ಭಾರತದಲ್ಲಿ ಸದ್ಯ ಎಸ್ಯುವಿಗೆ ಎಲ್ಲಿಲ್ಲದ ಬೇಡಿಕೆ. ಕಾರು ಖರೀದಿಸುಬೇಕೆನ್ನುವವರ ಮೊದಲ ಆಯ್ಕೆಯೇ ಎಸ್ಯುವಿ. ಹೀಗಾಗಿ ಗ್ರಾಹಕರ ಅಪೇಕ್ಷೆಗೆ ತಕ್ಕಂತೆ ಹೊಸ ಮಾದರಿಯ ಕಾರುಗಳನ್ನು ಕಂಪನಿಗಳೂ ಪರಿಚಯಿಸುತ್ತಿವೆ. ಭಾರತದ ಟಾಟಾ ಮತ್ತು ದಕ್ಷಿಣ ಕೊರಿಯಾ ಮೂಲದ ಹ್ಯುಂಡೇ ಕಂಪನಿಗಳು ಎರಡು ಪ್ರಮುಖ ಕಾರುಗಳನ್ನು ನವೆಂಬರ್ನಲ್ಲಿ ಪರಿಚಯಿಸುತ್ತಿದೆ.
ಟಾಟಾ ಕಂಪನಿಯ ಸಿಯಾರಾ ಎಸ್ಯುವಿಯನ್ನು 2025ರ ನವೆಂಬರ್ನಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಎರಡು ದಶಕಗಳ ಹಿಂದೆ ಸದ್ದು ಮಾಡಿದ್ದ ಸಿಯಾರಾ ನಂತರ ಮರೆಯಗಿತ್ತು. ಇದೀಗ ಅದೇ ಬ್ರಾಂಡ್ ಅನ್ನು ಟಾಟಾ ಕಂಪನಿ ಪರಿಚಯಿಸುತ್ತಿದೆ. ಇಂಟರ್ನಲ್ ಕಂಬಶ್ಚನ್ ಎಂಜಿನ್ ಆಯ್ಕೆ ಇತ್ತು. ಈ ಬಾರಿ 1.5 ಲೀಟರ್ ಸಾಮರ್ಥ್ಯದ ಪೆಟ್ರೋಲ್, ಟರ್ಬೊ ಪೆಟ್ರೋಲ್ ವೇರಿಯಂಟ್ ಕಾರನ್ನು ಪರಿಚಯಿಸುತ್ತಿದೆ.
2.0 ಲೀ. ಡಿಸೆಲ್ ಎಂಜಿನ್ ಅನ್ನು ಸಿಯಾರಾ ಅಳವಡಿಸಿದೆ. ಫಿಯೆಟ್ ಕಂಪನಿ ಸಿದ್ಧಪಡಿಸಿದ ಈ ಎಂಜಿನ್ ಅನ್ನು ಈಗಾಗಲೇ ಟಾಟಾ ಕಂಪನಿ ಹ್ಯಾರಿಯರ್ ಹಾಗೂ ಸಫಾರಿಯಲ್ಲಿ ಅಳವಡಿಸಿದೆ. ಇದರಲ್ಲಿ ಮ್ಯಾನುಯಲ್ ಮತ್ತು ಆಟೊಮ್ಯಾಟಿಕ್ ಟ್ರಾನ್ಸ್ಮಿಷನ್ ಹೊಂದಿದೆ. ಜತೆಗೆ ಆಲ್ ವೀಲ್ ಡ್ರೈವ್ (AWD) ಆಯ್ಕೆ ಇದೆ.
ಅತ್ಯಾಧುನಿಕ ತಂತ್ರಜ್ಞಾನವನ್ನು ಸಿಯಾರಾದಲ್ಲಿ ಅಳವಡಿಸಲಾಗಿದೆ. ಒಳಾಂಗಣದಲ್ಲಿ ಮೂರು ಸ್ಕ್ರೀನ್ಗಳ ಡ್ಯಾಶ್ಬೋರ್ಡ್, ಪ್ಯಾನಾರೊಮಿಕ್ ಸನ್ರೂಫ್, ಆನ್ಬೋರ್ಡ್ ಡ್ಯಾಶ್ಬೋರ್ಡ್, ವೈರ್ಲೆಸ್ ಆ್ಯಂಡ್ರಾಯ್ಡ್ ಮತ್ತು ಆ್ಯಪಲ್ ಕಾರ್ಪ್ಲೇ, ಅತ್ಯದ್ಭುತ ಸೌಂಡ್ಸಿಸ್ಟಂ, ವೈರ್ಲೆಸ್ ಚಾರ್ಜಿಂಗ್, ಅಡ್ವಾನ್ಸ್ ಲೆವೆಲ್ 2 ಎಡಿಎಎಸ್ ಅಳವಡಿಸಿ ಹೆಚ್ಚಿನ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಟಾಟಾ ಸಿಯಾರಾ ಎಸ್ಯುವಿ ₹15ಲಕ್ಷದಿಂದ ₹25ಲಕ್ಷವರೆಗೂ ಬೆಲೆ ನಿಗದಿಯಾಗಬಹುದು ಎಂದು ಅಂದಾಜಿಸಲಾಗಿದೆ. ಬ್ಯಾಟರಿ ಚಾಲಿತ ಇವಿ ಮಾದರಿಯು 2026ರ ಜನವರಿಯಲ್ಲಿ ರಸ್ತೆಗಿಳಿಯುವ ಸಾಧ್ಯತೆ ಇದೆ.

ಹ್ಯುಂಡೇ ವೆನ್ಯೂ: ಹೊಸ ಭಾಷ್ಯ
ಹ್ಯುಂಡೇ ಕಂಪನಿಯು ತನ್ನ ಪುಟ್ಟ ಎಸ್ಯುವಿ ವೆನ್ಯೂಗೆ ಹೊಸ ರೂಪ ನೀಡಿದೆ. ಹೀಗಾಗಿ 2ನೇ ತಲೆಮಾರಿನ ವೆನ್ಯೂವನ್ನು 2025ರ ನ. 4ರಂದು ಬಿಡುಗಡೆಯಾಗಬೇಕು. ಹೊಸ ಸ್ಪೋರ್ಟ್ ರೂಪ ಪಡೆದಿರುವ ವೆನ್ಯೂ, ಬೋಲ್ಡ ವಿನ್ಯಾಸ ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸುರಕ್ಷತೆಗೆ ಆದ್ಯತೆ ನೀಡಲಾಗಿದೆ.
1.2 ಲೀ ಪೆಟ್ರೋಲ್ ಎಂಜಿನ್, ಝಿಪ್ಪಿ 1.0ಲೀ ಟರ್ಬೊ ಪೆಟ್ರೋಲ್ ಮತ್ತು ಇಂಧನ ಕ್ಷಮತೆಯ 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹ್ಯುಂಡೇ ನೀಡಿದೆ. 5 ಸ್ಪೀಡ್ ಮ್ಯಾನುಯಲ್, 6 ಸ್ಪೀಡ್ ಐಎಂಟಿ ಮತ್ತು 7 ಸ್ಪೀಡ್ನ ಡುಯಲ್ ಕ್ಲಚ್ ಆ್ಯಟೊಮ್ಯಾಟಿಕ್ ಟರ್ಬೊ ಎಂಜಿನ್ ಮಾದರಿ ಲಭ್ಯ.
12.3 ಇಂಚಿನ ಸ್ಕ್ರೀನ್, ವೆಂಟಿಲೇಟೆಡ್ ಸಿಟ್, ವೈರ್ಲೆಸ್ ಚಾರ್ಜರ್, 6 ಏರ್ ಬ್ಯಾಗ್, 360 ಡಿಗ್ರಿ ಕ್ಯಾಮೆರಾ ಮತ್ತು ಲೆವೆಲ್ 2 ಎಡಿಎಎಸ್ ಇದು ಹೊಂದಿದೆ.
ಶಕ್ತಿಶಾಲಿ ಎಂಜಿನ್, ಎಸ್ಯುವಿಯ ಭಾಷ್ಯ, ಸುರಕ್ಷತೆಗೆ ಹೊಸ ಸಾಧನ, ಮನರಂಜನೆಗೂ ಆದ್ಯತೆ, ಬೆಲೆಯಲ್ಲೂ ಹೆಚ್ಚು ಆಪ್ತವಾಗಿರುವ ಈ ಎರಡು ಕಾರುಗಳು ಈ ವರ್ಷದ ಉತ್ತಮ ಆಯ್ಕೆಗಳ ಕಾರುಗಳ ಸಾಲಿಗೆ ಸೇರಲಿವೆ.




