ಏರ್‌ ಫಿಲ್ಟರ್‌, ವೈಪರ್‌, ಸ್ಪಾರ್ಕ್‌ ಪ್ಲಗ್ ಬದಲಾವಣೆ: ಕಾರಿನ ಸರಳ ನಿರ್ವಹಣೆ ಮಾಡುವುದು ಸುಲಭ

Car maintenance Designer AI image

ಮುಖ್ಯಾಂಶಗಳು

  • ವಾಹನಗಳ ನಿರ್ವಹಣೆಗೆ ನಿರಂತರ ನಿರ್ವಹಣೆ ಅತ್ಯಗತ್ಯ
  • ಕಾಲಕಾಲಕ್ಕೆ ವಾಹನಗಳ ನಿರ್ವಹಣೆ ಮಾಡದಿದ್ದರೆ ಒಂದಷ್ಟು ಸಮಸ್ಯೆ ಖಂಡಿತಾ
  • ಪರಿಣಿತರ ನೆರವಿಲ್ಲದೆ ಕೆಲವೊಂದು ಬಿಡಿಭಾಗಗಳ ಬದಲಾವಣೆ ನಾವೇ ಮಾಡಿಕೊಳ್ಳಬಹುದು

ಕಾರು ಖರೀದಿಸಿದರಷ್ಟೇ ಸಾಕೆ. ಅದರ ನಿರ್ವಹಣೆಯೂ ಬೇಕಲ್ಲ. ಸರ್ವೀಸ್‌ ಕೇಂದ್ರಗಳಿಗೆ ಹೋದರೆ, ಮೂಗಿಗಿಂತ ಮೂಗುತಿ ಭಾರ ಎಂಬಂತೆ, ಬಿಡಿ ಭಾಗಗಳಿಗಿಂತ ಅದನ್ನು ಜೋಡಿಸುವ ಶುಲ್ಕ, ಅದರ ಮೇಲೆ ಜಿಎಸ್‌ಟಿ ಇತ್ಯಾದಿ ಇತ್ಯಾದಿಗಳ ಹೊರ ಹೋರಲು ಕಾರು ಮಾಲೀಕರು ಅನಿವಾರ್ಯವಾಗಿ ಸಿದ್ಧರಾಗಬೇಕು.

ಆದರೆ ಅದರ ಬದಲು ಕೆಲವೊಂದು ಬಿಡಿ ಭಾಗಗಳನ್ನು ಬದಲಿಸುವ ಕೆಲಸವನ್ನು ತುಸು ಪ್ರಯತ್ನಿಸಿದರೆ ಮನೆಯಲ್ಲೇ ನಾವೇ ಮಾಡಿಕೊಳ್ಳಬಹುದು.

ಏರ್‌ ಫಿಲ್ಟರ್ ಬದಲಾವಣೆ

ಕಾರಿನ ಏರ್‌ ಫಿಲ್ಟರ್‌ ಬದಲಾವಣೆಗೆ ಕೇವಲ 10 ನಿಮಿಷಗಳು ಸಾಕು. ಇದನ್ನು ಈ ಸರಳ ಮಾರ್ಗಗಳ ಮೂಲಕ ಬದಲಿಸಲು ಸಾಧ್ಯ

  • ಕಾರಿನ ಬಾನೆಟ್ ತೆರೆದು, ಏರ್‌ ಫಿಲ್ಟರ್‌ ಜಾಗವನ್ನು ಹುಡುಕಿ
  • ಏರ್‌ಫಿಲ್ಟರ್‌ ಮೇಲಿನ ಹೊದಿಕೆಯನ್ನು ತೆಗೆಯಿರಿ ಮತ್ತು ಅದು ಎಷ್ಟು ಹಳತಾಗಿದೆ ಎಂದು ಪರೀಕ್ಷಿಸಿ
  • ಇದರ ನಂತರ ಹೊಸ ಫಿಲ್ಟರ್‌ ಅನ್ನು ಅದೇ ಜಾಗದಲ್ಲಿ ಸ್ಥಾಪಿಸಿ
  • ಆದರೆ ಹಳತನ್ನು ತೆಗೆಯುವಾಗ ಆ ಜಾಗದಲ್ಲಿ ಏನೂ ಬೀಳದಂತೆ ನೋಡಿಕೊಳ್ಳಿ
  • ಹೊಸ ಫಿಲ್ಟರ್ ಅಳವಡಿಸಿದ ನಂತರ ಬೋಲ್ಟ್‌ನಿಂದ ಅದನ್ನು ಭದ್ರಗೊಳಿಸಿ

ವಿಂಡ್‌ಶೀಲ್ಡ್ ವೈಪರ್‌ ಬದಲಿಸುವ ಕ್ರಮ

ಕಾರುಗಳಿಗೆ ಪ್ರತಿ ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆಯಾದರೂ ವೈಪರ್‌ ಬ್ಲೇಡ್‌ಗಳನ್ನು ಬದಲಿಸುವುದು ಸರಿಯಾದ ಕ್ರಮ. ಆದರೆ ಇದು ಯಾವ ವಾಹನ ಎಂಬುದನ್ನು ಅವಲಂಬಿಸಿರುತ್ತದೆ. ಇದನ್ನೂ ಸರಳವಾಗಿ ಬದಲಿಸಿಕೊಳ್ಳಬಹುದು.

  • ವೈಪರ್‌ ಮೇಲಕ್ಕೆತ್ತಿ ಹಳೆಯ ಬ್ಲೇಡ್‌ ಅನ್ನು ಅಲ್ಲಿರುವ ಕ್ಲಿಪ್‌ ಎಳೆಯುವ ಮೂಲಕ ತೆಗೆಯಿರಿ
  • ಇಲ್ಲಿ ವೈಪರ್‌ನ ಲೋಹದ ಹಿಡಿಕೆಗೆ ವೈಪರ್‌ ಹೇಗೆ ಜೋಡಿಸಲಾಗಿದೆ ಎಂಬುದನ್ನು ಗಮನಿಸಿ
  • ಹೊಸ ಬ್ಲೇಡ್‌ ಅನ್ನು ಮಡಿಕೆಯಾಗದಂತೆ ಜೋಪಾನವಾಗಿ ಹಿಡಿಕೆಗೆ ಜೋಡಿಸಿ ಭದ್ರಪಡಿಸಿ

ಸ್ಪಾರ್ಕ್‌ ಪ್ಲಗ್‌ ಬದಲಿಸುವ ಕ್ರಮ

ಸರಾಸರಿಯಾಗಿ ಪ್ರತಿ 50 ಸವಿರ ಕಿಲೋ ಮೀಟರ್‌ಗೆ ಕಾರುಗಳ ಸ್ಪಾರ್ಕ್‌ ಪ್ಲಗ್ ಬದಲಿಸುವ ಕ್ರಮವಿದೆ. ಹಿಂದೆ 2 ಸ್ಟ್ರೋಕ್ ಬೈಕ್‌ಗಳಲ್ಲಿ ಸುಲಭವಾಗಿ ಸ್ಪಾರ್ಕ್‌ ಪ್ಲಗ್ ತೆಗೆದು ಶುಚಿಗೊಳಿಸುವ ಪದ್ಧತಿ ಇತ್ತು. ಅದೇ ರೀತಿಯಲ್ಲಿ ಕಾರಿನ ಸ್ಪಾರ್ಕ್‌ ಪ್ಲಗ್ ತೆಗೆದು ಬದಲಿಸುವುದೂ ಸರಳ ಕೆಲಸ.

  • ಕಾರಿನಲ್ಲಿ ಸ್ಪಾರ್ಕ್‌ ಪ್ಲಗ್ ಎಲ್ಲಿದೆ ಎಂಬುದನ್ನು ಮೊದಲು ಪತ್ತೆ ಮಾಡಿ
  • ಕೆಲವು ಕಾರುಗಳಿಗೆ ನಾಲ್ಕು, ಆರು ಅಥವಾ ಎಂಟು ಪ್ಲಗ್‌ಗಳಿರುತ್ತವೆ
  • ಸ್ಪಾರ್ಕ್‌ ಪ್ಲಗ್‌ಗೆ ಜೋಡಿಸಲಾದ ವೈರ್‌ ಅನ್ನು ಮೊದಲು ತೆಗೆಯಿರಿ
  • ಸ್ಪಾರ್ಕ್‌ ಪ್ಲಗ್ ತೆಗೆಯಲು ಅದಕ್ಕೆ ಆಗಿ ನೀಡಿರುವ ಪ್ಲಗ್ ಸಾಕೆಟ್ ಮತ್ತು ರ‍್ಯಾಚೆಟ್‌ ಎಕ್ಸ್‌ಟೆನ್ಶನ್ ಬಳಸಬೇಕು
  • ಹೊಸ ಸ್ಪಾರ್ಕ್‌ ಪ್ಲಗ್‌ ಅಳವಡಿಸಿ
  • ಸ್ಪಾರ್ಕ್‌ ಪ್ಲಗ್ ವೈರ್‌ ಅನ್ನು ಮರು ಜೋಡಿಸಿ

ಕೆಲವೊಂದು ನಿರ್ವಹಣೆಯನ್ನು ಕಾರು ಮಾಲೀಕರಾಗಿ ನಾವೇ ನಿರ್ವಹಿಸಿದರೆ ಬಹಳಷ್ಟು ಹಣವನ್ನು ಉಳಿತಾಯ ಮಾಡಲು ಸಾಧ್ಯ. ಒಂದೊಮ್ಮೆ ಆತ್ಮಸ್ಥೈರ್ಯ ಸಾಕಾಗದಿದ್ದರೆ, ಪರಿಣಿತರ ಸಹಾಯವನ್ನು ಪಡೆಯವುದೇ ಸೂಕ್ತ. ಕಾರುಗಳಲ್ಲಿ ಬಹಳಷ್ಟು ಕ್ಲಿಷ್ಟಕರ ಬಿಡಿಭಾಗಗಳು ಇರುತ್ತವೆ. ಒಂದು ತಪ್ಪು ಇನ್ನಷ್ಟು ಖರ್ಚಿಗೆ ದಾರಿ ಎಂಬುದನ್ನೂ ಮರೆಯಬಾರದು.

ಆತ್ಮವಿಶ್ವಾಸ ಇದ್ದರೆ ಸಾಕು ಹೊಸ ಸಂಗತಿಗಳನ್ನು ಕಲಿಯುವುದು ಸುಲಭ. ಕಲಿಕೆಯು ಖರ್ಚನ್ನು ತಗ್ಗಿಸುತ್ತದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ