ಫೋಕ್ಸ್‌ವ್ಯಾಗನ್ ಟೈರಾನ್: ವಿಲಾಸಿ ಕಾರುಗಳ ಸಾಲಿಗೆ ಜರ್ಮನಿಯ ಹೊಸ ಸೇರ್ಪಡೆ

Volkswagen Tyron

ಜರ್ಮನಿಯ ಫೋಕ್ಸ್‌ವ್ಯಾಗನ್‌ ತನ್ನ ಟೈಗುನ್‌, ಟಿಗ್ವಾನಾ ಹಾಗೂ ವರ್ಟಸ್‌ ಮೂಲಕ ಭಾರತದಲ್ಲಿ ತನ್ನ ಹೊಸ ಶೆಖೆಯನ್ನು ಆರಂಭಿಸಿತು. ಇದೀಗ ಟೈರಾನ್‌ (Tayron) ಎಂಬ ಹೊಸ ವಿಲಾಸಿ ಎಸ್‌ಯುವಿಯನ್ನು ಬಿಡುಗಡೆ ಮಾಡಲು ವೇದಿಕೆ ಸಜ್ಜುಗೊಳಿಸಿದೆ.

2026ರ ಆರಂಭದಲ್ಲಿ ಭಾರತ ಸೇರಿದಂತೆ ಜಗತ್ತಿನ ಮಾರುಕಟ್ಟೆಗೆ ಫೋಕ್ಸ್‌ವ್ಯಾಗನ್‌ ಈ ಕಾರನ್ನು ಬಿಡುಗಡೆ ಮಾಡುತ್ತಿದೆ. 5 ಮತ್ತು 7 ಆಸನಗಳ ಈ ಎಸ್‌ಯುವಿ ಸ್ಕೋಡಾ ಕೋಡಿಯಾಕ್‌ (Skoda Kodiaq), ಜೀಪ್ ಮೆರಿಡಿಯನ್‌ ((Jeep Meridian) ಮತ್ತು ಟೊಯೊಟಾ ಫಾರ್ಚುನರ್‌ (Toyota Fortuner) ಮಾದರಿಗಳಿಗೆ ಹೊಸ ಸ್ಪರ್ಧೆ ಇದಾಗಿದೆ.

ಐರೋಪ್ಯ ರಾಷ್ಟ್ರಗಳಲ್ಲಿ ಟುವಾರೆಗ್‌ (Touareg) ನಂತರ ಫೋಕ್ಸ್‌ವ್ಯಾಗನ್‌ನ ಎರಡನೇ ಅತಿದೊಡ್ಡ ಎಸ್‌ಯವಿ ಇದಾಗಿದೆ. ಐದು ಹಾಗೂ ಏಳು ಆಸನಗಳ ಟೈರಾನ್‌ ದೊಡ್ಡ ಬೂಟ್‌ ಜಾಗವನ್ನು ಹೊಂದಿದೆ. ಜತೆಗೆ 2.5 ಟನ್‌ ಭಾರ ಎಳೆಯುವ ಸಾಮರ್ಥ್ಯವನ್ನು ಹೊಂದಿದೆ.

ಪವರ್‌ಟ್ರೇನ್‌ಗಳಲ್ಲಿ ಸುಮಾರು 150 ಕಿಲೋ ವ್ಯಾಟ್‌ ಮತ್ತು 200 ಕಿಲೋ ವ್ಯಾಟ್‌ ಸಿಸ್ಟಂ ಔಟ್‌ಪುಟ್‌ಗಳು, 100 ಕಿ.ಮೀ.ಗಿಂತ ಅಧಿಕವಲ್ಲದ ಎಲೆಕ್ಟ್ರಿಕ್‌ ಬ್ಯಾಟರಿಯ ಬೆಂಬಲ ಇದಕ್ಕಿದೆ. ಜತೆಗೆ ಟರ್ಬೊ–ಪೆಟ್ರೋಲ್ ಮತ್ತು ಡೀಸೆಲ್‌ ಎಂಜಿನ್‌ ಆಯ್ಕೆ ಇದೆ. ಹೀಗಾಗಿ ಇದೊಂದು ಪರಿಪೂರ್ಣ ಹೈಬ್ರಿಡ್ ಎಸ್‌ಯುವಿ ಇದೆ. ಜೆತೆಗೆ 4MOTION ಎಂಬ ಆಲ್‌ ವೀಲ್ ಡ್ರೈವ್ ಆಯ್ಕೆಯನ್ನೂ ನೀಡಲಾಗಿದೆ.

ಇದರೊಂದಿಗೆ ಎಚ್‌ಡಿ ಮ್ಯಾಟ್ರಿಕ್ಸ್ ಹೆಡ್‌ಲೈಟ್‌ಗಳು, ಟ್ರಾವೆಲ್ ಅಸಿಸ್ಟ್, ವೆಹಿಕಲ್ ಡೈನಾಮಿಕ್ಸ್ ಮ್ಯಾನೇಜರ್, DCC ಪ್ರೊ ಅಡಾಪ್ಟಿವ್ ಸಸ್ಪೆನ್ಷನ್, ಮೂರು-ವಲಯದ ಕ್ಲೈಮೇಟ್ ಕಂಟ್ರೋಲ್ ಮತ್ತು ಟ್ರಿಮ್‌ಗೆ ಅನುಗುಣವಾಗಿ ಬಹು ಏರ್‌ಬ್ಯಾಗ್‌ಗಳಂತಹ ಸುಧಾರಿತ ಸುರಕ್ಷತೆ ಮತ್ತು ಸೌಕರ್ಯ ತಂತ್ರಜ್ಞಾನಗಳನ್ನು ಟೈರಾನ್‌ ಹೊಂದಿದೆ.

ಫೋಕ್ಸ್‌ವ್ಯಾಗನ್ ಟೈರಾನ್‌ ಪರೀಕ್ಷಾರ್ಥ ಪ್ರಯೋಗದಲ್ಲಿದ್ದು ಮಹಾರಾಷ್ಟ್ರದ ಕೆಲವೆಡೆ ಕನಿಷ್ಠ ಕ್ಯಾಮೊಫ್ಲೇಜ್‌ನಲ್ಲಿ ಕಂಡುಬಂದಿದೆ. ಇದನ್ನು ಗಮನಿಸಿದರೆ ಭಾರತದಲ್ಲಿ ಮೂರು ಸಾಲಿನ ಆಸನಗಳ ಎಸ್‌ಯುವಿ ಇದಾಗಿದೆ. ಟೊಯೊಟಾ ಫಾರ್ಚ್ಯೂನರ್‌, ಎಂಜಿ ಗ್ಲಾಸ್ಟರ್‌ ಮತ್ತು ಸಿಟ್ರನ್‌ ಸಿ5 ಏರ್‌ಕ್ರಾಸ್‌ಗೂ ಟೈರಾನ್‌ ಸ್ಪರ್ಧೆಯೊಡ್ಡಲಿದೆ.

ಟೈರಾನ್‌ನ ಬೆಲೆ ಮತ್ತು ವೇರಿಯಂಟ್‌

ಫೋಕ್ಸ್‌ವ್ಯಾಗನ್‌ ಟೈರಾನ್‌ 2.0 ಲೀಟರ್‌ ಟಿಎಸ್‌ಐ ಟರ್ಬೊ ಪೆಟ್ರೋಲ್‌ (ಸುಮಾರು 200–204 PS, 320 Nm) ಅನ್ನು 7-ಸ್ಪೀಡ್ DSG ಮತ್ತು ಆಲ್-ವೀಲ್ ಡ್ರೈವ್‌ನೊಂದಿಗೆ ಬಳಸುವ ನಿರೀಕ್ಷೆಯಿದೆ. TDI ಡೀಸೆಲ್‌ಗಳನ್ನು ಮರಳಿ ತರುವ ಬಗ್ಗೆ ಫೋಕ್ಸ್‌ವ್ಯಾಗನ್ ಮೌಲ್ಯಮಾಪನ ಮಾಡುತ್ತಿದೆ ಎಂದು ವರದಿಯಾಗಿದೆ.

4.8 ಮೀಟರ್‌ ಉದ್ದವಿರುವ ಈ ಕಾರು ಟಿಗುವಾನ್‌ಗಿಂತಲೂ (230 ಮಿ.ಮೀ.) ಉದ್ದದ ಕಾರಾಗಿದೆ. ಮೂರು ಸಾಲಿನ ಆಸನಗಳ ನಡುವೆ ಲೆಗ್‌ ಸ್ಪೇಸ್‌ ಹೆಚ್ಚಿಸಲು ವೀಲ್‌ಬೇಸ್‌ ಅನ್ನು ಉತ್ತಮಪಡಿಸಲಾಗಿದೆ.

ಸಾಕಷ್ಟು ಸ್ವದೇಶದಲ್ಲಿ ನಿರ್ಮಾಣವಾಗಿರುವ ಫೋಕ್ಸ್‌ವ್ಯಾಗನ್‌ ಟೈರಾನ್‌, ₹48 ಲಕ್ಷ ರಿಂದ ₹50 ಲಕ್ಷ (ಎಕ್ಸ್‌ ಶೋರೂಂ) ಬೆಲೆ ನಿಗದಿಪಡಿಸುವ ಸಾಧ್ಯತೆ ಇದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ