ವಾಹನ ಪ್ರಿಯರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ಆಟೊ ಎಕ್ಸ್‌ಪೋ ಮಾದರಿಯಲ್ಲಿ ಇಂಟರ್‌ನ್ಯಾಷನಲ್ ಆಟೊಶೋ ಆಯೋಜನೆಗೊಂಡಿದ್ದು ನವೆಂಬರ್‌ನಲ್ಲಿ ಸಿಲಿಕಾನ್ ಸಿಟಿಯಲ್ಲಿ ಜರುಗಲಿದೆ.
ಟ್ರ್ಯೂನ್ ಎಕ್ಸಿಬಿಟರ್ಸ್ ಕಂಪನಿಯು ಟಿವೈಜಿಎ ಆಯೋಜಿಸುತ್ತಿರುವ ಈ ಬೃಹತ್ ಮೇಳವು ನ. 14ರಿಂದ 16ರವರೆಗೆ ಬೆಂಗಳೂರು ಅರಮನೆಯ ತ್ರಿಪುರವಾಸಿನಿಯಲ್ಲಿ ಆಯೋಜನೆಗೊಂಡಿದೆ.
ಹೊಸ ಮಾದರಿಯ ಕಾರುಗಳು, ಹೊಸ ತಂತ್ರಜ್ಞಾನ, ಹೊಸ ಮಾದರಿಯ ವಿದ್ಯುತ್ ವಾಹನಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ. ಇದು ನೇರವಾಗಿ ಬ್ಯುಸಿನೆಸ್ ಟು ಬ್ಯುಸಿನೆಸ್ (B2B) ಎಂಬ ಪರಿಕಲ್ಪನೆಯಡಿ ಇದು ಆಯೋಜನೆಗೊಂಡಿದೆ.
ಹ್ಯುಂಡೈ, ಕಿಯಾ, ನೆಕ್ಸಾ ಸೇರಿದಂತೆ ಹಲವು ಪ್ರಮುಖ ಕಂಪನಿಗಳು ಇದರಲ್ಲಿ ಪಾಲ್ಗೊಳ್ಳುತ್ತಿವೆ.
ಈ ಹಿಂದೆ ನಡೆದ ಮೂರು ಆವೃತ್ತಿಗಳಲ್ಲಿ ವಿಂಟೇಜ್ ಕಾರುಗಳ ಪ್ರದರ್ಶನ. ಬೈಕ್‌ಗಳ ಆಕರ್ಷಕ ಸ್ಟಂಟ್‌ಗಳು, ವಿದ್ಯುತ್ ಚಾಲಿತ ಬೈಕ್ ಹಾಗೂ ಕಾರುಗಳ ಪ್ರದರ್ಶನ ನಡೆದಿತ್ತು.