ವಾಹನ ಉದ್ಯಮದಲ್ಲಿ ಹೊಸ, ದಿಟ್ಟ ಪ್ರಯತ್ನ: Cumminsನ ಹೊಸ ಸಾಹಸಕ್ಕೆ ಬೆರಗಾದ ಜಗತ್ತು

Cummins

ಇಡೀ ವಾಹನ ಪ್ರಪಂಚವೇ ಬ್ಯಾಟರಿ ಚಾಲಿತ EV ವಾಹನದೆಡೆಗೆ ದೌಡಾಯಿಸುತ್ತಿದೆ. ಆದರೆ ಡೀಸೆಲ್‌ ಚಾಲಿತ ಯಂತ್ರಗಳಲ್ಲಿ ಪ್ರಸಿದ್ಧಿ ಪಡೆದಿರುವ ಕಮಿನ್ಸ್‌ ಕಂಪನಿಯು ವಿಭಿನ್ನವಾದ ದಾರಿಯನ್ನು ಆಯ್ಕೆ ಮಾಡಿಕೊಂಡಿದೆ. ಇತರ ಕಂಪನಿಗಳು ಬ್ಯಾಟರಿ ಮತ್ತು ಚಾರ್ಜಿಂಗ್ ಕ್ಷೇತ್ರಗಳತ್ತ ತನ್ನ ಚಿತ್ತ ಹರಿಸಿರುವಾಗ, ಹೊಸ ತಂತ್ರಜ್ಞಾನ ಪರಿಚಯಿಸಿರುವ ಕಮಿನ್ಸ್‌, ಆಟೋ ಕ್ಷೇತ್ರದ ದೃಷ್ಟಿಕೋನವನ್ನೇ ಬದಲಿಸಿದೆ.

ಹೈಡ್ರೋಜನ್ ಕ್ರಾಂತಿಕಾರಿ ಎಂಜಿನ್‌ನ ಶಕ್ತಿ

ಕಮಿನ್ಸ್ ಪರಿಚಯಿಸಿರುವ ಹೊಸ ಎಂಜಿನ್ ‘ಶೂನ್ಯ ದಹನ’ ತಂತ್ರಜ್ಞಾನವನ್ನು ಆಧರಿಸಿದೆ. ಅಂದರೆ ಹೈಡ್ರೋಜೆನ್ ಶಕ್ತಿಯಿಂದ ಕಾರ್ಯನಿರ್ವಹಿಸುತ್ತದೆ. ಲೀಥಿಯಂ ಆಧಾರಿತ ಬ್ಯಾಟರಿಗಳ ಅವಲಂಬನೆಗೆ ನೇರ ಸವಾಲೆಸೆದಿರುವ ಕಮಿನ್ಸ್‌, ಪರಿಸರದ ಮೇಲೆ ಕಡಿಮೆ ಪರಿಣಾಮ ಮತ್ತು ಸಂಪತ್ತಿನ ಕೊರತೆಯ ಸಮಸ್ಯೆ ಇಲ್ಲದ ಶಕ್ತಿಯ ಪರಿಹಾರವನ್ನು ಇದು ಒದಗಿಸುತ್ತದೆ.

EVಗಳ ಪ್ರಮುಖ ಸಮಸ್ಯೆಗೆ ಇದು ಪರಿಹಾರ

ಈ ಎಂಜಿನ್ ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಸಮಸ್ಯೆಗಳಾದ ದೀರ್ಘ ಚಾರ್ಜಿಂಗ್ ಸಮಯ ಮತ್ತು ಕೆಲ ಕಾಲದ ನಂತರ ಬ್ಯಾಟರಿ ನಿಷ್ಕ್ರಿಯೆಗೊಳ್ಳುವುದಕ್ಕೆ ಪರ್ಯಾಯವಾಗಿದೆ.

ಏಕೆಂದರೆ ಹೈಡ್ರೋಜನ್ ಎಂಜಿನ್‌ಗೆ ಕೆಲವೇ ನಿಮಿಷಗಳಲ್ಲಿ ಇಂಧನ ತುಂಬಿಸಬಹುದು ಮತ್ತು ಡೀಸೆಲ್‌ನಂತಹ ಶಕ್ತಿಯುಳ್ಳ ಕಾರ್ಯಕ್ಷಮತೆಯನ್ನು ಪಡೆಯಬಹುದಾಗಿದೆ. ಇದು ಭಾರೀ ವಾಹನಗಳಿಗಾಗಿ ಅತ್ಯಂತ ಉಪಯುಕ್ತ ಮತ್ತು ಆಕರ್ಷಕ ಆಯ್ಕೆಯಾಗಿದೆ.

ಭಾರೀ ವಾಹನಗಳಿಗೆ ಇದೊಂದು ವರದಾನ

ಟ್ರಕ್ ಮತ್ತು ಭಾರೀ ಯಂತ್ರೋಪಕರಣಗಳ ಕ್ಷೇತ್ರದಲ್ಲಿ ಇಂಥ ಎಂಜಿನ್ ‘ಗೇಮ್ ಚೇಂಜರ್’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದು ಶಕ್ತಿಯುತ, ಶುದ್ಧ ಮತ್ತು ಪರಿಣಾಮಕಾರಿ ಪರಿಹಾರವನ್ನು ನೀಡುತ್ತದೆ. ಜೊತೆಗೆ ಈಗಿರುವ ಸೇವಾ ಜಾಲದಲ್ಲಿ ಸುಲಭವಾಗಿ ಅಳವಡಿಸಬಹುದು.

ಶಾಶ್ವತ ಶಕ್ತಿಯ ಹೊಸ ಯುಗ

ಈ ಎಂಜಿನ್ ಕೇವಲ ಉತ್ಪನ್ನವಲ್ಲ; ಇದು ಕಮಿನ್ಸ್‌ನ ಘೋಷಣೆ. ಶುದ್ಧ ಶಕ್ತಿಯ ಭವಿಷ್ಯ ಒಂದು ಮಾತ್ರ ತಂತ್ರಜ್ಞಾನದಿಂದ ನಿರ್ಧಾರವಾಗುವುದಿಲ್ಲ. ಹಲವಾರು ತಂತ್ರಜ್ಞಾನಗಳ ಸಂಯೋಜನೆಯಿಂದ ಶಾಶ್ವತ ಸಾರಿಗೆ ಕ್ಷೇತ್ರ ರೂಪುಗೊಳ್ಳಲಿದೆ. ಹೈಡ್ರೋಜನ್ ಶಕ್ತಿಯ ನವೋದ್ಯಮದಲ್ಲಿ ಕಮಿನ್ಸ್ ಮುಂಚೂಣಿಯಲ್ಲಿದೆ.

ಈ ಘೋಷಣೆಯೊಂದಿಗೆ, ಆಟೋ ಉದ್ಯಮದ ಭವಿಷ್ಯ ಹೊಸ ದಿಕ್ಕಿನಲ್ಲಿ ಸಾಗುತ್ತಿದೆ. ಹೈಡ್ರೋಜನ್ ಶಕ್ತಿಯು ಆಟೋ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸುತ್ತಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ