳಂತಹ ವಿಎಎಸ್ ಸರ್ವೀಸ್‌ಗಳ ಮೇಲೆಯೂ ಶೇ 10ರಷ್ಟು ರಿಯಾಯಿತಿ ದೊರೆಯಲಿದೆ. ನಿಸ್ಸಾನ್ ಒನ್ ಆಪ್ ಅಥವಾ ನಿಸ್ಸಾನ್ ಇಂಡಿಯಾ ವೆಬ್‌ಸೈಟ್ ಮೂಲಕ ಗ್ರಾಹಕರು ಅಪಾಯಿಂಟ್ಮೆಂಟ್ ಕಾಯ್ದಿರಿಸಬಹುದು. ಈ ಕುರಿತು ನಿಸ್ಸಾನ್ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೌರಭ್ ವತ್ಸ, ‘ಗ್ರಾಹಕರು ಮಳೆಗಾಲದಲ್ಲಿ ಸುರಕ್ಷಿತವಾಗಿ ವಾಹನ ಚಲಾಯಿಸುವಂತೆ ಮಾಡುವುದೇ ಈ ನಮ್ಮ ಉಚಿತ ತಪಾಸಣಾ ಶಿಬಿರದ ಉದ್ದೇಶವಾಗಿದೆ. ಗ್ರಾಹಕರು ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು‘ ಎಂದು ಹೇಳಿದರು. ಹೆಚ್ಚಿನ ಮಾಹಿತಿಗೆ ಭೇಟಿ ಕೊಡಿ- www.nissan.in