ಹೈಬ್ರಿಡ್ ಕಾರುಗಳು: ಭಾರತದಲ್ಲಿ ಲಭ್ಯವಿರುವ 5 ಪ್ರಮುಖ ಕಾರುಗಳಿವು…

ಏರುತ್ತಿರುವ ಇಂಧನ ಬೆಲೆ, ದುಬಾರಿಯಾಗುತ್ತಿರುವ ಜನಜೀವನದ ನಡುವೆಯೂ ಉತ್ತಮ ಎಸ್‌ಯುವಿ ಕಾರುಗಳ ಖರೀದಿಸುವ  ಇಂಗಿತ ಹಲವರದ್ದಾಗಿರುತ್ತದೆ. ಅಂಥವರಿಗೆ ಬ್ಯಾಟರಿ ಮತ್ತು ದಹಿಸುವ ಇಂಧನ ಎರಡನ್ನೂ ಬಳಸಿ ಉತ್ತಮ ಇಂಧನ ಕ್ಷಮತೆ ನೀಡುವ ಮೂಲಕ ಜೇಬಿನ ಹೊರೆ ತಗ್ಗಿಸುವ ಐದು ಪ್ರಮುಖ ಹೈಬ್ರಿಡ್ ಕಾರುಗಳ ಮಾಹಿತಿ ಇಲ್ಲಿದೆ.

ಮಾರುತಿ ಸುಜುಕಿ ವಿಕ್ಟೊರಿಸ್

ಬೆಲೆ: ₹10.50 ಲಕ್ಷದಿಂದ ₹19.99ಲಕ್ಷ

ಸಂಪೂರ್ಣ ಹೈಬ್ರಿಡ್ ಕಾರುಗಳಲ್ಲಿ ಮಾರುತಿ ವಿಕ್ಟೊರಿಸ್‌ ಅತ್ಯಂತ ಅಗ್ಗದ ಬೆಲೆಯದ್ದು. ಪ್ರತಿ ಲೀಟರ್‌ಗೆ 27 ಕಿ.ಮೀ. ಇಂಧನ ಕ್ಷಮತೆ ಹೊಂದಿದೆ. ಟೊಯೊಟಾ ಕಂಪನಿಯ ಜತೆಗೂಡಿ ಮಾರುತಿ ಸುಜುಕಿ ಹೈಬ್ರಿಡ್ ವ್ಯವಸ್ಥೆ ಅಭಿವೃದ್ಧಿಪಡಿಸಿದೆ. ಪೆಟ್ರೋಲ್‌ ಮಾದರಿಯ ಈ ಕಾರು ನಗರ ಹಾಗೂ ಹೆದ್ದಾರಿ ಸಂಚಾರಕ್ಕೆ ಸೂಕ್ತವಾದದ್ದು.

ಟೊಯೊಟಾ ಅರ್ಬನ್ ಕ್ರೂಸರ್‌ ಹೈರಡರ್‌

ಬೆಲೆ: ₹10.95ಲಕ್ಷದಿಂದ ₹19.76ಲಕ್ಷ

ಟೊಯೊಟಾ ಹೈಬ್ರಿಡ್ ಸಿನರ್ಜಿ ಡ್ರೈವ್‌ ಎಸ್‌ಯುವಿ ಕಾರು 1.5 ಲೀಟರ್ ಪೆಟ್ರೋಲ್ ಎಂಜಿನ್‌ ಹೊಂದಿದೆ. ಇದು ಪ್ರತಿ ಲೀಟರ್‌ಗೆ 27.97 ಕಿ.ಮೀ. ಇಂಧನ ಕ್ಷಮತೆ ಹೊಂದಿದೆ. ಕಾರಿನ ಚಾಲನೆ ಮತ್ತು ಸದೃಢ ಗುಣಲಕ್ಷಣ ಹೊಂದಿದೆ. ಹೀಗಾಗಿ ಇಂಡಿಯಾದ ಅಗ್ರ ಶ್ರೇಯಾಂಕದ ಹೈಬ್ರಿಡ್ ಎಸ್‌ಯುವಿ ಆಗಿದೆ.

ಮಾರುತಿ ಸುಜುಕಿ ಗ್ರಾಂಡ್ ವಿಟಾರಾ

ಬೆಲೆ: ₹10.77ಲಕ್ಷದಿಂದ ₹19.72ಲಕ್ಷ

ಮಾರುತಿ ಸುಜುಕಿಯ ಮತ್ತೊಂದು ಸದೃಢ ಹೈಬ್ರಿಡ್ ಎಸ್‌ಯುವಿ ಎಂದರೆ ಅದು ಗ್ರಾಂಡ್ ವಿಟಾರಾ. ಹೈರಡರ್‌ ಪವರ್‌ಟ್ರೈನ್‌ನಿಂದ ಪ್ರೇರಣೆ ಪಡೆದ ಈ ಕಾರು ಸುಂದರ ಒಳಾಂಗಣ, ಉತ್ತಮ ಚಾಲನಾ ಅನುಭವ ನೀಡುವ ಕಾರು. ಎಲ್ಲಾ ಚಕ್ರಗಳ ಚಾಲನೆಗೆ ಪೂರಕವಾದ ಆಲ್‌ ವೀಲ್‌ ಡ್ರೈವ್‌ ಆಯ್ಕೆಯೂ ಇದರದಲ್ಲಿದೆ. ಪ್ರತಿ ಲೀಟರ್‌ಗೆ 28 ಕಿ.ಮೀ.

ಟೊಯೊಟಾ ಇನ್ನೋವಾ ಹೈಕ್ರಾಸ್

ಬೆಲೆ: ₹25.90ಲಕ್ಷದಿಂದ ₹30ಲಕ್ಷ

ಟೊಯೊಟಾ ಕಂಪನಿಯ ಮತ್ತೊಂದು ಹೈಬ್ರಿಡ್ ಎಂಪಿವಿ ಹೈಕ್ರಾಸ್. ಸಂಪೂರ್ಣ ಕೌಟುಂಬಿಕ ಕಾರ್ ಆಗಿರುವ ಇದು ದೂರದ ಪ್ರಯಾಣಕ್ಕೆ ಹೇಳಿ ಮಾಡಿಸಿದ ಕಾರು. 2.0 ಲೀಟರ್ ಹೈಬ್ರಿಡ್ ಎಂಜಿನ್ ಅನ್ನು ಇದು ಹೊಂದಿದೆ. ಸುರಕ್ಷತೆಗೆ ಗರಿಷ್ಠ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಲೀಟರ್‌ಗೆ 21 ಕಿ.ಮೀ. ಇಂಧನ ಕ್ಷಮತೆ ಹೊಂದಿದೆ.

ಹೊಂಡಾ ಸಿಟಿ e:HEV

ಬೆಲೆ: ₹19.53 ಲಕ್ಷ

ಭಾರತದ ಮೊದಲ ಮಾಸ್‌ ಮಾದರಿಯ ಹೈಬ್ರಿಡ್ ಸೆಡಾನ್‌ ಹೊಂಡಾ ಸಿಟಿ e:HEV ಉತ್ತಮ ಆಯ್ಕೆ. ಪ್ರತಿ ಲೀಟರ್‌ಗೆ 26.5 ಕಿ.ಮೀ. ಇಂಧನ ಕ್ಷಮತೆ ಹೊಂದಿದೆ. ಮೃದುವಾದ ಚಾಲನಾ ಅನುಭವ ಇದರದ್ದು. ಹೊಂಡಾ ಕಂಪನಿಯ ಡುಯಲ್ ಮೋಟಾರ್‌ ಇ–ಸಿವಿಟಿ ಎಂಜಿನ್ ವ್ಯವಸ್ಥೆ ಇದರದ್ದು. ಎಡಿಎಎಸ್‌ ವ್ಯವಸ್ಥೆಯನ್ನೂ ಹೊಂದಿದ್ದು, ಸುರಕ್ಷತೆಗೆ ಗರಿಷ್ಠ ಗಮನ ನೀಡಲಾಗಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ