ಟಾಟಾ ಮೋಟಾರ್ಸ್ ಕಾರು ತಯಾರಿಕಾ ಕಂಪನಿಯ ಅತ್ಯಂತ ಜನಪ್ರಿಯ ಎಸ್ಯುವಿ ಮಾದರಿಗಳಾದ ಹ್ಯಾರಿಯರ್ ಮತ್ತು ಸಫಾರಿ ಕಾರುಗಳಲ್ಲಿ ವಿನೂತನ ಅಡ್ವೆಂಚರ್ ಎಕ್ಸ್ ಮಾದರಿಯನ್ನು ಬಿಡುಗಡೆ ಮಾಡಿದೆ.
ಹ್ಯಾರಿಯರ್ ಅಡ್ವೆಂಚರ್ ಮಾದರಿಯು ₹18.99 ಲಕ್ಷದಿಂದ ಹಾಗೂ ಸಫಾರಿ ಅಡ್ವೆಂಚರ್ ಎಕ್ಸ್+ ₹19.99 ಲಕ್ಷದಿಂದ ಬೆಲೆಯಿಂದ ಲಭ್ಯವಾಗಲಿದೆ. ಹೊಸ ಮಾದರಿಯಲ್ಲಿ ಗಡಸು ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಆಫ್ ರೋಡ್ನ ಮಜವನ್ನು ಪರಿಪೂರ್ಣವಾಗಿ ಅನುಭವಿಸುವವರಿಗೆ ಇದು ಇಷ್ಟವಾಗಲಿದೆ.
ಅಡ್ವೆಂಚರ್ ಎಕ್ಸ್ ಮಾದರಿಯಲ್ಲಿ ಲಭ್ಯವಾಗುವ ಸೌಲಭ್ಯಗಳಿವು…
- ADAS ಇದ್ದು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ (AT)
- 360 ಡಿಗ್ರಿ ಎಚ್ಡಿ ಸರೌಂಡ್ ವ್ಯೂ
- ಎತ್ತರದಲ್ಲಿ ಹಿಂದಕ್ಕೆ ಜಾರದಂತೆ EPB ಆಟೊ ಹೋಲ್ಡ್ ಜತೆಗೆ
- ಹಿಂದಕ್ಕೆ ಜಾರದಂತೆ ನಾರ್ಮಲ್, ರಫ್, ವೆಟ್ ಆಯ್ಕೆಗಳು
- ಲ್ಯಾಂಡ್ ರೋವರ್ನಿಂದ ಪಡೆದ ಕಮಾಂಡ್ ಶಿಫ್ಟರ್ (ಎಟಿ)
Ergo Lux ಚಾಲಕನ ಸೀಟ್ ನೀಡಲಾಗಿದ್ದು, ಇದರಲ್ಲಿ ಮನೆಯವರ ಎಲ್ಲರ ಎತ್ತರಕ್ಕೆ ಅನುಗುಣವಾಗಿ ಆಸನವನ್ನು ಹೊಂದುವಂತೆ ನೆನಪಿಟ್ಟುಕೊಳ್ಳುವಂತ ಸ್ಮೃತಿ ಕೋಶ ಅಳವಡಿಸಲಗಿದೆ. 26.03 ಸೆಂ.ಮೀ. ಅಲ್ಟ್ರಾ ವ್ಯೂ ಅವಳಿ ಪರದೆಯ ಸಿಸ್ಟಂ ಅಳವಡಿಸಲಾಗಿದೆ. ರಸ್ತೆಯಲ್ಲಿ ಸಾಗುವಂತೆಯೇ ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುವ ಹೆಡ್ಲ್ಯಾಂಪ್, ಮಳೆ ಅಥವಾ ಇನ್ಯಾವುದೇ ಸ್ವರೂಪದಲ್ಲಿ ಗಾಜಿನ ಮೇಲೆ ಬೀಳುವ ನೀರು ಗ್ರಹಿಸಿ ಚಲಿಸುವ ವೈಪರ್ಗಳು, ನಗರ, ಸ್ಪೋರ್ಟ್, ಇಕೊ ಮಾದರಿಯಲ್ಲಿ ಲಭ್ಯ,
ಕಾರ್ಯಕ್ಷಮತೆ ಮತ್ತು ವಿನ್ಯಾಸ
OMEGARC ವಿನ್ಯಾಸದಲ್ಲಿ ಈ ಕಾರುಗಳು ಅಭಿವೃದ್ಧಿಗೊಂಡಿದೆ. ಇದು ಲ್ಯಾಂಡ್ ರೋವರ್ ಡಿ8 ಪ್ಲಾಟ್ಫಾರ್ಮ್ ಮೇಲೆ ಹ್ಯಾರಿಯರ್ ಮತ್ತು ಸಫಾರಿ ಅಭಿವೃದ್ಧಿಪಡಿಸಲಾಗಿದೆ. ಈ ಎಸ್ಯುವಿಗಳು 2.0 ಲೀಟರ್ KRYOTEC ಡೀಸೆಲ್ ಎಂಜಿನ್ ಇದರದ್ದು. ಹ್ಯಾರಿಯರ್ ಅಡ್ವೆಂಚರ್ ಎಕ್ಸ್ ಎಸ್ಯುವಿಯಲ್ಲಿ ಆರ್17 ಟೈಟನ್ ಫೋರ್ಜ್ಡ್ ಅಲಾಯ್ ವೀಲ್ ಮತ್ತು ಆನಿಕ್ಸ್ ಟ್ರಯಲ್ ಇಂಟೀರಿಯರ್, ಸಫಾರಿ ಅಡ್ವೆಂಚರ್ ಎಕ್ಸ್ ಫೀಚರ್ಸ್್ ಬೋಲ್ಡ್ ಆರ್18 ಅಪೆಕ್ಸ್ ಫೋರ್ಜ್ಡ್ ಅಲಾಯ್ಸ್ ಮತ್ತು ಅಡ್ವೆಂಚರ್ ಓಕ್ ಇಂಟೀರಿಯರ್ಸ್.
ಅಪ್ಡೇಟೆಡ್ ಪೋರ್ಟ್ಫೋಲಿಯೊ
ಅಡ್ವೆಂಚರ್ ಎಕ್ಸ್ ಮಾದರಿಯೊಂದಿಗೆ ಟಾಟಾ ಮೋಟಾರ್ಸ್ ತನ್ನ ಹ್ಯಾರಿಯರ್ ಮತ್ತು ಸಫಾರಿಯಲ್ಲಿ ಹೊಸತನ ಮತ್ತು ಹೊಸ ಬಣ್ಣಗಳನ್ನು ಪರಿಚಯಿಸಿದೆ. ಬುಕ್ಕಿಂಗ್ ಆರಂಭವಾಗಿದ್ದು, ಈ ಬೆಲೆಯು ಅ. 31ರವರೆಗೆ ಮಾತ್ರ ಲಭ್ಯ.