ಫ್ರಾನ್ಸ್‌ನ ರಿನೊ (Renault) 2024ರಲ್ಲಿ ತನ್ನ ಸ್ವರೂಪ ಬದಲಸಿಕೊಂಡಿತು. ದಹಿಸುವ ಇಂಧನದ ಎಂಜಿನ್ ಬದಲು ದೊಡ್ಡ ಗಾತ್ರದ ಕಾರಿನ ಬದಲು, ಬ್ಯಾಟರಿ ಚಾಲಿತ ಮಧ್ಯಮ ಗಾತ್ರದ ಕಾರನ್ನಾಗಿ ರಿನೊ 4ಅನ್ನು ಪರಿವರ್ತಿಸಿ ಪರಿಚಯಿಸಿದೆ. ಇದೀಗ ಕ್ರಾಸ್‌ಓವರ್ ಆವೃತ್ತಿಯಾಗಿ ರಿನೊ 5 ಅನ್ನು ಈಗ ಪರಿಚಯಿಸಿದೆ. ಸದ್ಯ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಈ ಸಬ್‌ಕಾಂಪ್ಯಾಕ್ಟ್ ಮಾದರಿ, ಹೊಸ ಮಾದರಿಯ ಫ್ರಂಟ್ ವೀಲ್ ಡ್ರೈವ್‌ನ ಈ ಕಾರಿನಲ್ಲಿ ಹಿಂಬದಿಯ ಮೋಟಾರ್ ಅಳವಡಿಸಲಾಗಿದೆ.
ಎರಡು ಮೋಟಾರುಗಳುಳ್ಳ ಈ ಕಾರು ಹಸಿರು ಬಣ್ಣದಲ್ಲಿದ್ದ ಚಿತ್ರವನ್ನು ಕಂಪನಿ ಹಂಚಿಕೊಂಡಿದೆ. ‘ರಿನೊ 4 ಸವಾನೆ’ 4X4 ಕಾನ್ಸೆಪ್ಟ್ ಕಾರು ಇದಾಗಿದೆ. ಗ್ರೌಂಡ್ ಕ್ಲಿಯರೆನ್ಸ್ ಈ ಮೊದಲಿಗಿಂತಲೂ 15 ಮಿಲಿ ಮೀಟರ್ ಹೆಚ್ಚಿಸಲಾಗಿದೆ. ಆಫ್‌ರೋಡ್‌ನ ಸಾಮರ್ಥ್ಯ ಹೊಂದಿದೆ. ಹೀಗಾಗಿ ಸಾಮಾನ್ಯ ಕಾರಿಗಿಂತಲೂ ಇದು ಭಿನ್ನವಾಗಿದೆ. 18 ಇಂಚಿನ ವೀಲ್ ಅನ್ನು ರಿನೊ 5ನಲ್ಲಿ ಅಳವಡಿಸಲಾಗಿದೆ. 225/55 ಗಾತ್ರದ ಟೈರ್ ಇದರದ್ದಾಗಿದೆ.

110 ಕಿಲೋ ವಾಟ್‌ನ ಈ ಕಾರು 148 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. 245 ನ್ಯೂಟನ್ ಮೀಟರ್ ಟಾರ್ಕ್ ಉತ್ಪಾದಿಸುತ್ತದೆ. ಹೀಗಾಗಿ ರಿನೊ 4ಕ್ಕೆ ಹೋಲಿಸಿದರೆ ರಿನೊ 5 ಹೆಚ್ಚು ಶಕ್ತಿಶಾಲಿ. 0ಯಿಂದ 100 ಕಿ.ಮೀ. ವೇಗವನ್ನು ಕ್ರಮಿಸಲು 8.2 ಸೆಕೆಂಡ್ ತೆಗೆದುಕೊಳ್ಳಲಿದೆ. ಆದರೆ ಬ್ಯಾಟರಿ ಗಾತ್ರ ಎಷ್ಟು ಎಂಬುದರ ಮಾಹಿತಿ ಲಭ್ಯವಾಗಿಲ್ಲ.
ಸಾಮಾನ್ಯವಾಗಿ ಬಳಸುವ 40 ಕಿಲೋವಾಟ್ ಗಾತ್ರದ ಬ್ಯಾಟರಿಗಿಂತ 52 ಕಿಲೋವಾಟ್‌ನ ಬ್ಯಾಟರಿ ಇದರಲ್ಲಿ ಬಳಸಲಾಗಿದೆ. ಪ್ರತಿ ಪೂರ್ಣ ಚಾರ್ಜ್‌ಗೆ ಗರಿಷ್ಠ 400 ಕಿ.ಮೀ. ರೇಂಜ್ ನೀಡುವ ಸಾಮರ್ಥ್ಯ ಇದರದ್ದು.
ರಿನೊ 5 ಸವಾನೆ ಕಾನ್ಸೆಪ್ಟ್ ಕಾರು ಎಎಂಪಿಆರ್ ಪುಟ್ಟ ಗಾತ್ರದ ಕಾರಿನ ರಚನೆಯನ್ನು ಅನುಸರಿಸಿದೆ. ಇದರಲ್ಲಿ ನಿಸ್ಸಾನ್ ಮೈಕ್ರಾ ವಿನ್ಯಾಸವನ್ನು ಅಳವಡಿಸಿಕೊಳ್ಳಲಾಗಿದೆ.
ಈ ಮಾದರಿಯ ಕಾರುಗಳು ಫ್ರಂಟ್ ವೀಲ್ ಡ್ರೈವ್ ಹೊಂದಿರುವುದು ಸಾಮಾನ್ಯ. ಆದರೆ ರಿನೊ 5 ಸವಾನೆ ಕಾರು ಆಲ್ ವೀಲ್ ಡ್ರೈವ್ ಹೊಂದಿದೆ. ಆಲ್‌ಪೈನ್ ಎ290 ಡುಯಲ್ ಮೋಟಾರ್ ಅಳವಡಿಸಲಾಗಿದೆ. ಸದ್ಯ ಇದು ಕಾನ್ಸೆಪ್ಟ್ ಕಾರಾಗಿದ್ದು, ಎಂದಿನಿಂದ ತಯಾರಿಕಾ ಹಂತಕ್ಕೆ ಮತ್ತು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂಬುದರ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.