SUVಗಳ ಆಯ್ಕೆ ಭಾಗ–2: ಜನಪ್ರಿಯ ಬ್ರಾಂಡ್‌ಗಳ ಬೆಲೆಯೂ ತುಸು ಮೇಲೆ; ಸೌಲಭ್ಯವೂ ಹೆಚ್ಚು

₹30 ಲಕ್ಷದೊಳಗಿನ ಐದು ಪ್ರಮುಖ ಕಾರುಗಳ ಪಟ್ಟಿ Hyundai Creta, Mahindra Thar, Tata Curvv

₹30 ಲಕ್ಷದೊಳಗಿನ ಡೀಸೆಲ್ ಕಾರುಗಳನ್ನು ಪಟ್ಟಿಯ ಮೊದಲ ಭಾಗದಲ್ಲಿ ಮಹೀಂದ್ರಾ ಬೊಲೆರೊ, ನಿಯೊ, ನೆಕ್ಸಾನ್‌, ಕಿಯಾ ಸಾನೆಟ್‌ಗಳ ಬಗ್ಗೆ ಮಾಹಿತಿ ಪಡೆದಿರಿ. ಈ ಎರಡನೇ ಭಾಗದಲ್ಲಿ ಇನ್ನಷ್ಟು ಬ್ರಾಂಡ್‌ಗಳು ಹಾಗೂ ಆಧುನಿಕ ಸೌಲಭ್ಯ ಮತ್ತು ಹೆಚ್ಚಿನ ಆರಾಮವಿರುವ ಕಾರುಗಳ ಪಟ್ಟಿಯನ್ನು ಮತ್ತದರ ಸಂಕ್ಷಿಪ್ತ ಸ್ವರೂಪವನ್ನು ನೀಡಲಾಗಿದೆ.

ಹ್ಯುಂಡೇ ವೆನ್ಯೂ

ಬೆಲೆ: ₹10.80 ಲಕ್ಷದಿಂದ ₹ 13.53 ಲಕ್ಷ

ಕಿಯಾ ಸಾನೆಟ್‌ನ ಸೋದರಿ ಹ್ಯುಂಡೇ ವೆನ್ಯೂ ಬೇಸ್‌ ಮಾದರಿ ತುಸು ದುಬಾರಿ. ಆದರೆ ಹೈಯರ್‌ ವೇರಿಯಂಟ್‌ ಬೆಲೆ ಕೈಗೆಟಕುವಂತಿದೆ. ಡೀಸೆಲ್ ಎಂಜಿನ್ ಹೊಂದಿರುವ ವೆನ್ಯೂ S+, SX ಹಾಗೂ SX (O) ಮಾದರಿಯನ್ನು ಹೊಂದಿದೆ. ಸಾನೆಟ್‌ನಂತೆಯೇ ಇದರಲ್ಲೂ 1.5 ಲೀಟರ್ ಡೀಸೆಲ್ ಎಂಜಿನ್‌ ಅಳವಡಿಸಲಾಗಿದೆ. ಟ್ರಾನ್ಸ್‌ಮಿಷನ್‌ ಆಯ್ಕೆಯಲ್ಲಿ 6 ಸ್ಪೀಡ್‌ನ ಮ್ಯಾನುಯಲ್‌ ಗೇರ್‌ಬಾಕ್ಸ್‌ಗೆ ಸೀಮಿತಗೊಳಿಸಲಾಗಿದೆ.

ನಗರ ಪ್ರದೇಶಕ್ಕೆ ಹೆಚ್ಚು ಸೂಕ್ತವಾದ ಕಾರು ಇದಾಗಿದ್ದು, ಮೃದು ಮತ್ತು ಆರಾಮದಾಯಕವಾಗಿದೆ. ಎತ್ತರದ ಪ್ರದೇಶಗಳಲ್ಲಿ ತುಸು ಭಾರ ಎಳೆದಂತೆ ಭಾಸವಾಗಲಿದೆ.

https://www.crossroadz.in/new-vehicles/new-cars/best-affordable-diesel-suvs-india-2025-5018₹30 ಲಕ್ಷದೊಳಗಿನ SUVಗಳು ಭಾಗ–1: ಅಗ್ಗದ ಬೆಲೆಗೆ ಉತ್ತಮ ಈ 5 ಕಾರುಗಳು – Crossroadz

ಕಿಯಾ ಸೈರಸ್‌

ಬೆಲೆ: ₹11.30 ಲಕ್ಷದಿಂದ ₹17.80 ಲಕ್ಷ

ಎಸ್‌ಯುವಿ ವಿಭಾಗದಲ್ಲಿ ಕಿಯಾ ಕಂಪನಿಯು ಭಾರತದಲ್ಲಿ ಪರಿಚಯಿಸಿದ ಎರಡನೇ ಕಾರು ಸೈರಸ್‌. ಮಹೀಂದ್ರಾ ಕಾರುಗಳಿಗೆ ಹೋಲಿಸಿದಲ್ಲಿ ಇದು ತುಸು ದುಬಾರಿ. ಆದರೆ ಟಾಟಾ ಮತ್ತು ಹ್ಯುಂಡೇ ಪ್ರತಿಸ್ಪರ್ಧಿಗಳು. ಡೀಸೆಲ್ ಎಂಜಿನ್‌ ಹೊಂದಿರುವ ಸೈರಸ್ ಕಾರಿನಲ್ಲಿ HTK (O), HTK+, HTX, HTX+ and HTX+ (O) ಮಾದರಿಗಳಿವೆ. ಡೀಸೆಲ್ ಕಾರಿನ ಸಾಮರ್ಥ್ಯವು ಸಾನೆಟ್‌ನಂತೆ ಎನಿಸಿದರೂ ತಪ್ಪಾಗದು.

ಕಿಯಾ ಸರಸ್‌ನ ಪ್ರಮುಖ ಅಂಶಗಳಲ್ಲಿ ಟಾರ್ಕ್ ಉತ್ತಮವಾಗಿದೆ. ಹೀಗಾಗಿ ವಾಹನಗಳನ್ನು ಹಿಂದಿಕ್ಕುವಾಗ ಇನ್ನೂ ಹೆಚ್ಚು ಶಕ್ತಿಯ ಅಗತ್ಯವಿದೆ ಎಂದೆನಿಸದು.. 2,500 ಆರ್‌ಪಿಎಂ ಇದ್ದು, ಎಂಜಿನ್‌ ಶಬ್ದ ಕೇಳಿಸುವಷ್ಟಿದೆ.

ಮಹೀಂದ್ರಾ ಥಾರ್

ಬೆಲೆ: ₹11.50 ಲಕ್ಷದಿಂದ ₹17.62 ಲಕ್ಷ

ಈವರೆಗೂ ನೀವು ಓದಿರುವ ಎಸ್‌ಯುವಿಗಳಿಗಿಂತ ಭಿನ್ನ ಮಹೀಂದ್ರಾ ಥಾರ್. ಏಕೆಂದರೆ ಇದರಲ್ಲಿ ನಾಲ್ಕೂ ಚಕ್ರಗಳಿಗೆ ಪ್ರತ್ಯೇಕ ಚಾಲನಾ ಶಕ್ತಿ (4WD) ಇದೆ. ಜತೆಗೆ ಹಿಂಬದಿಯ ಚಕ್ರಗಳಿಗೆ ಚಲನಾಶಕ್ತಿ ನೀಡಲಾಗಿದೆ. ಡೀಸೆಲ್‌ ಎಂಜಿನ್ ಅನ್ನು ಇದುಹೊಂದಿದ್ದು, ಫ್ರಂಟ್ ವೀಲ್‌ ಡ್ರೈವ್‌ ಅಥವಾ 4WD ಆಯ್ಕೆಗಳು ಲಭ್ಯ. ಇದು ಎಲ್‌ಎಕ್ಸ್‌ ವೇರಿಯಂಟ್‌ನಲ್ಲಿ ಮಾತ್ರ ಲಭ್ಯ. ಥಾರ್‌ಗಾಗಿ ಮಹೀಂದ್ರ ಎರಡು ಎಂಜಿನ್‌ಗಳ ಆಯ್ಕೆಯನ್ನು ತನ್ನ ಗ್ರಾಹಕರಿಗೆ ನೀಡಿದೆ. ಥಾರ್‌ ಎಸ್‌ಯುವಿ: 118 ಅಶ್ವಶಕ್ತಿ, 300 ನ್ಯೂಟನ್ ಮೀಟರ್‌ ಟಾರ್ಕ್‌, 1.5 ಲೀಟರ್ ಡೀಸೆಲ್ ಮತ್ತು RWD ಆಯ್ಕೆ ಒಂದೆಡೆಯಾದರೆ, 130 ಅಶ್ವಶಕ್ತಿ, 300 ನ್ಯೂಟನ್ ಮೀಟರ್‌, 2.2 ಲೀಟರ್ ಡೀಸೆಲ್ ಎಂಜಿನ್‌ ಹಾಗೂ 4WD ಮಾದರಿ ಲಭ್ಯ. ಮ್ಯಾನುಯಲ್ ಗೇರ್‌ಬಾಕ್ಸ್‌ ಇದರಲ್ಲಿ ಸಾಮಾನ್ಯ. ಆದರೆ 4WD ಮಾದರಿಯ ಥಾರ್‌ನಲ್ಲಿ ಟಾರ್ಕ್‌ ಪರಿವರ್ತಿಸುವ ಆಟೊ ಆಯ್ಕೆ ನೀಡಲಾಗಿದೆ.

ಥಾರ್‌ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಹೀಂದ್ರಾ ತಂದಿದೆ. ಹೀಗಾಗಿ ಹೊಸ ಮಾದರಿಯ ಥಾರ್‌ ಹೆಚ್ಚು ಮೃದು ಮತ್ತು ಅಧಿಕ ಶಕ್ತಿಶಾಲಿಯಾಗಿದೆ. ಆಫ್‌ರೋಡಿಂಗ್ ಕೂಡಾ ಲೀಲಾಜಾಲವಾಗಿ ನಿರ್ವಹಿಸುವಷ್ಟರ ಮಟ್ಟಿಗೆ ಇದರ ಕಾರ್ಯಕ್ಷಮತೆ ಹೆಚ್ಚಿಸಲಾಗಿದೆ.

ಟಾಟಾ. ಕರ್ವ್‌

ಬೆಲೆ: ₹11.50ಲಕ್ಷ – ₹19.52ಲಕ್ಷ

ಇಲ್ಲಿ ಪಟ್ಟಿ ಮಾಡಿರುವ ಡೀಸೆಲ್ ಎಸ್‌ಯುವಿಗಳಲ್ಲಿ ಕೂಪ್‌ ಮಾದರಿಯ ಏಕೈಕ ಕಾರ್‌ ಎಂದರೆ ಅದು ಟಾಟಾ ಕರ್ವ್‌. ಇದರಲ್ಲೂ ಹಲವು ಮಾದರಿಗಳನ್ನು ನೀಡಲಾಗಿದೆ. ಸ್ಮಾರ್ಟ್, ಪ್ಯೂರ್‌, ಕ್ರಿಯೇಟಿವ್ ಮತ್ತು ಅಕಂಪ್ಲಿಶ್‌ ಎಂಬ ಮೂಲ ಮಾದರಿಗಳ ಜತೆಗೆ, ಉಪಮಾದರಿಗಳೂ ಇವೆ. ಕರ್ವ್‌ ಮಾದರಿಯಲ್ಲಿ 1.5 ಲೀಟರ್ ಡೀಸೆಲ್ ಎಂಜಿನ್‌ ಇದ್ದು 118 ಅಶ್ವಶಕ್ತಿ ಮತ್ತು 260 ನ್ಯೂಟನ್ ಮೀಟರ್‌ ಟಾರ್ಕ್‌ ಉತ್ಪಾದಿಸುತ್ತದೆ. ನೆಕ್ಸಾನ್ ಡೀಸೆಲ್ ಮೋಟಾರ್‌ಗೆ ಹೋಲಿಸಿದಲ್ಲಿ ಇದು ತುಸು ಸುಧಾರಿತ ಎಂಜಿನ್ ಆಗಿದೆ. ಮ್ಯಾನುಯಲ್ ಟ್ರಾನ್ಸ್‌ಮಿಷನ್‌ ಅಥವಾ ಡುಯಲ್ ಕ್ಲಚ್ ಆಟೊಮ್ಯಾಟಿಕ್‌ ಗೇರ್‌ಬಾಕ್ಸ್ ಲಭ್ಯ.

1,500 ಆರ್‌ಪಿಎಂನಲ್ಲೂ ಕಾರಿನ ಪಿಕ್‌ಅಪ್‌ ಉತ್ತಮವಾಗಿದೆ. ಗೇರ್‌ ಹೆಚ್ಚಿಸುವಾಗ ಡಿಸಿಟಿ ಹೆಚ್ಚು ಮೃದುವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಕಡಿಮೆ ವೇಗದಲ್ಲಿ ಜರ್ಕ್ ಆದ ಅನುಭವ ನೀಡುತ್ತದೆ.

ಹ್ಯುಂಡೇ ಕ್ರೆಟಾ

ಬೆಲೆ: ₹12.69 ಲಕ್ಷ – ₹20.50 ಲಕ್ಷ

ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಹೆಚ್ಚು ಜನಪ್ರಿಯ ಕಾರು ಹ್ಯುಂಡೇ ಕ್ರೆಟಾ. ಕಳೆದ ಹಲವು ವರ್ಷಗಳಿಂದ ಈ ಮಾದರಿ ಬದಲಾಗುತ್ತಾ ಸಾಗುತ್ತಿದ್ದಂತೆ ಗ್ರಾಹಕರ ಸಂಖ್ಯೆಯನ್ನೂ ಹೆಚ್ಚಿಸಿಕೊಳ್ಳುತ್ತಿದೆ. ಹೀಗಾಗಿ ಭಾರತದಲ್ಲಿ ಅತಿ ಹೆಚ್ಚು ಕಾರುವ ಕಾರುಗಳಲ್ಲಿ ಕ್ರೆಟಾ ಮುಂಚೂಣಿಯಲ್ಲಿದೆ. ಡೀಸೆಲ್ ಕ್ರೆಟಾದಲ್ಲಿ E, EX, EX (O), S (O), SX Tech, SX Premium and SX (O) ಮಾದರಿಗಳಿವೆ. 116 ಅಶ್ವಶಕ್ತಿ ಮತ್ತು 250 ನ್ಯೂಟನ್ ಮೀಟರ್ ಟಾರ್ಕ್ ಉತ್ಪಾದಿಸುವ 1.5 ಲೀಟರ್ ಡೀಸೆಲ್ ಎಂಜಿನ್‌ ಇದರಲ್ಲಿದೆ. 6 ಸ್ಪೀಡ್‌ ಮ್ಯಾನುಯಲ್‌ ಅಥವಾ 6 ಸ್ಪೀಡ್ ಟಾರ್ಕ್‌ ಕನ್ವರ್ಟರ್‌ ಆ್ಯಟೊಮ್ಯಾಟಿಕ್ ಗೇರ್‌ ಬಾಕ್ಸ್‌ ಅನ್ನು ಇದು ಹೊಂದಿದೆ.

ಡೀಸೆಲ್ ಮಾದರಿಯ ಕಾರಿನ ಚಾಲನೆ ಹೆಚ್ಚು ಮೃದು, ಕಡಿಮೆ ಶಬ್ದ ಹೊರಸೂಸುತ್ತದೆ. ಹೆದ್ದಾರಿ ಚಾಲನೆಗಂತೂ ಹೆಚ್ಚು ಹಿತ ನೀಡುವ ಕಾರು ಇದೆ.

ಕಾರು ಖರೀದಿಸುವ ಮುನ್ನ ಸುರಕ್ಷತೆಯ ಆದ್ಯತೆ ನೀಡುವ ಉದ್ದೇಶದಿಂದ ಎನ್‌ಕ್ಯಾಪ್ ಪರಿಶೀಲಿಸುವುದು ಉತ್ತಮ. ಈ ಎರಡನೇ ಭಾಗದಲ್ಲಿ ಡೀಸೆಲ್ ಎಂಜಿನ್ ಹೊಂದಿರುವ ಐದು ಎಸ್‌ಯುವಿ ಮಾದರಿಯ ಕಾರುಗಳ ಮಾಹಿತಿ ನೀಡಲಾಗಿದೆ. ಇನ್ನಷ್ಟು ಕಾರುಗಳ ಪಟ್ಟಿಗಳೊಂದಿಗೆ ಮುಂದಿನ ಭಾಗದಲ್ಲಿ ಮಾಹಿತಿ ನೀಡಲಾಗುವುದು.

ನಿಮ್ಮಿಷ್ಟದ ಕಾರುಗಳ ಪಟ್ಟಿ ಇದ್ದಲ್ಲಿ ಅದನ್ನು ಇಲ್ಲಿ ಹಂಚಿಕೊಳ್ಳಿ. ಮುಂದಿನ ಭಾಗ ಅತಿ ಶೀಘ್ರದಲ್ಲಿ…

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ