Mahindra XEV 9S:  ಭಾರತದ ಮೊದಲ ಗ್ರೌಂಡ್‌ ಅಪ್‌ ಎಲೆಕ್ಟ್ರಿಕ್‌ SUV

Mahindra XEV 9S

ಮಹೀಂದ್ರಾ ಕಂಪನಿಯು ಎಕ್ಸ್‌ಇವಿ 9ಎಸ್‌ ಎಂಬ ಬ್ಯಾಟರಿ ಚಾಲಿತ ಕಾರನ್ನು ಬಿಡುಗಡೆ ಮಾಡಿದೆ. ಹಲವು ವಿಶೇಷಗಳನ್ನು ಹೊಂದಿರುವ ಈ ಕಾರು ಭಾರತದ ಮೊದಲ 7 ಆಸನಗಳ ಗ್ರೌಂಡ್‌ ಅಪ್‌ ಎಲೆಕ್ಟ್ರಿಕ್‌  ಎಸ್‌ಯುವಿ ಎಂಬುದು.

ಈ ಕಾರನ್ನು INGLO ವಿನ್ಯಾಸಗೊಳಿಸಿದೆ. ಇವಿ ಕಾರುಗಳಲ್ಲಿ ಹೊಸ ಮಾದರಿ ಇದಾಗಿದೆ. ಹಲವು ತಿಂಗಳುಗಳಿಂದ ಇದರ ವಿಡಿಯೊಗಳು ಹರಿದಾಡುತ್ತಿದ್ದವು. ಇದೀಗ ಈ ಕಾರು ಬಿಡುಗಡೆಯಾಗಿದೆ. 2026ರ ಜ. 14ಕ್ಕೆ XEV 9S ಬುಕ್ಕಿಂಗ್ ಆರಂಭವಾಗಲಿದೆ. ಜ. 23ರಿಂದ ಈ ಕಾರು ಗ್ರಾಹಕರ ಕೈಸೇರಲಿದೆ.

ಈ ಕಾರು 59 kWh, 70 kWh ಮತ್ತು 79 kWh ಬ್ಯಾಟರಿ ಆಯ್ಕೆಗಳೊಂದಿಗೆ ಲಭ್ಯ. ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯವಿದ್ದು, 20 ನಿಮಿಷಗಳಲ್ಲಿ ಶೇ 20ರಿಂದ ಶೇ 80ರಷ್ಟು ಚಾರ್ಜ್‌ ಆಗಲಿದೆ.

ಎಕ್ಸ್‌ಇವಿ 9ಎಸ್‌ ಕಾರನ್ನು ಹಲವು ವೇರಿಯಂಟ್‌ಗಲ್ಲಿ ಮಹೀಂದ್ರ ಪರಿಚಯಿಸುತ್ತಿದೆ.

Pack One Above (ಬೇಸಿಕ್‌)

  • ಪ್ಯಾನೋರಾಮಿಕ್ ಸ್ಕೈರೂಫ್, ದೀಪದ ಲೋಗೋ, Bi-LED ಹೆಡ್‌ಲ್ಯಾಂಪ್‌ಗಳು
  • Qualcomm Snapdragon 8155 ಚಿಪ್‌ಸೆಟ್
  • ವೈರ್‌ಲೆಸ್ Android Auto/Apple CarPlay
  • Amazon Alexa ಇಂಟಿಗ್ರೇಷನ್, Me4U ಆಪ್ ಮೂಲಕ ಕನೆಕ್ಟೆಡ್ ಫೀಚರ್‌ಗಳು
  • 150 ಲೀಟರ್ ಫ್ರಂಕ್ + 527 ಲೀಟರ್ ಟ್ರಂಕ್

Pack Two (ಮಧ್ಯಮ ಮಟ್ಟ)

  • ADAS Level 2 (ರಡಾರ್ + ಕ್ಯಾಮೆರಾ)
  • 360° ಕ್ಯಾಮೆರಾ, ಬ್ಲೈಂಡ್ ವ್ಯೂ ಮಾನಿಟರ್, ಫ್ರಂಟ್ ಪಾರ್ಕಿಂಗ್ ಸೆನ್ಸರ್‌ಗಳು
  • Harman/Kardon 16-ಸ್ಪೀಕರ್ ಸಿಸ್ಟಮ್, Dolby Atmos
  • ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ವೈರ್‌ಲೆಸ್ ಚಾರ್ಜಿಂಗ್, NFC ಕೀ

Pack Three (ಪ್ರೀಮಿಯಂ)

  • ADAS Level 2+ (5 ರಡಾರ್‌ಗಳು, ಲೇನ್ ಸೆಂಟರಿಂಗ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್)
  • 7 ಏರ್‌ಬ್ಯಾಗ್‌ಗಳು (ಡ್ರೈವರ್ ನೀ ಏರ್‌ಬ್ಯಾಗ್ ಸೇರಿ)
  • 16M ಬಣ್ಣಗಳ ಅಂಬಿಯಂಟ್ ಲೈಟಿಂಗ್, ಲ್ಯಾಮಿನೇಟೆಡ್ ಅಕೌಸ್ಟಿಕ್ ಗ್ಲಾಸ್
  • ವೆಂಟಿಲೇಟೆಡ್ 2ನೇ ಸಾಲಿನ ಸೀಟುಗಳು, ಫ್ಲಷ್ ಡೋರ್ ಹ್ಯಾಂಡಲ್‌ಗಳು

 Pack Three (ಟಾಪ್-ಎಂಡ್)

  • Qualcomm Snapdragon 8295 ಚಿಪ್‌ಸೆಟ್ (24 GB RAM, 128 GB ಸ್ಟೋರೇಜ್)
  • AutoPark Assist, AR HUD (VisionX)
  • ವೀಡಿಯೋ ಕಾಲಿಂಗ್ & ರೆಕಾರ್ಡಿಂಗ್
  • Secure360 ಲೈವ್ ವ್ಯೂ & ರೆಕಾರ್ಡಿಂಗ್

ಮಹೀಂದ್ರಾ XEV 9S ಭಾರತೀಯ EV ಮಾರುಕಟ್ಟೆಗೆ ಹೊಸ ಮಾದರಿಯನ್ನು ಪರಿಚಯಿಸುತ್ತಿದೆ. ವೇಗದ ಚಾರ್ಜಿಂಗ್, ಪ್ರೀಮಿಯಂ ಇಂಟೀರಿಯರ್, ಅಡ್ವಾನ್ಸ್ಡ್ ADAS ಮತ್ತು ಕನೆಕ್ಟೆಡ್ ಟೆಕ್—all-in-one SUV.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ