Nissan Magnite: ಈಗ CNGಕಿಟ್‌ ಅಳವಡಿಸುವ ಸೌಲಭ್ಯ; 1 ಲಕ್ಷ ವಾರೆಂಟಿ ಲಭ್ಯ

Nissan Magnite

ನಿಸ್ಸಾನ್ ಮೋಟಾರ್ ಇಂಡಿಯಾದ SUV ನಿಸ್ಸಾನ್ ಮ್ಯಾಗ್ನೈಟ್‌ ಖರೀದಿಸುವುದಾದರೆ ಅಥವಾ ಈಗಾಗಲೇ ಖರೀದಿಸಿದ್ದರೆ ಹೆಚ್ಚಿನ ಇಂಧನ ಕ್ಷಮತೆಗಾಗಿ ಸಿಎನ್‌ಜಿ ಕಿಟ್ ಅಳವಡಿಸುವ ಸೌಲಭ್ಯವನ್ನು ಕಂಪನಿ ತನ್ನ ಗ್ರಾಹಕರಿಗೆ ನೀಡಿದೆ.

ಸರ್ಕಾರ ಅನುಮೋದಿಸಿದ ಸಿಎನ್‌ಜಿ ರೆಟ್ರೊಫಿಟ್‌ಮೆಂಟ್‌ ಜೊತೆಗೆ ಲಭ್ಯವಿರುವುದರಿಂದ ಸುರಕ್ಷತೆಯ ಭಯವಿಲ್ಲ. ನಿಸ್ಸಾನ್‌ಗಾಗಿ ಮೊಟೊಜೆನ್ ಎಂಬ ಕಂಪನಿ ಈ ಸಿಎನ್‌ಜಿ ಕಿಟ್ ಅಭಿವೃದ್ಧಿಪಡಿಸಿದೆ. ದೇಶದ ನಿಯಂತ್ರಕ ಮಾನದಂಡಗಳಿಗೆ ಅನುಗುಣವಾಗಿ ಗುಣಮಟ್ಟದ ಖಾತ್ರಿಯನ್ನು ಕಂಪನಿ ನೀಡಿದೆ.

ಸರ್ಕಾರಿ ಅನುಮೋದಿತ ಫಿಟ್‌ಮೆಂಟ್‌ ಕೇಂದ್ರಗಳಲ್ಲೇ ನಿಸ್ಸಾನ್ ಮ್ಯಾಗ್ನೈಟ್‌ಗೆ ಸಿಎನ್‌ಜಿ ಕಿಟ್‌ಗಳನ್ನು ಅಳವಡಿಸಲಾಗುತ್ತದೆ. ಇದಕ್ಕೆ ಕಂಪನಿಯು ₹74,999ರಷ್ಟು ಬೆಲೆ ನಿಗದಿಪಡಿಸಿದೆ.

ಮೊದಲ ಹಂತದಲ್ಲಿ ಕರ್ನಾಟಕವನ್ನೂ ಒಳಗೊಂಡು ದೆಹಲಿ ಎನ್‌ಸಿಆರ್‌,  ಹರಿಯಾಣ, ಉತ್ತರ ಪ್ರದೇಶ, ಮಹಾರಾಷ್ಟ್ರ, ಗುಜರಾತ್, ಕೇರಳದಲ್ಲಿ ಈ ಸೌಲಭ್ಯವನ್ನು ನಿಸ್ಸಾನ್ ನೀಡುತ್ತಿದೆ. 2ನೇ ಹಂತದಲ್ಲಿ ದೇಶದ ಇತರ ರಾಜ್ಯಗಳಿಗೆ ಇದನ್ನು ವಿಸ್ತರಿಸಲಾಗುವುದು ಎಂದು ಕಂಪನಿಯ ಭಾರತ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಸೌರಭ್ ವತ್ಸ ತಿಳಿಸಿದ್ದಾರೆ.

ಯಾವ ಮಾದರಿಯ ಕಾರಿಗೆ ಸಿಎನ್‌ಜಿ ಕಿಟ್‌ ಅಳವಡಿಕೆ ಸಾಧ್ಯ?

‘ಸಿಎನ್‌ಜಿ ಕಿಟ್‌ ಆಯ್ಕೆಯು ನಿಸ್ಸಾನ್‌ ಮ್ಯಾಗ್ನೈಟ್‌ನ 1.0 ಲೀಟರ್ ಪೆಟ್ರೋಲ್‌ ಎಂಜಿನ್‌ ಹಾಗೂ ಮ್ಯಾನುಯಲ್‌ ಗೇರ್‌ಬಾಕ್ಸ್‌ ಹೊಂದಿರುವ ಕಾರಿಗೆ ಮಾತ್ರ ಲಭ್ಯ. ಸರ್ಕಾರಿ ಅನುಮೋದಿತ ವಿತರಕರಿಂದ  ರೆಟ್ರೊಫಿಟ್  ಮಾಡಲಾಗುವುದು. ಅವರು ಪ್ರಾದೇಶಿಕ ನಿಯಮಗಳು ಮತ್ತು ಸುರಕ್ಷತಾ ಮಾನದಂಡಗಳಿಗೆ ಅನುಗುಣವಾದ ಪ್ರಮಾಣಿತ ಹೋಮೊಲೊಗೇಟೆಡ್ ಕಿಟ್‌ ಅನ್ನು ಒದಗಿಸುತ್ತಾರೆ’ ಎಂದು ತಿಳಿಸಿದ್ದಾರೆ.

‘ನಿಸ್ಸಾನ್ ಮ್ಯಾಗ್ನೈಟ್‌ಗೆ ಭಾರತದಲ್ಲಿ ಸಾಕಷ್ಟು ಬೇಡಿಕೆ ಇದ್ದು, ಕಂಪನಿಯ ಜನಪ್ರಿಯ ಕಾರು ಇದಾಗಿದೆ. ಗ್ರಾಹಕರ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ನಿಸ್ಸಾನ್ ಡೀಲರ್‌ಗಳು ಇದೀಗ ಸರ್ಕಾರ-ಅನುಮೋದಿತ ಸಿ ಎನ್ ಜಿ ರೆಟ್ರೊಫಿಟ್‌ಮೆಂಟ್ ಕಿಟ್‌ನ ರೂಪದಲ್ಲಿ ಪರ್ಯಾಯ ಇಂಧನ ಆಯ್ಕೆಯನ್ನು ಒದಗಿಸಲಿದ್ದಾರೆ. ಈ ಕ್ರಮವು ಜನಪ್ರಿಯ ಕಾಂಪ್ಯಾಕ್ಟ್ ಎಸ್ ಯು ವಿಯನ್ನು ಮತ್ತಷ್ಟು ಜನಪ್ರಿಯಗೊಳಿಸುವ ವಿಶ್ವಾಸ ನಮಗಿದೆ” ಎಂದು ಹೇಳಿದರು.

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು www.nissan.in ಗೆ ಭೇಟಿ ನೀಡಿ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ