Kia Carens Clavis: ಮೂರು ಸಾಲಿನ ಕ್ಲವಿಸ್‌ನಲ್ಲಿ ಹತ್ತಾರು ಹೊಸ ಸೌಲಭ್ಯ; ಬುಕ್ಕಿಂಗ್ ಆರಂಭ

Kia Carens Clavis

ದಕ್ಷಿಣ ಕೊರಿಯಾದ ಕಿಯಾ ಇದೀಗ ತನ್ನದೇ ಕ್ಯಾರೆನ್ಸ್‌ ಎಂಪಿವಿಗೆ ಹೊಸ ರೂಪ ನೀಡಿ ಕ್ಯಾರನ್ಸ್‌ ಕ್ಲಾವಿಸ್ ಹೆಸರಿನಲ್ಲಿ ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ.

ಸದ್ಯ ಇರುವ ಕ್ಯಾರೆನ್ಸ್‌ಗಿಂತ ಮೇಲ್ದರ್ಜೆಯದ್ದಾದ ಕ್ಲಾವಿಸ್‌ ₹11.49 ಲಕ್ಷದಿಂದ ₹21.50 ಲಕ್ಷ ಬೆಲೆಯಲ್ಲಿ ಲಭ್ಯ. ಇದು ಎಕ್ಸ್‌ ಶೋರೂಂ ಬೆಲೆಯಾಗಿದೆ.

ಒಟ್ಟು ಏಳು ವೇರಿಯಂಟ್‌ಗಳಲ್ಲಿ ಕ್ಲಾವಿಸ್ ಲಭ್ಯ. HTE, HTE(O), HTK, HTK+, HTK+(O), HTX and HTX+ ಸೌಲಭ್ಯಗಳನ್ನು ಆಧರಿಸಿ ಈ ವೇರಿಯಂಟ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಕ್ಲಾವಿಸ್‌ನ ಒಳಾಂಗಣ ಹೆಚ್ಚು ಸುಂದರವಾಗಿದ್ದು, ವಿಲಾಸಿತನದಿಂದ ಕೂಡಿದೆ. 26.62 ಇಂಚುಗಳ ಪ್ಯಾನಾರಾಮಿಕ್ ಡಿಸ್‌ಪ್ಲೆ ನೀಡಲಾಗಿದೆ. ಇದರಲ್ಲಿ ಡಿಜಿಟಲ್ ಇನ್‌ಸ್ಟ್ರುಮೆಂಟ್‌ ಪ್ಯಾನಲ್‌ ಮತ್ತು ಇನ್ಫೊಟೈನ್ಮೆಂಟ್‌ ಸಿಸ್ಟಂ ಇದೆ. ಎರಡು ಸ್ಪೋಕ್‌ಗಳುಳ್ಳ ಸ್ಟಿಯರಿಂಗ್ ವಿಲ್‌ ಹಾಗೂ ಅದರಲ್ಲಿನ ಕಿಯಾ ಗುರುತು ಕ್ಲಾವಿಸ್‌ನಲ್ಲಿ ಅಳವಡಿಸಲಾಗಿದೆ.

ಒಟ್ಟು ಮೂರು ಸಾಲುಗಳ ಆಸನಗಳುಳ್ಳ ಕಾರು ಇದು. ಮೂರನೇ ಸಾಲಿಗೆ ಹೋಗಲು ಎರಡನೇ ಸಾಲಿನ ಆಸನ ಮಡಿಚಲು ಅನುಕೂಲವಾಗುವಂತೆ ಗುಂಡಿಯನ್ನು ನೀಡಲಾಗಿದೆ. ಇದರ ಬಳಕೆ ಸರಳ ಮತ್ತು ಅನಾಯಾಸವಾಗಿ ಮೂರನೇ ಸಾಲಿಗೆ ಹೋಗಲು ಅನುಕೂಲವಾಗುವಂತೆ ಮಾಡಲಾಗಿದೆ.

2ನೇ ಸಾಲಿನ ಆಸನಗಳು ಹಿಂದೆ ಮುಂದೆ ಹಾಗೂ ಆರಾಮವಾಗಿ ಮಲಗಲು ಬಾಗುವಂತೆ ಮಾಡಬಹುದು. 8 ಸ್ಪೀಕರ್‌ಗಳುಳ್ಳ ಬೋಸ್‌ ಮ್ಯೂಸಿಕ್‌ ಸಿಸ್ಟಂ ಕ್ಲಾವಿಸ್‌ ಹೊಂದಿದೆ. 64 ಬಣ್ಣಗಳ ಆಂಬಿಯಂಟ್‌ ಡಿಸ್‌ಪ್ಲೇ, 360 ಡಿಗ್ರಿ ಕ್ಯಾಮೆರಾ, ಸ್ಮಾರ್ಟ್‌ ಕೀ ವ್ಯವಸ್ಥೆ ಇದ್ದು, ಇದರಿಂದ ಎಲ್ಲಾ ಕಿಟಕಿಗಳನ್ನು ನಿರ್ವಹಿಸಬಹುದಾಗಿದೆ. ಎಲ್ಲಾ ಸೀಟುಗಳಲ್ಲೂ ಏರ್‌ ಪ್ಯೂರಿಫೈಯರ್‌ ಮತ್ತು ಎಸಿ ವೆಂಟ್‌ಗಳನ್ನು ಮೇಲ್ಚಾವಣಿಗೆ ಅಳವಡಿಸಲಾಗಿದೆ. ಪ್ಯಾನಾರೊಮಿಕ್‌ ಸನ್‌ರೂಫ್‌ ಅಳವಡಿಸಲಾಗಿದೆ. ವೆಂಟಿಲೇಟೆಡ್‌ ಸೀಟ್‌ಗಳನ್ನು ನೀಡಲಾಗಿದೆ. ಚಾಲಕನ ಆಸನವನ್ನು ಎಲೆಕ್ಟ್ರಿಕ್‌ ಗುಂಡಿಯೊಂದಿಗೆ ಹೊಂದಿಸಿಕೊಳ್ಳುವಂತ ವ್ಯವಸ್ಥೆ ನೀಡಲಾಗಿದೆ. ಹಾಗೂ ಇನ್ನಿತರ ಸೌಕರ್ಯಗಳನ್ನು ಕ್ಲಾವಿಸ್‌ನಲ್ಲಿ ಅಳವಡಿಸಲಾಗಿದೆ.

ಸುರಕ್ಷತೆಯ ದೃಷ್ಟಿಯಲ್ಲಿ ಕ್ಲಾವಿಸ್‌ನಲ್ಲಿ 2ನೇ ಹಂತರ ADAS ಇದೆ. ಈ ಎಂಪಿವಿಯಲ್ಲಿ ಚಾಲಕ ಸ್ನೇಹಿ 20 ಸೌಕರ್ಯಗಳನ್ನು ಅಳವಡಿಸಲಾಗಿದೆ. 6 ಏರ್‌ ಬ್ಯಾಗ್‌ಗಳನ್ನು ನೀಡಲಾಗಿದೆ. ಇಎಸ್‌ಸಿ, ಹಿಂಬದಿಯ ಆಸನಗಳ ಪ್ರಯಾಣಿಕರಿಗೂ ಎಚ್ಚರಿಸುವ ಸಂದೇಶ ನೀಡುವುದರ ಜತೆಗೆ 18 ಸಕ್ರಿಯ ಸುರಕ್ಷತಾ ಸಾಧನಗಳು ಇದರಲ್ಲಿವೆ.

ಇನ್ನು ಎಂಜಿನ್ ವಿಭಾಗಕ್ಕೆ ಬಂದಲ್ಲಿ, ಕಿಯಾ ಕ್ಯಾರೆನ್ಸ್‌ ಕ್ಲಾವಿಸ್‌ನಲ್ಲಿ 1.5 ಲೀಟರ್‌ ಪೆಟ್ರೋಲ್ ಎಂಜಿನ್‌ ಅಳವಡಿಸಲಾಗಿದೆ. ಇದು 113 ಬಿಎಚ್‌ಪಿ ಶಕ್ತಿಯನ್ನು ಉತ್ಪಾದಿಸಬಲ್ಲದು. ಟರ್ಬೊ ಪೆಟ್ರೋಲ್ ಮಾದರಿಯ ಕ್ಲಾವಿಸ್‌ 158 ಬಿಎಚ್‌ಪಿ ಶಕ್ತಿಯನ್ನು ಉತ್ಪಾದಿಸಬಲ್ಲದು. 1.5 ಲೀ. ಡೀಸೆಲ್‌ ಎಂಜಿನ್‌ ಕ್ಲಾವಿಸ್‌ 114 ಬಿಎಚ್‌ಪಿ ಶಕ್ತಿಯನ್ನು ಉತ್ಪದಿಸಬಲ್ಲದು.

ಪೆಟ್ರೋಲ್ ಮತ್ತು ಟರ್ಬೊ ಪೆಟ್ರೋಲ್ ಮಾದರಿಯ ಕ್ಲಾವಿಸ್‌ನಲ್ಲಿ ಹೊಸ ಬಗೆಯ ಮ್ಯಾನುಯಲ್ ಗೇರ್ ವ್ಯವಸ್ಥೆ ಅಳವಡಿಸಲಾಗಿದೆ. ಟರ್ಬೊ ಪೆಟ್ರೋಲ್ ಮತ್ತು ಡೀಸೆಲ್‌ ಮಾದರಿಯಲ್ಲಿ ಆಟೊಮ್ಯಾಟಿಕ್ ಗೇರ್‌ ವ್ಯವಸ್ಥೆಯೂ ಲಭ್ಯ.

ಬುಕ್ಕಿಂಗ್ ಆರಂಭವಾಗಿದೆ. ಟೆಸ್ಟ್‌ ಡ್ರೈವ್ ಮಾಡಿದ್ದರೆ ಅಥವಾ ಖರೀದಿಸಿದ್ದರೆ ಕಮೆಂಟ್‌ ಬಾಕ್ಸ್‌ನಲ್ಲಿ ನಿಮ್ಮ ಅನುಭವ ಹಂಚಿಕೊಳ್ಳಿ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ