VinFast: ಭಾರತದಲ್ಲಿ ತನ್ನ ವ್ಯಾಪ್ತಿ ವಿಸ್ತರಣೆಯಲ್ಲಿ ವಿಯಟ್ನಾಂ EV ಕಾರು ವಿನ್‌ಫಾಸ್ಟ್‌

Vinfast VF8

ವಿಯಟ್ನಾಂನ ವಿನ್‌ಫಾಸ್ಟ್‌ ಎಂಬ ಎಲೆಕ್ಟ್ರಿಕ್‌ ಕಾರು ಕಂಪನಿಯು ಭಾರತದಲ್ಲಿ ಹಂತ ಹಂತವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ. ಪ್ರಮುಖ ನಗರಗಳಲ್ಲಿ ಮಾತ್ರವಿದ್ದ ಈ ಕಂಪನಿಯ ಮಳಿಗೆಗಳು ಈಗ ದೇಶದ 27 ನಗರಗಳಲ್ಲಿ 32 ಡೀಲರ್‌ಶಿಪ್‌ಗಳನ್ನು ತೆರೆಯಲು ಸಜ್ಜಾಗಿದೆ.

ವಿನ್‌ಫಾಸ್ಟ್‌ ಕಂಪನಿಯ VF 6 ಮತ್ತು VF 7 ಮಾದರಿಯ ಕಾರುಗಳು ಇದೇ ಜುಲೈ 15ರಂದು ಬಿಡುಗಡೆಯಾಗುತ್ತಿದೆ. ಇದಕ್ಕೆ ಪೂರಕವಾಗಿ ಮಾರಾಟ, ಸರ್ವೀಸ್‌ ಮತ್ತು ಬಿಡಿ ಭಾಗಗಳು ಎಂಬ ಮೂರು ವಿಭಾಗಗಳಲ್ಲಿ ಈ ಡೀಲರ್‌ಶಿಪ್‌ ನೆಟ್‌ವರ್ಕ್‌ ಅನ್ನು ವಿಸ್ತರಿಸುತ್ತಿರುವುದಾಗಿ ವಿನ್‌ಫಾಸ್ಟ್ ಹೇಳಿದೆ.

ಈ ಮೊದಲ ಹಂತದಲ್ಲಿ ಕಂಪನಿಯು ಬೆಂಗಳೂರು, ದೆಹಲಿ, ಗುರುಗ್ರಾಮ, ಚೆನ್ನೈ, ಹೈದರಾಬಾದ್, ಪುಣೆ, ಜೈಪುರ, ಅಹಮದಾಬಾದ್, ಕೋಲ್ಕತ್ತ, ಕೊಚಿನ್, ಭುವನೇಶ್ವರ, ತಿರುವನಂತಪುರ, ಚಂಡೀಗಢ, ಲಖನೌ, ಕೊಯಮತ್ತೂರ್, ಸೂರತ್, ಕ್ಯಾಲಿಕಟ್‌, ವಿಶಾಖಪಟ್ಟಣ, ವಿಜಯವಾಡ, ಶಿಮ್ಲಾ, ಆಗ್ರಾ, ಜಾನ್ಸಿ, ಗ್ವಾಲಿಯರ್‌, ವಾಪಿ, ಬರೋಡಾ ಮತ್ತು ಗೋವಾದಲ್ಲಿ ಆರಂಭಿಸುತ್ತಿರುವುದಾಗಿ ವಿನ್‌ಫಾಸ್ಟ್ ಹೇಳಿದೆ.

ಈ ನಗರಗಳಲ್ಲಿ ಇವಿ ಕಾರು ಹಾಗೂ ಬೈಕ್‌ಗಳ ಬೇಡಿಕೆ ಹೆಚ್ಚಿದ್ದು, ಇಲ್ಲಿನ ಮೂಲಸೌಕರ್ಯವೂ ಉತ್ತಮವಾಗಿದೆ. 2025ರೊಳಗೆ 35 ಡೀಲರ್‌ಶಿಪ್‌ಗಳನ್ನು ತೆರೆಯುವ ಯೋಜನೆಯನ್ನು ವಿನ್‌ಫಾಸ್ಟ್ ಹೊಂದಿದೆ ಎಂದು ಕಂಪನಿ ಅಧಿಕಾರಿಗಳು ಹೇಳಿದ್ದಾರೆ.

ಭಾರತದ ರಸ್ತೆಗಳಲ್ಲಿ ಎಸ್‌ಯುವಿ ಮಾದರಿಯ ಇವಿ ಕಾರುಗಳನ್ನು ಪರಿಚಯಿಸುವುದಾಗಿ ವಿನ್‌ಫಾಸ್ಟ್ ಹೇಳಿದೆ. ಸದ್ಯ ಭಾರತದಲ್ಲಿ ಎಸ್‌ಯುವಿ ಮಾದರಿಯ ಕಾರುಗಳಿಗೆ ಬೇಡಿಕೆ ಹೆಚ್ಚಿದೆ.

ಈಗಾಗಲೇ ಭಾರತದಲ್ಲಿ ಚೀನಾದ ಬಿವೈಡಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಅಮೆರಿಕದ ಟೆಸ್ಲಾ ಕೂಡಾ ಭಾರತ ಪ್ರವೇಶಕ್ಕೆ ಕ್ಷಣಗಣನೆ ಆರಂಭಿಸಿದೆ. ಇದರ ಬೆನ್ನಲ್ಲೇ ವಿನ್‌ಫಾಸ್ಟ್‌ ಧಾಂಗುಡಿ ಇಡುತ್ತಿದೆ. ಇದರೊಂದಿಗೆ ಸ್ಕೋಡಾ ಇವಿ ಕೂಡಾ ಶೀಘ್ರದಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಭಾರತದ ಟಾಟಾ, ಮಹೀಂದ್ರಾ ಜತೆಗೆ ಎಂಜಿ ಮೋಟಾರ್ಸ್‌ ಕೂಡಾ ಇವಿ ಕಾರುಗಳ ಹಲವು ಮಾದರಿಗಳನ್ನು ಪರಿಚಯಿಸುತ್ತಿವೆ.

ಇವಿ ಕಾರುಗಳನ್ನು ಬಯಸುವವರಿಗೆ ತರಹೇವಾರಿ ಆಯ್ಕೆಗಳಿದ್ದು, ಅವುಗಳಲ್ಲಿ ಉತ್ತಮವಾದವು ಯಾವುವು ಎಂಬುದನ್ನು Crossroadz.in ನಿಮ್ಮ ಮುಂದೆ ಕಾಲಕಾಲಕ್ಕೆ ನೀಡಲಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ