ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಇತ್ತೀಚಿನ ಹೊಸ ಸೇರ್ಪಡೆ ಟಾಟಾ ಸಿಯಾರಾ. 2000 ಇಸವಿಯಲ್ಲಿ ಭಾರಿ ಸದ್ದು ಮಾಡಿದ್ದ ಸಿಯಾರಾ ಇದೀಗ ಹೊಸ ಅವತಾರದೊಂದಿಗೆ ಮತ್ತೆ ರಸ್ತೆಗಿಳಿದಿದೆ. ಅತ್ಯಾಧುನಿಕ ಸೌಕರ್ಯ, ಹೊಸ ವಿನ್ಯಾಸ ಮತ್ತು ಸುರಕ್ಷತೆಯ ಹೊಸ ಭಾಷ್ಯದೊಂದಿಗೆ ಈ ಕಾರನ್ನು ಟಾಟಾ ಪರಿಚಯಿಸಿದೆ. ಅದೂ ಆರಂಭಿಕ ಬೆಲೆ ₹11.49 (ಎಕ್ಸ್ ಶೋ ರೂಂ) ಬೆಲೆಗೆ.
ಈ ವಿಭಾಗದಲ್ಲಿ ಸಿಯಾರಾಗೆ ಪೈಪೋಟಿ ನೀಡಲು ಈಗಾಗಲೇ ಹಲವು ಪ್ರತಿಷ್ಠಿತ ಕಂಪನಿಗಳ ಕಾರುಗಳು ಮಾರುಕಟ್ಟೆಯಲ್ಲಿವೆ. ಸಿಯಾರಾದೊಂದಿಗೆ ಹೋಲಿಸುವುದಾದರೆ ಏನೆಲ್ಲಾ ಸೌಲಭ್ಯಗಳು ಅವುಗಳದ್ದು ಎಂಬುದರ ಮಾಹಿತಿ ಇಲ್ಲಿದೆ.
ಸಿಯಾರಾದಲ್ಲಿ ಏನೇನಿದೆ?
- Tata Motors ತನ್ನ ಐಕಾನಿಕ್ “Sierra” ಹೆಸರನ್ನು ಮತ್ತೆ ಪರಿಚಯಿಸಿದ್ದು, ಮಧ್ಯಮ ಗಾತ್ರದ SUV ಆಗಿ ವಿನ್ಯಾಸಗೊಳಿಸಿದೆ.
- ಇದರಲ್ಲಿ ಬಹುತೇಕ ಸೌಲಭ್ಯಗಳು ಹೊಸ ಮಾದರಿಯವು — ಟ್ರಿಪಲ್-ಸ್ಕ್ರೀನ್ ಡ್ಯಾಶ್‌ಬೋರ್ಡ್, JBL 12-ಸ್ಪೀಕರ್ ಡಾಲ್ಬಿ ಆಸ್ಮೋಸ್ ಸೌಂಡ್ ಸಿಸ್ಟಮ್, ಹಿತ ನೀಡುವ ಆ್ಯಂಬಿಯಂಟ್ ಲೈಟ್, ಪ್ಯಾನಾರೊಮಿಕ್ ಸನ್‌ರೂಫ್ ಹಾಗೂ ಇತ್ಯಾದಿ.
- ಎಂಜಿನ್‌ನಲ್ಲೂ ಹಲವು ಆಯ್ಕೆಗಳನ್ನು ಟಾಟಾ ನೀಡಿದೆ. ಉದಾಹರಣೆಗೆ, 1.5-ಲೀಟರ್ TGDi ಟರ್ಬೊ ಪೆಟ್ರೋಲ್ (168 bhp, 280 Nm ಟಾರ್ಕ್), 1.5 ಲೀಟರ್ ಹೈಪರಿಯಾನ್ ಟಿ–ಜಿಡಿಐ ಪೆಟ್ರೋಲ್ ಎಂಜಿನ್ ಮತ್ತು ಆಟೊಮ್ಯಾಟಿಕ್ ಟಾರ್ಕ್ ಕನ್ವರ್ಟರ್‌ನೊಂದಿಗೆ ಪರಿಚಯಿಸಿದೆ.
- ಇದರೊಂದಿಗೆ ಹೊಸ ಮಾದರಿಯ 1.5 ಲೀಟರ್‌ನ ರಿವರ್‌ಟ್ರಾನ್ ನೈಸರ್ಗಿಕ ಆಸ್ಪಿರೇಷನ್ ಪೆಟ್ರೋಲ್ ಎಂಜಿನ್ ಮ್ಯಾನುಯಲ್ ಟ್ರಾನ್ಸ್‌ಮಿಷನ್ ಮತ್ತು ಡಿಸಿಎ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ನೀಡಲಾಗಿದೆ.
- 1.5 ಲೀಟರ್ ಕ್ರಯೊಜೆಟ್ ಡೀಸೆಲ್ ಎಂಜಿನ್ ಆಯ್ಕೆಯೂ ಸಿಯಾರಾದಲ್ಲಿದ್ದು, ಮ್ಯಾನುಯಲ್ ಮತ್ತು ಆಟೊಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಸೌಲಭ್ಯದೊಂದಿಗೆ ನೀಡಲಾಗಿದೆ.
- ಕಂಪನಿಯ ಭವಿಷ್ಯದ ಯೋಜನೆಯೊಂದರಲ್ಲಿ EV ಕೂಡಾ ಇದೆ
ಈಗಿನ ಪ್ರಮುಖ ಪ್ರತಿಸ್ಪರ್ಧಿಗಳಾದ Creta, Seltos, Kushaq, Taigun ನೋಡೋಣ
Hyundai Creta ಮತ್ತು Kia Seltos
- Hyundai ಮತ್ತು Kia ಇದೂ ಮಿಡ್-ಸೈಸ್ SUV ಶ್ರೇಣಿಯಲ್ಲಿ ಅತ್ಯಂತ ಜನಪ್ರಿಯ ಕಾರುಗಳು
- 2025ರಲ್ಲಿ 1.94 ಲಕ್ಷದಷ್ಟು ಕ್ರೆಟಾ ಮಾರಾಟವಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 20ರಷ್ಟು ಹೆಚ್ಚಳ.
- Seltos ಮಾರಾಟ ಏರಿಕೆಯಾಗಿದ್ದರೂ ಕೆಲ ತಿಂಗಳಲ್ಲಿ ಅದರ ಮಾರಾಟದಲ್ಲಿ ಕುಸಿತವೂ ಕಂಡು ಬಂದಿದೆ.
- ಇವೆರಡೂ ಸಾಕಷ್ಟು ವೇರಿಯಂಟ್ ಆಯ್ಕೆಗಳು, ವ್ಯಾಪಕ ಡೀಲರ್-ನೆಟ್‌ವರ್ಕ್, ಮತ್ತು ಮಾರುಕಟ್ಟೆಯಲ್ಲಿ ಬೆಸ್ಟ್-ಸೆಲ್ ಆದ ದಾಖಲೆ ಹೊಂದಿವೆ.
Skoda Kushaq ಮತ್ತು Volkswagen Taigun
- ಜರ್ಮನಿಯ ಸ್ಕೋಡಾ ಮತ್ತು ಫೋಕ್ಸ್‌ವ್ಯಾಗನ್ ಕಂಪನಿಯ ಮಧ್ಯಮ ಗಾತ್ರದ SUVಗಳಾದ ಕುಷಾಕ್ ಮತ್ತು ಟೈಗುನ್‌ಗಳು ಸದೃಢ ದೇಹ, ಚಾಲನಾ ನಿರ್ವಹಣೆ ಮತ್ತು ಅತ್ಯಾಧುನಿಕ ತಂತ್ರಜ್ಞಾನದಿಂದ ಜನಪ್ರಿಯತೆ ಪಡೆದಿವೆ.
- ಭವಿಷ್ಯದಲ್ಲಿ ಇವು ADAS (Level 2) ಮತ್ತು 360° ಕ್ಯಾಮೆರಾ ಹೊಂದಲಿವೆ. 2026ರಲ್ಲಿ ಇವುಗಳ ಅಪ್‌ಡೇಟೆಡ್ ಆವೃತ್ತಿಗಳು ಬಿಡುಗಡೆಯಾಗುವ ಸಾಧ್ಯತೆಗಳಿವೆ.
- 1.0 TSI ಅಥವಾ 1.5 TSI ಟರ್ಬೋ ಎಂಜಿನ್ ಆಯ್ಕೆಗಳು ಇದ್ದು, ರಸ್ತೆ ಹಿಡಿತ ಮತ್ತು ಇಂಧನ ಕ್ಷಮತೆ ಎರಡರಲ್ಲಿಯೂ ಸಮತೋಲನ ನೀಡುತ್ತದೆ ಎಂದೇ ಜನಪ್ರಿಯತೆ ಪಡೆದಿವೆ.
- ಈ ಎರಡೂ ಕಾರುಗಳು ನಂಬಿಕೆ ಮತ್ತು ಮರು ಮಾರಾಟ ಮೌಲ್ಯದಲ್ಲಿ ವ್ಯತ್ಯಾಸ ಇರುವುದಾಗಿ ಗ್ರಾಹಕರು ಹೇಳಿದ್ದಾರೆ. ಉತ್ತಮ ಗುಣಮಟ್ಟದ ಕಾರುಗಳೇ ಆದರೂ, ಸರ್ವೀಸ್ ಮತ್ತು ಬಿಡಿಭಾಗಗಳ ಲಭ್ಯತೆಯಲ್ಲಿ ಸಮಸ್ಯೆ ಇದೆ ಎಂದೇ ಹೇಳಲಾಗುತ್ತದೆ.
ಹಾಗಿದ್ದರೆ ಸಿಯಾರಾ ಆಯ್ಕೆಗೂ ಮುನ್ನ ಯೋಚಿಸಬೇಕಾದ್ದು ಏನು?
25 ವರ್ಷಗಳ ನಂತರ ಹೊಸ ರೂಪದೊಂದಿಗೆ ಬಂದಿರುವ ಸಿಯಾರಾ ಎಂದರೆ ಹಲವರಿಗೆ ಭಾವನಾತ್ಮಕ ಸಂಬಂಧ. ಹೊಸ ಫೀಚರ್‌ಗಳು ಎಂಥವರನ್ನೂ ಆಕರ್ಷಿಸುವಂತಿದೆ ಎಂಬುದು ಅತಿಶಯೋಕ್ತಿಯಲ್ಲ. ಆದರೆ ಅವೆಲ್ಲವೂ ಯಶಸ್ವಿಯಾಗಲು ಸೇವಾ ವಲಯವನ್ನು ಕಂಪನಿ ಹೆಚ್ಚಿಸಬೇಕು ಎಂಬುದು ಗ್ರಾಹಕರ ಬೇಡಿಕೆ.
ಬೆಂಗಳೂರು ಒಳಗೊಂಡಂತೆ ಇತರ ನಗರಗಳಲ್ಲಿ ಲೈಫ್‌ಸ್ಟೈಲ್ ಎಸ್‌ಯುವಿಗಳಿಗೆ ಬೇಡಿಕೆ ಹೆಚ್ಚು. ಸಿಯಾರಾದಂತ ಮೃದು, ಶ್ರೇಷ್ಠ ತಂತ್ರಜ್ಞಾನದ ಕಾರುಗಳನ್ನು ಯುವಜನರು ಇಷ್ಟು ಪಡುವುದೇ ಹೆಚ್ಚು. ಅದರಲ್ಲೂ ವೀಕೆಂಡ್ ಡ್ರೈವ್‌ಗಾಗಿ ಬಹಳಷ್ಟು ಜನ ಅಪೇಕ್ಷೆಪಡುವಂತೆ ಇದರ ವಿನ್ಯಾಸ ಮಾಡಲಾಗಿದೆ.




