ಮೆಚ್ಚಿನ ಕಾರು ಖರೀದಿಸಿ, ಅದಕ್ಕೊಂದು ಹೊದಿಕೆ, ಸ್ಕ್ರಾಚ್ ಆಗದಂತೆ ಪಾಲಿಶ್, ಬಂಪರ್ ಹೀಗೆ ಏನೇ ಹಾಕಿಸಿದರೂ ಇಲಿಗಳ ದಾಳಿಯಿಂದ ಕಾರು ರಕ್ಷಿಸಿಕೊಳ್ಳುವುದು ಸುಲಭದ ಮಾತಲ್ಲ.
ಇದು ಇಲಿಗಷ್ಟೇ ಸೀಮಿತವಲ್ಲ. ಮುಂಗುಸಿ, ಅಳಿಲುಗಳಂತ ಸಣ್ಣ ಪ್ರಾಣಿಗಳು ಕಾರಿನೊಳಗೆ ಪ್ರವೇಶಿಸಿದರೆ ಅದರ ಪರಿಣಾಮ ದೊಡ್ಡದೇ ಆಗಿರುತ್ತದೆ. ರಬ್ಬರ್, ಪೈಪ್, ತಂತಿಗಳನ್ನು ಕಚ್ಚುವುದು, ಏರ್‌ಫಿಲ್ಟರ್‌ಗಳಲ್ಲಿ ಗೂಡು ಕಟ್ಟುವುದು, ಪ್ಲಾಸ್ಟಿಕ್ ಭಾಗಗಳನ್ನು ಹಾಳು ಮಾಡುವುದು ಹೀಗೆ ಪಟ್ಟಿ ಮಾಡುತ್ತಾ ಹೋದರೆ ಅದು ಬೆಳೆಯುತ್ತಲೇ ಸಾಗುತ್ತದೆ. ಕಾರುಗಳನ್ನು ಇಲಿಗಳಿಂದ ರಕ್ಷಿಸಿಕೊಳ್ಳಲು ಕೆಲವು ಸರಳ ಮಾರ್ಗೋಪಾಯಗಳನ್ನು ಅನುಸರಿಸಬಹುದು.
ಕಾರುಗಳೆಂದರೆ ಇಲಿಗಳಿಗೇಕೆ ಇಷ್ಟ?
ಇಲಿಗಳ ಹಲ್ಲುಗಳು ನಿರಂತರವಾಗಿ ಬೆಳೆಯುತ್ತಲೇ ಇರುತ್ತವೆ. ಹೀಗಾಗಿ ಅವುಗಳನ್ನು ನಿಯಂತ್ರಿಸಲು ತಂತಿ, ಪ್ಲಾಸ್ಟಿಕ್, ರಬ್ಬರ್ ಭಾಗಗಳನ್ನು ಕಚ್ಚುತ್ತಲಿರುವುದು ಅವುಗಳ ಅಭ್ಯಾಸ. ಆದರೆ ಕಾರು ತಯಾರಕರು ಸೋಯ್ ಆಧಾರಿತ ಸಸ್ಯ ಜನ್ಯ ವಸ್ತುಗಳನ್ನು ಬಿಡಿಭಾಗಗಳ ತಯಾರಿಕೆಯಲ್ಲಿ ಬಳಸುವುದರಿಂದಲೂ ಕಾರುಗಳ ಒಳಗೆ ಇಲಿ ಸೇರುತ್ತಿವೆ. ಕಾರುಗಳನ್ನು ಹೆಚ್ಚು ದಿನ ಬಳಸದೆ ನಿಲ್ಲಿಸಿದರೆ, ಅವು ಗೂಡು ಕಟ್ಟಲು ಸೂಕ್ತ ಸ್ಥಳವಾಗಿದೆ.
ಕಾರಿನೊಳಗೆ ಇಲಿ ಪ್ರವೇಶಿಸಿದೆಯೇ ಹೇಗೆ ಕಂಡುಹಿಡಿಯುವುದು?
ಇಲಿ ಕಾರಿನೊಳಗೆ ಪ್ರವೇಶಿಸಿದೆ ಎಂದರೆ ಅದರ ಹಿಕ್ಕೆಗಳು ಕಾಣುತ್ತದೆ ಹಾಗೂ ಮೂತ್ರದ ವಾಸನೆ ಮೂಗಿಗೆ ರಾಚುತ್ತದೆ. ಸೀಟಿನ ಕುಷನ್ ಅಗಿದು ಹೊರಗೆ ಹಾಕಿದ, ತಂತಿ ಹಾಗೂ ಬೆಲ್ಟ್ ಕಚ್ಚಿದ ಗುರುತು ಕಾಣಿಸುತ್ತದೆ. ಏರ್‌ಫಿಲ್ಟರ್ ಅಥವಾ ಡೆಕ್ಟ್‌ಗಳಲ್ಲಿ ಗೂಡುಗಳು ಕಾಣಿಸುತ್ತವೆ. ಎಂಜಿನ್ ಭಾಗಗಳಲ್ಲಿ ಅಕ್ಕಿ, ಕಡಲೆ ಸೇರಿದಂತೆ ಧಾನ್ಯಗಳನ್ನು ಸಂಗ್ರಹಿಸಿಟ್ಟಿದ್ದು ಕಂಡುಬರುತ್ತದೆ.
ಇಲಿ ದಾಳಿ ತಡೆಗಟ್ಟುವ ಕ್ರಮಗಳೇನು?
ಕಸದ ಬುಟ್ಟಿಗಳ ಬಳಿ, ತೋಟಗಳ ಬಳಿ ಕಾರು ನಿಲ್ಲಿಸಬೇಡಿ. ಗ್ಯಾರೇಜ್ ಆದರೆ ಬಾಗಿಲು, ಕಿಟಕಿಯಲ್ಲಿ ಬಿರುಕುಗಳು ಇದ್ದರೆ ಮುಚ್ಚಿ. ಅಲ್ಲಿರುವ ಹಳೆಯ ಬಟ್ಟೆ, ಪೇಪರ್, ಕಾರ್ಡ್‌ಬೋರ್ಡ್ ಇತ್ಯಾದಿಗಳನ್ನು ಇಡಬೇಡಿ. ಕಾರಿನೊಳಗೆ ಕುರಕಲು, ಎಣ್ಣೆಯಲ್ಲಿ ಕರಿದ ತಿಂಡಿಗಳನ್ನೂ ಒಳಗೊಂಡು ಯಾವುದೇ ತಿನ್ನುವ ಪದಾರ್ಥಗಳು ಮತ್ತು ಕವರ್‌ಗಳನ್ನು ಇಡಬೇಡಿ.
ಕಾರನ್ನು ನಿಯಮಿತವಾಗಿ ಓಡಿಸುತ್ತಲಿರಿ. ಆದರೆ ಸ್ಟಾರ್ಟ್ ಮಾಡುವ ಮೊದಲು ಹಾರ್ನ್ ಒತ್ತಿ.
ಪುದೀನಾ ಎಣ್ಣೆ, ಪೆಪ್ಪರ್ ಸ್ಪ್ರೇ, ಒಳಗೊಂಡಂತೆ ಮಾರುಕಟ್ಟೆಯಲ್ಲಿ ವಿವಿಧ ರಾಸಾಯನಿಕಗಳು ಲಭ್ಯ. ಆದರೆ ರಾಸಾಯನಿಕ ಸ್ಪ್ರೇ ಸಂದರ್ಭದಲ್ಲಿ ಮುಖಗವಸು ಹಾಗೂ ಕೈಗವಸು ತೊಡುವುದನ್ನು ಮಾತ್ರ ಮರೆಯಬಾರದು.
ಇವುಗಳೊಂದಿಗೆ..
- ಹೋಂಡಾ ರೋಡೆಂಟ್ ಟೇಪ್: ಮೆಣಸಿನಕಾಯಿ ಮಿಶ್ರಿತ ಟೇಪ್ ತಂತಿಗಳ ಮೇಲೆ ಹಾಕಿದರೆ ಕಚ್ಚಲು ಸಾಧ್ಯವಿಲ್ಲ.
- ಅಲ್ಟ್ರಾಸೋನಿಕ್ ಸಾಧನಗಳು: ಹೆಚ್ಚಿನ ತರಂಗಾಂತರ ಶಬ್ದ ಹೊರಡಿಸುವ ಸಾಧನಗಳೂ ಮಾರುಕಟ್ಟೆಯಲ್ಲಿವೆ.
- ಮೆಟಲ್ ಜಾಲರಿ: ತಂತಿ, ಏರ್‌ವೆಂಟ್‌ಗಳ ಮೇಲೆ ಲೋಹದ ಜಾಲರಿ ಹಾಕಬಹುದು
- ಟ್ರ್ಯಾಪ್‌ಗಳು: ಎಚ್ಚರಿಕೆಯಿಂದ ಬಳಸಿ, ಪಶು ಹಾಗೂ ಮಕ್ಕಳಿಗೆ ಅಪಾಯವಾಗದಂತೆ ನೋಡಿಕೊಳ್ಳಿ.
ಇಲಿ ಪ್ರವೇಶಿಸಿದರೆ ಏನು ಮಾಡಬೇಕು?
- ಸುರಕ್ಷತೆ: ಇಲಿ ಮಲ, ಮೂತ್ರದಿಂದ ರೋಗ ಹರಡಬಹುದು. ಕೈಗವಸು ಧರಿಸಿ, ಡಿಸ್ಇನ್ಫೆಕ್ಟಂಟ್ ಬಳಸಿ.
- ಶುದ್ಧೀಕರಣ: ಬ್ಲೀಚ್ ಬಳಸಬೇಡಿ. ಏರ್




