ಆಟೊಮ್ಯಾಟಿಕ್ ಕಾರು ಚಾಲನೆಗೂ ಮುನ್ನ ಇದನ್ನು ಅರಿಯಿರಿ: ಜೇಬಿಗೆ ಆಗುವ ಹೊರೆ ತಪ್ಪಿಸಿ

Automatic gear and push button start

ಕಾರು ಚಾಲನೆ ಸುಲಭವಾಗಿರಬೇಕು. ಆರಾಮದಾಯಕವಾಗಿರಬೇಕು. ಲಕ್ಷುರಿಯಾಗಿರಬೇಕು ಎಂಬಿತ್ಯಾದಿ ಬೇಡಿಕೆಗಳು ಇಂದಿನ ಕಾರು ಪ್ರಿಯರ ಬೇಡಿಕೆ.

ಆದರೆ, ಆಟೊಮ್ಯಾಟಿಕ್ ಕಾರು ಅದರಲ್ಲೂ ಹೈಎಂಡ್‌ ಕಾರು ಖರೀದಿಸಿದವರು ಕೆಲವೊಂದು ತಪ್ಪು ಮಾಡಲೇಬಾರದು.

ಸಾಮಾನ್ಯವಾಗಿ ಕಾರು ಚಾಲನೆಗೂ ಮುನ್ನ ಪಾರ್ಕಿಂಗ್‌ನಲ್ಲಿರುವ ಗೇರ್‌ (P) ಅನ್ನು ಡ್ರೈವಿಂಗ್‌ (D) ಮೋಡ್‌ಗೆ ಒಂದೇ ಬಾರಿಗೆ ಎಳೆದು ಕಾರು ಚಾಲನೆ ಮಾಡುವ ಅಭ್ಯಾಸವನ್ನು ಕೆಲವರು ರೂಢಿಸಿಕೊಂಡಿರುತ್ತಾರೆ. ಆದರೆ ಹೀಗೆ ಮಾಡುವುದರಿಂದ ಪಾರ್ಕಿಂಗ್‌ ಪೌಲ್‌ ಎಂದೇ ಕರೆಯಲಾಗುವ ಗೇರ್‌ ಹುಕ್‌ ಮುರಿಯಲಾರಂಭಿಸುತ್ತದೆ. ಇದು ಮುರಿದರೆ ಸುಮಾರು ₹80 ಸಾವಿರ ವರೆಗೂ ಖರ್ಚು ಕಟ್ಟಿಟ್ಟ ಬುತ್ತಿ.

ಹೀಗಾಗಬಾರದೆಂದರೆ ಏನು ಮಾಡಬೇಕು?

ಪಾರ್ಕಿಂಗ್‌ (P) ನಿಂದ ಡ್ರೈವಿಂಗ್ (D) ಮೋಡ್‌ಗೆ ತರುವ ಮೊದಲು ನ್ಯೂಟ್ರಲ್‌ (N) ಮೋಡ್‌ಗೆ ತರುವುದು ಕಡ್ಡಾಯ. ಹೀಗೆ ಮಾಡುವುದರಿಂದ ಗೇರ್ ಹುಕ್‌ ಆಗಿರುವ ಪಾರ್ಕಿಂಗ್ ಪೌಲ್‌ ಮುರಿಯದಂತೆ ಎಚ್ಚರವಹಿಸುವುದು ಅಗತ್ಯ. ಇದರಿಂದ ಜೇಬಿಗೆ ಎದುರಾಗಬಹುದಾದ ಹೊರೆ ತಪ್ಪಿಸಬಹುದು.

ಸರಿಯಾಗಿ ಬಳಸಿ ಪುಷ್‌ ಸ್ಟಾರ್ಟ್‌ ಬಟನ್‌

ಪುಷ್ ಬಟನ್‌ ಸ್ಟಾರ್ಟ್‌ ಬಳಸವುದೂ ಒಂದು ಕಲೆ. ಸರಿಯಾಗಿ ಬಳಸದಿದ್ದರೆ ಇದೂ ದುಬಾರಿ ಖರ್ಚಿಗೆ ಕಾರಣವಾಗಬಹುದು.

ಕಾರು ಚಾಲನೆಗೆ ಮುನ್ನ ಪುಷ್‌ ಸ್ಟಾರ್ಟ್ ಬಟನ್‌ ಒತ್ತುವ ಮೊದಲು ಅದಕ್ಕೆ ಮೂರು ಹಂತಗಳಿವೆ ಎಂಬುದನ್ನು ಅರಿಯುವುದು ಮುಖ್ಯ.

ಮೊದಲನೆಯ ಬಾರಿಗೆ ಒತ್ತಿದಾಗ ಎಲ್ಲಾ ಇನ್ಫೊಟೈನ್ಮೆಂಟ್‌ ಸಾಧನಗಳು ಕಾರ್ಯಾರಂಭ ಮಾಡುತ್ತವೆ. 2ನೇ ಬಾರಿ ಒತ್ತಿದಾಗ ಸ್ಪೀಡೊಮೀಟರ್‌ ಕೆಲಸ ಮಾಡಲಾರಂಭಿಸುತ್ತದೆ. ಮೂರನೇ ಬಾರಿ ಬ್ರೇಕ್‌ ಒತ್ತಿ ಪುಷ್‌ ಬಟನ್ ಒತ್ತಿದಾಗ ಎಂಜಿನ್‌ ಆನ್ ಆಗುತ್ತದೆ.

ಆದರೆ ಕೆಲವರಿಗೆ ದಾವಂತ. ಕಾರಿನೊಳಗೆ ಕೂರುತ್ತಿದ್ದಂತೆ ಬ್ರೇಕ್‌ ಒತ್ತಿ ಪುಷ್‌ ಬಟನ್‌ ಒತ್ತುತ್ತಾರೆ. ಇದರಿಂದ ಕಾರಿನ ಎಲೆಕ್ಟ್ರಿಕಲ್‌ ಸಾಧನಗಳು ಬೇಗನೆ ಹಾಳಾಗಲಿದೆ. ಇದನ್ನು ತಪ್ಪಿಸಬೇಕೆಂದರೆ ಸಾವಧಾನವಾಗಿ ಮೂರು ಬಾರಿ ಹಂತ ಹಂತವಾಗಿ ಪುಷ್‌ ಬಟನ್ ಒತ್ತುವುದು ಲೇಸು.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ