ಕೋಡಿಯಾಕ್, ಕುಷಾಕ್ ಮತ್ತು ಕಿಲಾಕ್‌ನಂಥ ಕಾರುಗಳ ಮೂಲಕ SUV ಮಾದರಿಯಲ್ಲಿ ಜನಪ್ರಿಯತೆ ಪಡೆದ ಸ್ಕೋಡಾ ಇದೀಗ ಎಲೆಕ್ಟ್ರಿಕ್ ಮಾದರಿಯ ಕಾರುಗಳನ್ನು ಪರಿಚಯಿಸಲು ಮುಂದಡಿ ಇಟ್ಟಿದೆ.
ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ರಲ್ಲಿ ಸ್ಕೋಡಾ ಇಲ್ರಾಕ್ EV ಎಸ್‌ಯುವಿಯನ್ನು ಪರಿಚಯಿಸಿತು. 13 ಇಂಚುಗಳ ಫ್ಲೋಟಿಂಗ್ ಟಚ್ ಸ್ಕ್ರೀನ್, ಹೆಡ್ಸ್‌ಅಪ್ ಡಿಸ್‌ಪ್ಲೇ, ಫುಲ್ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೊಮ್ಯಾಟಿಕ್ ಎಸಿ, ಆ್ಯಂಬಿಯಂಟ್ ಲೈಟಿಂಗ್ ಮತ್ತು ಕನೆಕ್ಟೆಡ್ ಕಾರ್ ಟೆಕ್‌ಗಳಂಥ ಆಧುನಿಕ ಎಲೆಕ್ಟ್ರಾನಿಕ್ ಸೌಕರ್ಯಗಳನ್ನು ಈ ಕಾರು ಹೊಂದಿದೆ.
ಇನ್ನೂ ಇದರ ಮೋಟಾರು ವಿಭಾಗಕ್ಕೆ ಬಂದಲ್ಲಿ ಮೂರು ಬ್ಯಾಟರಿ ಆಯ್ಕೆಗಳು ಇದರದ್ದು. 52 ಕಿಲೋ ವಾಟ್, 59 ಕಿಲೋ ವಾಟ್ ಮತ್ತು 77 ಕಿಲೋ ವಾಟ್‌ಗಳಲ್ಲಿ ಲಭ್ಯ.

52 ಕಿಲೋ ವಾಟ್ ಇಲ್ರಾಕ್ ಒಂದು ಪೂರ್ಣ ಚಾರ್ಜ್‌ನಲ್ಲಿ ಗರಿಷ್ಠ 370 ಕಿ.ಮೀ. ದೂರ ಕ್ರಮಿಸಬಲ್ಲದು. 170 ಪಿಎಸ್ ಅಶ್ವಶಕ್ತಿ ಮತ್ತು 310 ನ್ಯೂಟನ್ ಮೀಟರ್ ಶಕ್ತಿಯನ್ನು ಉತ್ಪಾದಿಸಲಿದೆ.
59 ಕಿಲೋ ವಾಟ್ ಇಲ್ರಾಕ್ 418 ಕಿ.ಮೀ. ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ. 204 ಪಿಎಸ್ ಅಶ್ವಶಕ್ತಿ ಹಾಗೂ 310 ನ್ಯೂಟನ್ ಮೀಟರ್ ಶಕ್ತಿಯನ್ನು ಇದು ಉತ್ಪಾದಿಸಲಿದೆ.
77 ಕಿಲೋ ವಾಟ್ ಇಲ್ರಾಕ್ ಗರಿಷ್ಠ 579 ಕಿ.ಮೀ. ದೂರ ಕ್ರಮಿಸಬಲ್ಲದು. ಇದು 286 ಪಿಎಸ್ ಅಶ್ವಶಕ್ತಿ ಹಾಗೂ 545 ನ್ಯೂಟನ್ ಮೀಟರ್‌ನಷ್ಟು ಶಕ್ತಿ ಉತ್ಪಾದಿಸಬಲ್ಲದು.
ಇಲ್ರಾಕ್‌ನಲ್ಲಿ ಸುರಕ್ಷತೆಗಾಗಿ ಹಲವು ಏರ್‌ಬ್ಯಾಗ್‌ಗಳನ್ನು ನೀಡಲಾಗಿದೆ. ಅತ್ಯಾಧುನಿಕ ಚಾಲಕ ಸಹಾಯಕ ವ್ಯವಸ್ಥೆ (ADAS) ಹೊಂದಿದೆ. ಈ ಸಾಮರ್ಥ್ಯದಲ್ಲಿ ಸದ್ಯ ಭಾರತದಲ್ಲಿ BYD Atto 3 ಹಾಗೂ ಹ್ಯುಂಡೇ ಐಯಾನಿಕ್ 5 ಮಾದರಿಯ ಕಾರುಗಳು ಇವೆ.
Skoda Elroqನ ಬೆಲೆ ₹22ಲಕ್ಷದಿಂದ ₹25 ಲಕ್ಷ ಲಕ್ಷದ ಆಸುಪಾಸಿನಲ್ಲಿರಲಿದೆ ಎಂದು ಅಂದಾಜಿಸಿ ಕಾರ್‌ದೇಕೊ ವರದಿ ಮಾಡಿದೆ. ಸದ್ಯ ಯುರೋಪ್ ಮಾರುಕಟ್ಟೆಯಲ್ಲಿ ಸ್ಕೋಡಾ ಎಲ್ರಾಕ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ವರದಿಯಾಗಿದೆ.