Volvo EX90 ವಿದ್ಯುತ್ ಚಾಲಿತ SUV ಕಾರನ್ನು ಚಿತ್ರೀಕರಿಸಬೇಡಿ; ಸ್ಮಾರ್ಟ್‌ ಫೋನ್‌ ನಾಶವಾದೀತು!

Volvo EX90 EV SUV

ವೋಲ್ವೊ ಕಂಪನಿಯ ನೂತನ ಎಸ್‌ಯುವಿ ಇಎಕ್ಸ್‌90 ಇವಿ ಕಾರಿನ ಚಿತ್ರೀಕರಿಸಿದವರ ಮೊಬೈಲ್‌ಗಳು ನಾಶವಾದ ಕುರಿತು ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು. ಅಂತರ್ಜಾಲದಲ್ಲಂತೂ ಇದರದ್ದೇ ಚರ್ಚೆ. ಅದರ ಅಸಲಿಯತ್ತೇನು…?

ತಂತ್ರಜ್ಞಾನವು ಇಂದು ದಿನದಿಂದ ದಿನಕ್ಕೆ ವೇಗವಾಗಿ ಬೆಳೆವಣಿಗೆ ಕಂಡು ಸಾಗುತ್ತಿದೆ. ಆಧುನಿಕ ಕಾರು ಮಾಲೀಕರು ಅತ್ಯಾಧುನಿಕ ಚಾಲಕ ನೆರವಿನ ವ್ಯವಸ್ಥೆ (ADAS) ಸೇರಿದಂತೆ ಹಲವು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಆದರೆ ವೋಲ್ವೊ ತನ್ನ ಇಎಕ್ಸ್‌90 ಕಾರಿನಲ್ಲಿ ಒಂದು ಪ್ರಮುಖ ತಂತ್ರಜ್ಞಾನವನ್ನು ಅಳವಡಿಸಿದೆ. ಇದನ್ನು ಸಂಕ್ಷಿಪ್ತವಾಗಿ ಲಿಡಾರ್‌ ವ್ಯವಸ್ಥೆ ಎನ್ನಬಹುದು. ಹೀಗೆಂದರೆ ಬೆಳಕನ್ನು ಅದು ಎಷ್ಟು ದೂರದಿಂದ ಬರುತ್ತಿದೆ ಎಂಬ ಮಾಹಿತಿ ಸಹಿತ ಹೇಳುವ ಒಂದು ವ್ಯವಸ್ಥೆ. ಇದನ್ನು ವೋಲ್ವೊ ಅಳವಡಿಸಿದೆ ಎಂದು ಸುದ್ದಿಯಾಗಿದೆ.

ಆ ವಿಡಿಯೊದಲ್ಲಿ ವ್ಯಕ್ತಿಯೊಬ್ಬ Volvo EX90 EV SUV ಕಾರನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಾನೆ. ಚಿತ್ರೀಕರಿಸುತ್ತಿದ್ದಂತೆ ಕಾರಿನಿಂದ ಲೇಸರ್ ಕಿರಣಗಳು ಹೊರಹೊಮ್ಮಿ, ಸ್ಮಾರ್ಟ್‌ಫೋನ್‌ನ ಕ್ಯಾಮೆರಾದಲ್ಲಿರುವ CMOS ಸೆನ್ಸರ್‌ ಅನ್ನೇ ನಾಶಪಡಿಸುತ್ತದೆ. ಹೀಗಾಗಿ ಕಾರು ಪ್ರಿಯರು ವೋಲ್ವೊ ಕಾರಿನ ಕುರಿತು ತುಸು ಹೆಚ್ಚಿನ ಗಮನ ಹರಿಸಬೇಕದ್ದು ಅಗತ್ಯ.

ಸ್ಮಾರ್ಟ್‌ಫೋನ್‌ ಸೆನ್ಸರ್‌ ನಾಶಪಡಿಸಿದ ಈ ಲಿಡಾರ್ ವ್ಯವಸ್ಥೆಯ ಮನುಷ್ಯರ ಕಣ್ಣಿಗೆ ಹಾನಿಕಾರಕವಲ್ಲವೇ ಎಂಬ ಪ್ರಶ್ನೆ ಮೂಡುವುದು ಸಹಜ. ಅಮೆರಿಕದ ರಾಷ್ಟ್ರೀಯ ಗುಣಮಟ್ಟ ಸಂಸ್ಥೆ (ANSI) ಅಧ್ಯಯನ ಪ್ರಕಾರ, ಲಿಡಾರ್‌ನ ಕಿರಣಗಳನ್ನು ಸಂಕ್ಷಿಪ್ತವಾಗಿ ನಿಯಂತ್ರಿಸಲಾಗಿರುತ್ತದೆ. ಅಂದರೆ ಕೆಲ ವಾಹನಗಳ ಶ್ರೇಣಿಗೆ ತಕ್ಕಂತೆ ಹೊಂದಿಸಲಾಗಿರುತ್ತದೆ. ವೋಲ್ವೊದ ಈ ಮಾದರಿಯಲ್ಲಿರುವುದು ಕ್ಲಾಸ್ ಒನ್‌ ಶ್ರೇಣಿಯದ್ದು. ಇದು ಮನುಷ್ಯರ ಕಣ್ಣುಗಳಿಗೆ ಸುರಕ್ಷಿತ. ಆದರೆ ಇದನ್ನು ಚಿತ್ರೀಕರಿಸುವ ದುಬಾರಿ ಫೋನ್‌ಗಳನ್ನು ಇದು ಬಿಡದು.

2024ರಲ್ಲೇ ವೋಲ್ವೊ ಕಂಪನಿಯ ಈ ಕಾರು ಬಿಡುಗಡೆಗೊಂಡು ತಯಾರಿಕೆಯೂ ಆರಂಭವಾಗಿತ್ತು. ಅಂತರರಾಷ್ಟ್ರೀಯ ಮಟ್ಟದ ಕೆಲ ರಾಷ್ಟ್ರಗಳಲ್ಲಿ ಇದು ಈಗಾಗಲೇ ಮಾರುಕಟ್ಟೆ ಪ್ರವೇಶಿಸಿದೆ. ಈ ವಿಲಾಸಿ ಎಸ್‌ಯುವಿ ಭಾರತದಲ್ಲಿ ಈ ವರ್ಷದ ಅಂತ್ಯದ ಹೊತ್ತಿಗೆ ಬಿಡುಗಡೆ ಆಗುವ ಸಾಧ್ಯತೆ ಇದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ