Nissan Gravite: ಭಾರತದ ಮಾರುಕಟ್ಟೆಗೆ ಜಪಾನ್‌ನ ಮತ್ತೊಂದು MPV

Nissan Gravite

ಭಾರತದ ಕಾರು ಮಾರುಕಟ್ಟೆಗೆ 2026ರಲ್ಲಿ ಮತ್ತೊಂದು ಹೊಸ ಎಂಪಿವಿ ಸೇರ್ಪಡೆಯಾಗಲಿದೆ. ಈ ಬಾರಿ ಜಪಾನ್‌ನ ನಿಸ್ಸಾನ್‌ ಕಂಪನಿಯು ಹೊಸ ಮಾದರಿಯ ಕಾರನ್ನು ಈ ಬಾರಿ ಬಿಡುಗಡೆ ಮಾಡುತ್ತಿದ್ದು, ಇದಕ್ಕೆ ‘ಗ್ರಾವಿಟೆ’ ಎಂದು ಹೆಸರಿಟ್ಟಿದೆ.

2026ರ ಜನವರಿಯಲ್ಲಿ ಈ ಕಾರು ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಆದರೆ ಮಳಿಗೆಗೆ ಬರುವುದು 2026ರ ಮಾರ್ಚ್‌ನಲ್ಲಿ. ಇದರೊಂದಿಗೆ ಟೆಕ್ಟಾನ್‌ ಎಸ್‌ಯುವಿಯನ್ನೂ ನಿಸ್ಸಾನ್ ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ. ಇದರ ನಂತರದಲ್ಲಿ ಅಂದರೆ 2027ರಲ್ಲಿ ಏಳು ಆಸನಗಳ ಎಸ್‌ಯುವಿಯನ್ನು ನಿಸ್ಸಾನ್ ಬಿಡುಗಡೆ ಮಾಡುತ್ತಿದೆ.

ಈಗಾಗಲೇ ಮ್ಯಾಗ್ನೈಟ್ ಮೂಲಕ ನಿಸ್ಸಾನ್ ಭಾರತದಲ್ಲಿ ಚಿರಪರಿಚಿತ ಬ್ರಾಂಡ್ ಆಗಿದೆ. ಇದೀಗ ಒಂದರ ಹಿಂದೆ ಒಂದರಂತೆ ಹಲವು ಮಾದರಿಯ ಕಾರುಗಳನ್ನು ಕಂಪನಿ ಪರಿಚಯಿಸುತ್ತಿದೆ. ಆ ಮೂಲಕ ಬೆಳೆಯುತ್ತಿರುವ ಭಾರತದ ಕಾರು ಮಾರುಕಟ್ಟೆಯಲ್ಲೂ ತನ್ನ ಛಾಪನ್ನು ಮೂಡಿಸುವ ಯತ್ನವನ್ನು ಮಾಡುತ್ತಿದೆ.

ಸಂಪೂರ್ಣ ಕಾರಿನ ಮಾದರಿಯನ್ನೂ ನಿಸ್ಸಾನ್ ಈವರೆಗೂ ಬಿಡುಗಡೆ ಮಾಡಿಲ್ಲ. ಆದರೆ ಅದರ ಒಂದಷ್ಟು ಇಣುಕು ನೋಟಗಳು ಸಾಮಾಜಿಕ ಮಾಧ್ಯಮಗಳಲ್ಲಿ ಲಭ್ಯವಾಗಿವೆ. ಅವುಗಳನ್ನು ಅವಲೋಕಿಸಿದರೆ ಗ್ರಾವಿಟೆದು ಹೊಸ ರೀತಿಯ ವಿನ್ಯಾಸ. ಹೊಸ ರೂಪ, ನವೀನ ಮಾದರಿಯ ಗ್ರಿಲ್‌, ನಿಸ್ಸಾನ್ ಬ್ಯಾಡ್ಜ್‌ ಹೀಗೆ ಹೊರನೋಟದಲ್ಲೆ ಹೊಸತನವನ್ನು ಕಾಣಬಹುದಾಗಿದೆ. ಬಾನೆಟ್‌ ಕೂಡಾ ವಿಭಿನ್ನವಾಗಿದೆ. ನೋಡಲು ಕಟುಮಸ್ತಾಗಿರುವಂತೆ ಕಾಣುತ್ತದೆ.

ಒಂದು ಭಾಗದಿಂದ ನೋಡಿದರೆ ಟ್ರೈಬರ್‌ ಹೋಲುವಂತಿದೆ. ಅಲಾಯ್ ವೀಲ್, ರೂಫ್‌ ರೈಲ್, ಹಿಂಬದಿಯಲ್ಲೂ ಹೊಸ ಬಗೆಯ ವಿನ್ಯಾಸವನ್ನು ಕಾಣಬಹುದಾಗಿದೆ. 2026ರ ಜನವರಿಯಲ್ಲಿ ನಿಸ್ಸಾನ್ ಗ್ರಾವಿಟೆಯ ಸಂಪೂರ್ಣ ನೋಟ ನೋಡುವ ಸಲುವಾಗಿ ಕಾರು ಪ್ರಿಯರು ಕಾದಿದ್ದಾರೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ