ಕಾರುಗಳು ಸದಾ ಉತ್ತಮವಾಗಿರಬೇಕೇ..?: ಈ 10 ಟಿಪ್‌ಗಳನ್ನು ಫಾಲೋ ಮಾಡಿ

Car care kit

ಕಾಲಕಾಲಕ್ಕೆ ಸ್ಪಾರ್ಕ್‌ಪ್ಲಗ್‌ಗಳ ಬದಲಾವಣೆ, ಟೈರ್‌ಗಳಿಗೆ ಸೂಕ್ತ ಪ್ರಷರ್‌ ಸೇರಿದಂತೆ ನಿಮ್ಮ ಬಳಿ ಇರುವ ಕಾರು, ಎಸ್‌ಯುವಿ ಅಥವಾ ಟ್ರಕ್‌ಗಳ ಉತ್ತಮ ನಿರ್ವಹಣೆಗೆ ಮತ್ತು ದೀರ್ಘ ಕಾಲ ಬಾಳಿಕೆಗೆ ಈ ಹತ್ತು ಸರಳ ಸಲಹೆಗಳನ್ನು ಅನುರಿಸಿದರೆ ಸಮಸ್ಯೆ ಮುಕ್ತ ವಾಹನ ನಿಮ್ಮದಾಗಲಿದೆ.

ಇಂದಿನ ಬಹಳಷ್ಟು ಕಾರುಗಳಲ್ಲಿ ಟೈರ್‌ ಪ್ರಷರ್‌ ತೋರಿಸುವ ಹಾಗೂ ಇನ್ನಿತರ ನಿರ್ವಹಣೆ ಕುರಿತ ಡಿಜಿಟಲ್‌ ಕ್ಲಸ್ಟರ್‌ಗಳಲ್ಲೇ ಮಾಹಿತಿ ಲಭ್ಯವಾಗುತ್ತದೆ. ಹೀಗಿದ್ದರೂ, ಒಬ್ಬ ಉತ್ತಮ ಚಾಲಕ ತಾನೇ ವೈಯಕ್ತಿಕವಾಗಿ ಕಾರುಗಳ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಳ್ಳುವುದು ಸರ್ವಕಾಲಕ್ಕೂ ಶ್ರೇಷ್ಠ. ಎಲ್ಲವನ್ನೂ ತಂತ್ರಜ್ಞಾನದ ಜವಾಬ್ದಾರಿಗೇ ವಹಿಸುವುದಕ್ಕಿಂತ ನಾವೂ ಒಂದಷ್ಟು ವಾಹನಗಳ ಜ್ಞಾನ ಹೊಂದಿದ್ದರೆ, ಸೂಕ್ತ ನಿರ್ವಹಣೆ ಮಾಡಿದ್ದರೆ ಹಲವು ವರ್ಷಗಳ ಕಾಲ ಕಾರುಗಳು ಉತ್ತಮ ಸ್ಥಿತಿಯಲ್ಲಿರುತ್ತವೆ. ಇದರಿಂದ ಜೇಬಿಗೆ ಹೊರೆಯೂ ಕಡಿಮೆ, ಆನಂದವೂ ಹೆಚ್ಚು.

ಟೈರ್‌ ಪ್ರಷರ್ ಗೇಜ್‌: ಒಂದು ಸೂಕ್ತ ಟೈರ್‌ ಪ್ರಷರ್‌ ಗೇಜ್ ಹೊಂದುವುದು ಮತ್ತು ಅದನ್ನು ಪರೀಕ್ಷಿಸುವುದನ್ನು ಕಲಿತಲ್ಲಿ ವಾಹನದ ರಬ್ಬರ್‌ ಉತ್ತಮ ನಿರ್ವಹಣೆ ಸಾಧ್ಯ. ಟೈರ್‌ ನಿರ್ವಹಣೆ ಕೇವಲ ಕಣ್ ಅಳತೆಯಲ್ಲಿ ಅಸಾಧ್ಯ. ಟೈರ್‌ನಲ್ಲಿ ಒತ್ತಡ ಕಡಿಮೆಯಾದಲ್ಲಿ ಹಲವಾರು ಸಮಸ್ಯೆ ತಲೆದೋರುವುದೇ ಹೆಚ್ಚು.

ಕಾಲಕ್ಕೆ ಟೈರ್ ಬದಲಾವಣೆ: ಟೈರ್‌ಗಳ ಪ್ರಷರ್‌ ಪರೀಕ್ಷಿಸುವುದು ಎಷ್ಟು ಮುಖ್ಯವೋ, ಹಾಗೆಯೇ ಟೈರ್‌ಗಳಲ್ಲಿ ಸೀಳು, ರಬ್ಬರ್‌ನ ಗುಣಮಟ್ಟ, ಸವಕಳಿಯನ್ನು ಪರೀಕ್ಷಿಸುವುದೂ ಅಷ್ಟೇ ಮುಖ್ಯ. ಒಂದೊಮ್ಮೆ ಟೈರ್‌ಗಳು ಹೆಚ್ಚು ಸವೆದಿದ್ದರೆ ಅಥವಾ ಹಾನಿಯಾಗಿದ್ದರೆ, ತಕ್ಷಣ ಬದಲಿಸಿ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಿ.

ಬ್ಯಾಟರಿ ನಿರ್ವಹಣೆ: ಇಂದಿನ ಕಾಲದಲ್ಲಿ ಕೆಲವರಿಗೆ ನಿತ್ಯ ಕಾರು ತೆಗೆಯುವುದೂ ಕಷ್ಟ. ಹೀಗಿದ್ದಾಗ ಹಲವು ಬಾರಿ ವಾರ ಅಥವಾ ತಿಂಗಳುಗಳ ಕಾಲ ಕಾರುಗಳು ನಿಂತಲ್ಲೇ ನಿಂತಿರುತ್ತವೆ. ಇಂಥ ಸಂದರ್ಭದಲ್ಲಿ ಬ್ಯಾಟರಿಗಳು ತನ್ನ ಸಾಮರ್ಥ್ಯ ಕಳೆದುಕೊಳ್ಳುವ ಸಾಧ್ಯತೆ ಬಹಳಾ ಹೆಚ್ಚು. ಹೀಗಾಗಿ ಬ್ಯಾಟರಿ ನಿರ್ವಹಣೆ ತೀರಾ ಅಗತ್ಯ.

ಬ್ಯಾಟರಿ ಮೈಂಟೇನರ್‌: ಒಂದೊಮ್ಮೆ ಕಾರು ಹೆಚ್ಚು ದಿನಗಳ ಕಾಲ ನಿಂತಿದ್ದರೆ, ಬ್ಯಾಟರಿಯನ್ನು ಡಿಸ್‌ಕನೆಕ್ಟ್‌ ಮಾಡಿ. ಇದಕ್ಕೆ ಬ್ಯಾಟರಿ ಮೈಂಟೇನರ್‌ ಅಳವಡಿಸುವುದು ಸೂಕ್ತ. ಇದು ಬ್ಯಾಟರಿಯ ಚಾರ್ಜ್ ಲೆವಲ್‌ ಅನ್ನು ನಿರ್ವಹಿಸುತ್ತದೆ. ಒಂದು ಪುಟ್ಟ ಕಂಪ್ಯೂಟರ್‌ ಸಾಧನವಾಗಿದ್ದು, ಯಾವಾಗ ಬ್ಯಾಟರಿ ಅಗತ್ಯವಿದೆ ಮತ್ತು ಯಾವಾಗ ಬ್ಯಾಟರಿ ಬೇಡ ಎನ್ನುವುದನ್ನು ಅರಿತು ಅದಕ್ಕೆ ತಕ್ಕಂತೆ ಬ್ಯಾಟರಿ ಬಳಕೆಯನ್ನು ಉತ್ತೇಜಿಸುತ್ತದೆ.

ಗುಣಮಟ್ಟದ ಮೈಂಟೇನರ್ ಮುಖ್ಯ: ಶ್ರೇಷ್ಠ ಹಾಗೂ ಕಳಪೆ ಗುಣಮಟ್ಟದ ಮೇಂಟೇನರ್‌ ನಡುವಿನ ವ್ಯತ್ಯಾಸ ಅರಿಯುವುದು ಮುಖ್ಯ. ಬ್ಯಾಟರಿ ಸಂಪೂರ್ಣ ಚಾರ್ಜ್‌ ಆದ ನಂತರ ಆಟೊ ಕಟ್‌ಆಫ್‌ ಮತ್ತು ಫ್ಲೊಟ್ ಆಗುವ ಸೌಕರ್ಯ ಅಗತ್ಯ. ಓವರ್‌ ಚಾರ್ಜಿಂಗ್‌ ತಪ್ಪಿಸಲು ಸಾಧ್ಯ.

ಲೈಟ್‌ ಆಫ್ ಮಾಡಲು ಮರೆಯದಿರಿ: ಹೆಡ್‌ಲೈಟ್‌ ಅಥವಾ ಒಳಗಿನ ಆ್ಯಂಬಿಯಂಟ್ ಲೈಟ್‌ ಆಫ್ ಮಾಡುವುದನ್ನು ಮರೆಯಬೇಡಿ. ಇದೂ ಕೂಡಾ ಬ್ಯಾಟರಿ ಡ್ರೈನ್‌ಗೆ ಮತ್ತಷ್ಟು ಕಾರಣವಾಗಲಿದೆ.ಇದರೊಂದಿಗೆ ಬ್ಯಾಟರಿ ಬೂಸ್ಟರ್‌ ಪ್ಯಾಕ್‌ ಇಟ್ಟುಕೊಳ್ಳಿ. ಇದರಿಂದ ಬ್ಯಾಟರಿ ದೀರ್ಘ ಬಾಳಿಕೆ ಬರಲಿದೆ.

ಕಾಲಕಾಲಕ್ಕೆ ಸ್ಪಾರ್ಕ್‌ಪ್ಲಗ್‌ ಪರೀಕ್ಷಿಸುತ್ತಿರಿ. ಪೆಟ್ರೋಲ್ ಎಂಜಿನ್ ಆದರೆ ಸ್ಪಾರ್ಕ್‌ಪ್ಲಗ್‌ ಪರೀಕ್ಷೆ ಹೆಚ್ಚು ಅಗತ್ಯವಿರದು. ಆದರೆ ಸ್ಪಾರ್ಕ್ ಪ್ಲಗ್‌ನ ಕನಿಷ್ಠ ಜ್ಞಾನವನ್ನು ಹೊಂದಿರುವುದು ಕಾರಿನ ನಿರ್ವಹಣೆಗೆ ಉತ್ತಮ.

ಅತ್ಯಗತ್ಯ ವಸ್ತುಗಳನ್ನು ಖರೀದಿಸಿ: ಕಾರುಗಳಲ್ಲಿ ಅತ್ಯಗತ್ಯವಾಗಿ ಸಾಕೆಟ್ಸ್‌, ರ್‍ಯಾಚೆಟ್ಸ್‌ ಮತ್ತು ಎಕ್ಸ್‌ಟೆನ್ಶನ್‌ಗಳನ್ನು ಇಟ್ಟುಕೊಳ್ಳಲು ಮರೆಯದಿರಿ. ಕಾರುಗಳು ಕೈಕೊಟ್ಟಾಗ ಈ ಸಾಧನಗಳು ಅಗತ್ಯ.

ಹೊಟೋಪ್ ಸ್ಟೀಲ್ ಗ್ಯಾಪ್‌: ವಾಹನಗಳ ಸ್ಪಾರ್ಕ್‌ಪ್ಲಗ್‌ ಆರೋಗ್ಯ ಕಾಪಾಡಲು ಮತ್ತು ಅದರ ಆರೋಗ್ಯ ಉತ್ತಮವಾಗಿದೆಯೇ ಎಂದು ಪರೀಕ್ಷಿಸಲು ಸ್ಪಾರ್ಕ್‌ ಪ್ಲಗ್‌ ಗ್ಯಾಪ್‌ಗಳನ್ನು ಹೊಂದುವುದು ಮುಖ್ಯ. ಇದಕ್ಕೆ ಹೊಟೋಪ್‌ ಸ್ಟೀಲ್ ಗ್ಯಾಪ್‌ ಅಗತ್ಯ. ಇದರಿಂದ ಉತ್ತಮ ವೋಲ್ಟೇಜ್‌, ಎಲೆಕ್ಟ್ರಿಕ್ ಆರ್ಕ್‌ ಇತ್ಯಾದಿಯನ್ನು ಪರೀಕ್ಷಿಸಲು ಸಾಧ್ಯ.

ಕಾರು ತೊಳೆಯುವ ಸಾಧನ: ಕಾರುಗಳು ತುಕ್ಕು ಹಿಡಿಯದಂತೆ ಸದಾ ಹೊಳೆಯುವಂತೆ ಮಾಡುವುದು ಕಾರಿನಲ್ಲಿ ಕೊಳೆಯನ್ನು ತೊಳೆದಾಗಲೇ. ಹೀಗಾಗಿ ಕಾರು ತೊಳೆಯಲು ಒಂದು ಸರಳ ಸಾಧನ, ಒಂದು ಉತ್ತಮ ಕ್ರೀಂ ಮತ್ತು ಒರೆಸಲು ಉತ್ತಮ ಟವಲ್‌ ಹೊಂದುವುದೂ ಮುಖ್ಯ. ಮನೆಯಲ್ಲಿ ಬಳಸುವ ಯಾವುದೇ ಸೋಪ್‌ ಬಳಸಬೇಡಿ. ಏಕೆಂದರೆ ಕಾರಿನ ಹೊರಮೈಗೆ ಹಾನಿಯಾಗಬಹುದು.

ಕಾರಿಗೆ ತುಕ್ಕು ಹಿಡಿಯಬಾರದು. ಒಂದೊಮ್ಮೆ ತುಕ್ಕು ಕಂಡುಬಂದಿದ್ದೇ ಆದಲ್ಲಿ, ನಂಬಿಕಸ್ಥ ಮೆಕ್ಯಾನಿಕ್ ಬಳಿ ಹೋಗಿ ಅದನ್ನು ತೋರಿಸಿ, ಆತಕ್ಷಣವೇ ಅದನ್ನು ನಿವಾರಿಸಿಕೊಳ್ಳಿ. ಇದರಿಂದ ಮುಂದೆ ಎದುರಾಗಬಹುದಾದ ದೊಡ್ಡ ನಷ್ಟವನ್ನು ತಪ್ಪಿಸಬಹುದು.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ