Vroom 13ನೇ ಆವೃತ್ತಿ: ರಾಷ್ಟ್ರಮಟ್ಟದ ಡ್ರ್ಯಾಗ್ ರೇಸ್‌ ಚಾಂಪಿಯನ್‌ಶಿಪ್‌ ಬೆಂಗಳೂರಿನಲ್ಲಿ

ವ್ರೂಂ ಡ್ರ್ಯಾಗ್ ರೇಸ್

ಹೊಸೂರು: ಭಾರತದ ಅತ್ಯಂತ ಪ್ರತಿಷ್ಠಿತ ಡ್ರ್ಯಾಗ್ ರೇಸ್‌ ಬೆಂಗಳೂರು ಬಳಿಯ ಹೊಸೂರಿನಲ್ಲಿ ಇದೇ ಡಿಸೆಂಬರ್ 12ರಿಂದ 14ರವರೆಗೆ ಆಯೋಜನೆಗೊಂಡಿದೆ.

ವ್ರೂಮ್‌ ಡ್ರ್ಯಾಗ್ ಮೀಟ್‌ನ 13ನೇ ಆವೃತ್ತಿ ಇದಾಗಿದೆ. ಹೊಸೂರು ಬಳಿಯ ತನೇಜಾ ಏರೋಸ್ಪೇಸ್ ಮತ್ತು ಏವಿಯೇಷನ್‌ ಲಿಮಿಟೆಡ್‌ಗೆ ಸೇರಿದ ಜಾಗದಲ್ಲಿ ಈ ಡ್ರ್ಯಾಗ್ ರೇಸ್‌ ನಡೆಯುತ್ತಿದೆ.

ವ್ರೂಂ ಮೋಟಾರ್‌ಸ್ಪೋರ್ಟ್ಸ್ ಮತ್ತು ಸ್ಪೀಡ್‌ವೇ ಮೊಟಾರ್‌ಸ್ಪೋರ್ಟ್ಸ್‌ ಆಯೋಜಿಸಿರುವ ಈ ಅತ್ಯಂತ ಕುತೂಹಲಕಾರಿ ರೌಂಡ್ 3 ಹಾಗೂ 4ರ ಎಫ್‌ಎಂಎಸ್‌ಸಿಐ ಇಂಡಿಯನ್‌ ನ್ಯಾಷನಲ್ ಡ್ರ್ಯಾಗ್ ರೇಸಿಂಗ್ ಚಾಂಪಿಯನ್‌ಶಿಪ್‌ ಕೂಡಾ ನಡೆಯುತ್ತಿದ್ದು, ಇದು ಕಾರುಗಳಿಗೆ ಮಾತ್ರ. ಉತ್ಕೃಷ್ಟ ಸಾಹಸವನ್ನು ಬಯಸುವ ವಾಹನ ಪ್ರಿಯರು ಈ ಕ್ಷಣಕ್ಕಾಗಿ ಕಳೆದ ಹಲವು ತಿಂಗಳುಗಳಿಂದ ಕಾದಿದ್ದರು.

ದ್ವಿಚಕ್ರ ಹಾಗೂ ಕಾರುಗಳ ಡ್ರ್ಯಾಗ್ ರೇಸ್ ಉಸಿರು ಬಿಗಿಹಿಡಿದು ನೋಡುವಂತಿರುತ್ತದೆ. ದೇಶದ ನಾನಾ ಮೂಲೆಯಿಂದ ಈ ಸ್ಪರ್ಧೆಗಾಗಿ ಈಗಾಗಲೇ ಹಲವರು ನೋಂದಣಿ ಮಾಡಿಸಿದ್ದು, ವೀಕ್ಷಕರೂ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ತರಹೇವಾರಿ ಬೈಕ್ ಹಾಗೂ ಕಾರುಗಳು, ಮಾಡಿಫೈಡ್‌ ವಾಹನಗಳು, ಅತ್ಯಾಧುನಿಕ ಎಂಜಿನ್‌ ಹೊಂದಿರುವ ವಾಹನಗಳನ್ನು ನೋಡುವ ಅವಕಾಶ ಈ ಚಾಂಪಿಯನ್‌ಶಿಪ್‌ನಲ್ಲಿ ನೋಡಲು ಸಿಗಲಿದೆ. ಹೀಗಾಗಿ ಇದು ಕೇವಲ ರೇಸ್‌ ಎಂದಷ್ಟೇ ಅಲ್ಲದೆ, ವಾಹನಗಳ ಹಬ್ಬ ಎಂದೇ ಕರೆಯಲಾಗುತ್ತಿದೆ.

ರೇಸ್‌ನ ಜತೆಗೆ ಆಟೊ ಎಕ್ಸ್‌ಪೊ ಕೂಡಾ ಆಯೋಜನೆಗೊಂಡಿದೆ. ಪರ್ಫಾಮೆನ್ಸ್‌ ವಾಹನಗಳು, ಕಸ್ಟಂ ಬಿಲ್ಡ್ ವಾಹನಗಳು ಮತ್ತು ಆಟೊಮೊಟಿವ್ ಅಕ್ಸಸರೀಸ್‌ಗಳು ಇಲ್ಲಿ ಲಭ್ಯ.

ಇದರಲ್ಲಿ ಪಾಲ್ಗೊಳ್ಳುವುದು ಹೇಗೆ?

ವ್ರೂಂಗೆ ಹೋಗಬೇಕೆಂದವರು ಆನ್‌ಲೈನ್ ಮೂಲಕ ತಮ್ಮ ಟಿಕೆಟ್ ಕಾಯ್ದಿರಿಸಬಹುದು. ಟಿಕೆಟ್‌ಗಳು ಸ್ಪರ್ಧೆ ನಡೆಯುವ ತನೇಜಾ ಏರೋಸ್ಪೇಸ್ ಮತ್ತು ಏವಿಯೇಷನ್‌ ಲಿಮಿಟೆಡ್‌ ಜಾಗದಲ್ಲೂ ಸಿಗಲಿದೆ ಎಂದು ವರದಿಯಾಗಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ