2026ರಲ್ಲಿ ನಿರೀಕ್ಷಿಸಬಹುದಾದ ಲಕ್ಷುರಿ ಕಾರುಗಳಿವು

BMW-neue-klasse

ಬರಲಿರುವ 2026ರಲ್ಲಿ ಹಲವು ವಿಲಾಸಿ ಕಾರುಗಳು ಮಾರುಕಟ್ಟೆಗೆ ಪ್ರವೇಶಿಸುತ್ತಿವೆ. ಇವುಗಳಲ್ಲಿ ಕೆಲವು ಬ್ಯಾಟರಿ ಚಾಲಿತ EV ಕಾರುಗಳು. ಇನ್ನೂ ಕೆಲವು ಸೂಪರ್‌ ಕಾರುಗಳು. ಮತ್ತೂ ಕೆಲವು ವಿಲಾಸಿ ಕಾರುಗಳು.

ಅವುಗಳಲ್ಲಿ ಒಂದೊಂದರಂತೆ ವಿವರಿಸುವುದಾದರೆ…

  • BMW Neue Klasse EV: ಜರ್ಮನಿಯ ಬಿಎಂಡಬ್ಲೂ ಹೊಚ್ಚ ಹೊಸ ಪ್ಲಾಟ್‌ಫಾರ್ಮ್‌ನ ಕಾರುಗಳನ್ನು ಬಿಡುಗಡೆ ಮಾಡುತ್ತಿದ್ದು, ಇವುಗಳು ಹಲವು ಮಾದರಿಗಳಲ್ಲಿ ಪರಿಚಯಗೊಳ್ಳುತ್ತಿವೆ. ಸುದೀರ್ಘ ಪ್ರಯಾಣಕ್ಕೆ ಉತ್ತಮ ರೇಂಜ್‌ ಮತ್ತು ಅತ್ಯಾಧುನಿಕ ಡಿಜಿಟಲ್ ಕಾಕ್‌ಪಿಟ್‌ನೊಂದಿಗೆ ಬರುತ್ತಿದೆ.
  • Mercedes-Benz EQ: ಇನ್ನಷ್ಟು ವಿಲಾಸಿ ಬ್ಯಾಟರಿ ಚಾಲಿತ ಇವಿ ಕಾರುಗಳನ್ನು ಪರಿಚಯಿಸುತ್ತಿದೆ. ಇದರಲ್ಲಿ ಸೆಡಾನ್‌ ಮಾದರಿ ಹಾಗೂ ಎಸ್‌ಯುವಿ ಕಾರುಗಳನ್ನು ಪರಿಚಯಿಸುತ್ತಿದೆ. ಬ್ಯಾಟರಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿದೆ.
  • Toyota solid-state EVs: ಟೊಯೊಟಾ ಕಂಪನಿಯು ತಮ್ಮ ಚೊಚ್ಚಲ ಸಂಪೂರ್ಣ ಬ್ಯಾಟರಿ ಚಾಲಿತ ಕಾರನ್ನು 2026ರಲ್ಲಿ ಬಿಡುಗಡೆ ಮಾಡುತ್ತಿದೆ. ತ್ವರಿತ ಚಾರ್ಜ್‌ ಮತ್ತು ಅಧಿಕ ರೇಂಜ್‌ ಇದರ ವೈಶಿಷ್ಟ್ಯತೆ.

ಸೂಪರ್‌ ಕಾರುಗಳು ಮತ್ತು ವಿಲಾಸಿ ಕಾರುಗಳು

  • Ferrari’s next-generation hybrid supercar: ಬ್ಯಾಟರಿ ಚಾಲಿತ ಹಾಗೂ ಫೆರಾರಿಯ ಎಂದಿನ ಖಡಕ್‌ ಸಾಮರ್ಥ್ಯದ ಸೂಪರ್‌ ಕಾರು ಇದಾಗಿದೆ.
  • Lamborghini’s EV: ಗ್ರ್ಯಾಂಡ್‌ ಟೂರ್ ಮಾದರಿಯಲ್ಲಿ ಲ್ಯಾಂಬೊರ್ಗಿನಿ ಹೊಸ ಅವತಾರದಲ್ಲಿ ಪರಿಚಯಗೊಳ್ಳುತ್ತಿದೆ.
  • Rolls-Royce EV: ವಿಲಾಸಿ ಕಾರು ರೋಲ್ಸ್‌ ರಾಯ್ಸ್‌ ಹೊಚ್ಚ ಹೊಸ ಮಾದರಿಯಲ್ಲಿ ಇವಿ ಸ್ವರೂಪದಲ್ಲಿ ಬರುತ್ತಿದೆ. ಇನ್ನೂ ಹೆಚ್ಚು ವಿಲಾಸಿತನ ಆದರೆ ತಂತ್ರಜ್ಞಾನದ ಬಲವೂ ಈ ಬಾರಿ ರೋಲ್ಸ್‌ ರಾಯ್ಸ್ ಪ್ರಿಯರಿಗೆ ಸಿಗಲಿದೆ.

ಪ್ರಮುಖ ಅನ್ವೇಷಣೆ

  • Volkswagen ID: ಕೈಗೆಟಕುವ ಬೆಲೆಯಲ್ಲಿ ಇವಿ ಮಾದರಿಯನ್ನು ಪರಿಚಯಿಸುತ್ತಿದೆ. ಇವುಗಳಲ್ಲಿ ಪುಟ್ಟ ಹ್ಯಾಚ್‌ ಬ್ಯಾಕ್‌ನಿಂದ ದೊಡ್ಡ ಎಸ್‌ಯುವಿವರೆಗೂ ಲಭ್ಯ.
  • Ford’s next-gen EV trucks: ಫೋರ್ಡ್‌ ಕಂಪನಿಯು ಎಫ್‌–150 ಇವಿ ಟ್ರಕ್‌ಗಳನ್ನು ಅಭಿವೃದ್ಧಿಪಡಿಸಿದೆ. ಸುಧಾರಿಸಿದ ಅತ್ಯತ್ತಮ ರೇಂಜ್ ಬ್ಯಾಟರಿಯನ್ನು ನೀಡಲಾಗಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ