Honda N-One: 2026ರಲ್ಲಿ ಬರುತ್ತಿದೆ ಜಪಾನ್‌ನ ಈ ಪುಟ್ಟ EV ಕಾರು

ನಗರ ಪ್ರದೇಶಗಳಲ್ಲಿ ಈಗ ಪುಟ್ಟ ಇವಿ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ರೇವಾ ಮಾದರಿಯಂತೆ ಮಹೀಂದ್ರ ಕೆ2, ಎಂಜಿ ಕಾಮೆಂಟ್‌ನಂತೆಯೇ ಹೊಂಡಾ ಕೂಡಾ ಈ ಪುಟ್ಟ ಕಾರುಗಳ ಲೋಕಕ್ಕೆ ಹೆಜ್ಜೆ ಇಡುತ್ತಿರುವುದಾಗಿ ಘೋಷಿಸಿದೆ. ಅದರ ಭಾಗವಾಗಿ ಎನ್‌–ಒನ್‌ ಎಂಬ ಪುಟ್ಟ ಇವಿ ಕಾರು 2026ರಲ್ಲಿ ಭಾರತ ಪ್ರವೇಶಿಸಲಿದೆ.

ಜಪಾನ್‌ಲ್ಲಿ ಈ ಕಾರು ತಯಾರಾಗುತ್ತಿದ್ದು, ಇದೇ ವರ್ಷ ಸೆಪ್ಟೆಂಬರ್‌ನಲ್ಲಿ ರಸ್ತೆಗಿಳಿಯಲಿದೆ. ಈ ಪುಟ್ಟ ಕಾರಿನ ಉದ್ದ 3.4 ಮೀಟರ್. 63 ಬಿಎಚ್‌ಪಿಯ ಸಿಂಗಲ್‌ ಎಲೆಕ್ಟ್ರಿಕಲ್ ಮೋಟಾರ್‌ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಈ ಕಾರು ಒಂದು ಸಂಪೂರ್ಣ ಚಾರ್ಜ್‌ನಲ್ಲಿ 270 ಕಿ.ಮೀ. ರೇಂಜ್ ನೀಡಲಿದೆ ಎಂದು ಹೊಂಡಾ ಹೇಳಿದೆ. 50 ಕಿಲೋ ವಾಟ್‌ನ ಡಿಸಿ ಫಾಸ್ಟ್‌ ಚಾರ್ಜಿಂಗ್‌ ಅನ್ನು ಇದು ಹೊಂದಿದೆ. ಸಂಪೂರ್ಣ ಚಾರ್ಜ್ ಆಗಲು 30 ನಿಮಿಷಗಳು ಬೇಕು.

Hero vs Honda: Splendor 125 and Shine 100 Face Off in India’s 100cc Market: Honda N-One: 2026ರಲ್ಲಿ ಬರುತ್ತಿದೆ ಜಪಾನ್‌ನ ಈ ಪುಟ್ಟ EV ಕಾರು

ಒಳಾಂಗಣದಲ್ಲಿ ಹೆಚ್ಚು ಆಡಂಬರವಿಲ್ಲ. ಸರಳವಾಗಿ, ಎಷ್ಟು ಬೇಕೋ ಅಷ್ಟು ಸೌಕರ್ಯಗಳನ್ನು ನೀಡಲಾಗಿದೆ. ಒನ್‌ ಪೆಡಲ್‌ ಡ್ರೈವಿಂಗ್ ಇದರದ್ದು. 50:50 ಸ್ಪ್ಲಿಟ್‌ ಸೀಟುಗಳು, 9 ಇಂಚಿನ ಹೊಂಡಾ ಕನೆಕ್ಟ್‌ ನ್ಯಾವಿಗೇಷನ್‌ ಸಿಸ್ಟಂ ಅನ್ನು ಇದು ಹೊಂದಿದೆ.

ಹೊಂಡಾ ಎನ್‌–ಒನ್‌ ಐದು ಬಣ್ಣಗಳಲ್ಲಿ ಲಭ್ಯ. ಚೀರ್‌ಫುಲ್‌ ಗ್ರೀನ್‌, ಪ್ಲಾಟಿನಂ ವೈಟ್ ಪರ್ಲ್‌, ಲೂನಾರ್ ಸಿಲ್ವರ್ ಮೆಟಾಲಿಕ್‌,  ಫೋರ್ಡ್‌ ಮಿಸ್ಟ್‌ ಪರ್ಲ್‌ ಮತ್ತು ಸೀಬೆಡ್‌ ಬ್ಲೂ ಪರ್ಲ್‌ ಬಣ್ಣಗಳಲ್ಲಿ ಲಭ್ಯ. ಬಾಕ್ಸ್‌ ವಿನ್ಯಾಸ, ಎತ್ತರದ ರೂಫ್‌ ವಿನ್ಯಾಸ ಇದರದ್ದು.

ಹೊಂಡಾ ಕಂಪನಿಯು ಈಗಾಗಲೇ ಯುರೋಪ್‌ನ ಮಾರುಕಟ್ಟೆಯಲ್ಲಿ ಪ್ರದರ್ಶಿಸಿದೆ. ಈ ಕಾರಿಗೆ ಪ್ರತಿಸ್ಪರ್ಧಿಯಾಗಿ ನಿಸ್ಸಾನ್‌ ಸಕುರಾ ಈಗಾಗಲೇ ಮಾರುಕಟ್ಟೆಯಲ್ಲಿದೆ. ಭಾರತಕ್ಕೆ ಬಂದಲ್ಲಿ ಟಾಟಾ ಪಂಚ್‌ ಕೂಡಾ ಇದಕ್ಕೆ ಸ್ಪರ್ಧೆಯೊಡ್ಡಲಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ