ಹಬ್ಬದ ಸಂದರ್ಭದಲ್ಲೇ ಬಹಳಷ್ಟು ವಾಹನ ತಯಾರಕರು ಕೊಡುಗೆಗಳನ್ನು ನೀಡುತ್ತಿದ್ದಾರೆ. ಇದರಲ್ಲಿ ಇತ್ತೀಚೆಗೆ ಗಮನ ಸೆಳೆದಿದ್ದು ಜಾವಾ ಯೆಜ್ಡಿಯ ಹಬ್ಬದ ಕೊಡುಗೆ. ಕೇವಲ ₹999 ಪಾವತಿಸಿ ತಮ್ಮ ಮೆಚ್ಚಿನ ಬೈಕ್ ಮುಂಗಡ ಕಾಯ್ದಿರಿಸುವ ಅವಕಾಶವನ್ನು ಕಂಪನಿ ತನ್ನ ಗ್ರಾಹಕರಿಗೆ ನೀಡಿದೆ. ಇದು ಜಾವಾ ಅಥವಾ ಯೆಜ್ಡಿ ಮೋಟಾರ್ ಸೈಕಲ್ ಅನ್ನು ಕಂಪನಿಯ ಅಧಿಕೃತ ಅಂತರ್ಜಾಲ ತಾಣದಿಂದ ಖರೀದಿಸುವವರಿಗಾಗಿ ಎನ್ನುವುದು ಇಲ್ಲಿನ ವಿಶೇಷ.
ಜಿಎಸ್‌ಟಿ 2.0 ಪರಿಷ್ಕರಣೆ ಮೂಲಕ ಅದರ ಲಾಭವನ್ನು ಗ್ರಹಕರಿಗೆ ನೀಡುವ ಉದ್ದೇಶ ಹೊಂದಿರುವ ಜಾವಾ ಯೆಜ್ಡಿ, ತಮ್ಮ ಬೈಕ್‌ಗಳ ಮೇಲಿನ ಬೆಲೆಯನ್ನೂ ತಗ್ಗಿಸಿದೆ. ಅದರಲ್ಲೂ 350 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಬೈಕ್‌ಗಳ ಬೆಲೆ ಈಗ ಅಗ್ಗವಾಗಿದೆ.

ಕೇಂದ್ರ ಸರ್ಕಾರವು ಜಿಎಸ್‌ಟಿ 2.0 ಮೂಲಕ 350 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಬೈಕ್‌ಗಳ ಮೇಲಿನ ತೆರಿಗೆಯನ್ನು ಶೇ 28ರಿಂದ ಶೇ 18ಕ್ಕೆ ಇಳಿಸಿದೆ. ಹೀಗಾಗಿ ಜಾವಾದ 42 ಬಾಬರ್, ಯೆಜ್ಡಿ ರೋಡ್‌ಸ್ಟರ್, ಅಡ್ವೆಂಚರ್ ಮತ್ತು ಸ್ಕ್ರಾಂಬ್ಲರ್ ಬೆಲೆಗಳು ₹2 ಲಕ್ಷಕ್ಕಿಂತ (ಎಕ್ಸ್ ಶೋರೂಂ ಬೆಲೆ) ಕಡಿಮೆಯಾಗಿದೆ. ಹೀಗಾಗಿ ಅತ್ಯುತ್ತಮ ವಿನ್ಯಾಸದ ರೆಟ್ರೊ–ಆಧುನಿಕ ಶೈಲಿಯ ಮೋಟಾರ್ ಸೈಕಲ್ ಹೊಂದುವುದು ಈಗ ಸುಲಭವಾಗಿದೆ.
ಸೆ. 22ರಿಂದ ಹೊಸ ತೆರಿಗೆ ನೀತಿ ಜಾರಿಗೆ ಬಂದಿದ್ದು, ಅಲ್ಲಿಂದ ಬೈಕ್‌ಗಳ ಮಾರಾಟವೂ ಏರುಗತಿಯಲ್ಲಿ ಸಾಗಿದೆ. ಹಬ್ಬದ ಸಂದರ್ಭದಲ್ಲಂತೂ ಬೇಡಿಕೆ ಇನ್ನಷ್ಟು ಹೆಚ್ಚಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಜಿಎಸ್‌ಟಿ ಪರಿಷ್ಕರಣೆ ನಂತರ ಜಾವಾ ಯೆಜ್ಡಿ ಮೋಟಾರ್ ಸೈಕಲ್‌ಗಳ ಆರಂಭಿಕ ಬೆಲೆ ₹1.5 ಲಕ್ಷದಿಂದ ಆರಂಭವಾಗುತ್ತಿದೆ. ವಿಶ್ವ ಶ್ರೇಣಿಯ ವಿನ್ಯಾಸ, ತಂತ್ರಜ್ಞಾನ ಮತ್ತು ಕಾರ್ಯಕ್ಷಮತೆಯಿಂದ ಭಾರತೀಯರ ಅತ್ಯುತ್ತಮ ಬೈಕ್‌ನ ಕನಸು ಈಗ ನನಸಾಗುತ್ತಿದೆ. ಹಬ್ಬದ ಸಂದರ್ಭದಲ್ಲಿ ಅದು ಇಮ್ಮಡಿಯಾಗಲಿ ಎಂಬ ಉದ್ದೇಶದಿಂದ ಮುಂಗಡ ಬುಕ್ಕಿಂಗ್ ಮೊತ್ತವನ್ನು ₹999ಕ್ಕೆ ಇಳಿಸಲಾಗಿದೆ ಎಂದು ಜಾವಾ ಯೆಜ್ಡಿ ಮೋಟಾರ್‌ಸೈಕಲ್‌ನ ಮುಖ್ಯ ವ್ಯವಹಾರ ಅಧಿಕಾರಿ ಶರದ್ ಅಗರವಾಲ್ ತಿಳಿಸಿದ್ದಾರೆ.
ಇದರೊಂದಿಗೆ ಹೆಚ್ಚುವರಿಯಾಗಿ 4 ವರ್ಷ ಅಥವಾ 50 ಸಾವಿರ ಕಿಲೋ ಮೀಟರ್‌ವರೆಗೆ ವಾರೆಂಟಿ, ಇದನ್ನು ಆರು ವರ್ಷಗಳವರೆಗೂ ವಿಸ್ತರಿಸಲು ಅವಕಾಶ. ನೀಡಲಾಗಿದೆ. ಇದನ್ನು ಈ ನಾಲ್ಕು ವರ್ಷಗಳಲ್ಲಿ ಯಾವಾಗ ಬೇಕಿದ್ದರೂ ತೆಗೆದುಕೊಳ್ಳಬಹುದಾಗಿದೆ. ಒಂದು ವರ್ಷಗಳವರೆಗೆ ರೋಡ್‌ಸೈಡ್ ಅಸಿಸ್ಟೆನ್ಸ್ ನೀಡಲಾಗುತ್ತಿದೆ. ಇದನ್ನೂ 8 ವರ್ಷಗಳಿಗೆ ವಿಸ್ತರಿಸಿಕೊಳ್ಳಬಹುದು. ಬೈಕ್ ನಿರ್ವಹಣೆಗೆ 5 ವರ್ಷಗಳ ಎಎಂಸಿ ಪ್ಯಾಕೇಜ್ ಕೂಡಾ ನೀಡಲಾಗುತ್ತಿದೆ ಎಂಬುದು ವಿಶೇಷ.




