SKODA Kushaq ಫೇಸ್‌ಲಿಫ್ಟ್: ಅದೇ ಗಡಸುತನ, ಆದರೆ ಹೊಸ ವಿನ್ಯಾಸ…

Skoda Kushaq

ಭಾರತದ ಎಸ್‌ಯುವಿ ಮಾರುಕಟ್ಟೆಯ ವೇಗವನ್ನೇ ಗಮನದಲ್ಲಿಟ್ಟುಕೊಂಡು ಸ್ಕೋಡಾ ಆಟೊ ಇಂಡಿಯಾ ಕಂಪನಿಯು ‘ಕುಶಾಕ್‌’ನ ನವೀಕೃತ ಮಾದರಿಯನ್ನು ಪರಿಚಯಿಸಿದೆ. 

ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಕೋಡಾ ನಿರ್ದೇಶಕ ಮಂಡಳಿ ಸದಸ್ಯ ಮಾರ್ಟಿನ್‌ ಜಾನ್‌ ಮತ್ತು ಭಾರತೀಯ ಬ್ರಾಂಡ್‌ ನಿರ್ದೇಶಕ ಅಶೀಶ್‌ ಗುಪ್ತಾ ಅವರು 2026ರ ಕುಶಾಕ್‌ ಫೇಸ್‌ಲಿಫ್ಟ್‌ ಮಾದರಿಯನ್ನು ಬಿಡುಗಡೆ ಮಾಡಿದರು. 

 ‘ಕಾರು ಡೆಲಿವರಿ ಮಾರ್ಚ್‌ನಿಂದಲೇ ಆದರೂ, ತಕ್ಷಣಕ್ಕೆ ₹15 ಸಾವಿರ ಪಾವತಿಸಿ ಹೊಸ ಕುಶಾಕ್‌ ಬುಕಿಂಗ್‌ ಮಾಡಿಕೊಳ್ಳಬಹುದು’ ಎಂದು ಗುಪ್ತಾ ಹೇಳಿದರು. 

ಶಿಮ್ಲಾ ಗ್ರೀನ್‌, ಸ್ಟೀಲ್‌ ‌ಗ್ರೇ ಮತ್ತು ಚೆರ್‍ರಿ ರೆಡ್‌ ಎಂಬ ಮೂರು ಹೊಸ ಬಣ್ಣಗಳು ಸೇರಿ ಒಟ್ಟು 8 ಬಣ್ಣಗಳಲ್ಲಿ ಕುಶಾಕ್‌ನ ನವೀಕೃತ ಮಾದರಿ ಲಭ್ಯ. ಫೇಸ್‌ಲಿಫ್ಟ್‌ ಕುಶಾಕ್‌ನ ಬೆಲೆಯನ್ನು ಕಂಪನಿ ಅಧಿಕೃತವಾಗಿ ಪ್ರಕಟಿಸಿಲ್ಲ. ಇದು ₹10.70 ಲಕ್ಷದಿಂದ ₹19 ಲಕ್ಷದವರೆಗೆ ಇರಲಿದೆ ಎಂದು ಮೂಲಗಳು ತಿಳಿಸಿವೆ. 

ಹೊಸ ಮಾದರಿಯ ಕುಶಾಕ್‌ನಲ್ಲಿ ವಿನ್ಯಾಸ ಮತ್ತು ಪವರ್‌ಟ್ರೇನ್‌ ಆಯ್ಕೆಗಳಲ್ಲಿ ಪ್ರಮುಖ ಬದಲಾವಣೆಗಳನ್ನು ತರಲಾಗಿದೆ. ಎಲ್ಲ ವೇರಿಯಂಟ್‌ಗಳಲ್ಲಿ ಪ್ಯಾನಾರೊಮಿಕ್‌ ಸನ್‌ರೂಫ್‌ ಮತ್ತು  6 ಏರ್‌ಬ್ಯಾಗ್‌ಗಳನ್ನು ನೀಡಲಾಗಿದೆ. ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ಮುಂಭಾಗದಲ್ಲಿ ಪಾರ್ಕಿಂಗ್‌ ಸೆನ್ಸರ್‌ ಅಳವಡಿಸಲಾಗಿದೆ.  

ಭಾರತ ಮತ್ತು ಐರೋಪ್ಯ ರಾಷ್ಟ್ರಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಭಾಗವಾಗಿ ಕಾರುಗಳ ಬಿಡಿ ಭಾಗಗಳನ್ನು ಯುರೋಪ್‌ನಿಂದ ತರಿಸಿಕೊಳ್ಳುವುದು ಸುಲಭವಾಗುವ ಕಾರಣ, ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಅನುಕೂಲವಾಗಲಿದೆ. ಜತೆಗೆ ಇವಿ ಕಾರುಗಳ ಮಾರುಕಟ್ಟೆಯತ್ತಲೂ ಸ್ಕೋಡಾ ಚಿಂತಿಸಲಿದೆ ಎಂದು ಮಾರ್ಟಿನ್ ತಿಳಿಸಿರುವುದಾಗಿ ವರದಿಯಾಗಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ