ಬಾಡಿಗೆ ಮನೆಯನ್ನೇ ತನ್ನ ಪ್ರಯೋಗಶಾಲೆಯನ್ನಾಗಿ ಪವರ್ತಿಸಿದ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಶೈಲೇಂದ್ರ ಸಿಂಗ್ ಗೌರ್ ಅವರು ಆರು ಸ್ಟ್ರೋಕ್‌ಗಳ ಎಂಜಿನ್ ಅಭಿವೃದ್ಧಿಪಡಿಸಿದ್ದಾರೆ. ಇದಕ್ಕಾಗಿ ಅವರು ತಮ್ಮ ಬಳಿ ಇದ್ದ ಭೂಮಿ, ಮನೆ ಹಾಗೂ ಅಂಗಡಿಯನ್ನೇ ಮಾರಿ ಗುರಿ ಸಾಧಿಸಿದ್ದಾರೆ.
ಪ್ರತಿ ಲೀಟರ್ ಪೆಟ್ರೋಲ್‌ಗೆ 176 ಕಿ.ಮೀ. ಇಂಧನ ಕ್ಷಮತೆ ಹೊಂದಿರುವ ಈ ಎಂಜಿನ್‌ನಿಂದಾಗಿ ಶೈಲೇಂದ್ರ ಸಿಂಗ್ ಈಗ ದೇಶ, ವಿದೇಶಗಳಲ್ಲೂ ಸುದ್ದಿಯಲ್ಲಿದ್ದಾರೆ. ಇವರ ಈ ಆವಿಷ್ಕಾರಕ್ಕೆ MNNIT ಪ್ರಾಧ್ಯಾಪಕ ಅನುಜ್ ಜೈನ್ ನೆರವಾಗಿದ್ದಾರೆ.
ಹಾಲಿ ಇರುವ ಸಾಂಪ್ರದಾಯಿಕ ಎಂಜಿನ್‌ನಲ್ಲಿನ ಥ್ರಸ್ಟ್ ಆ್ಯಂಗಲ್ ಮತ್ತು ಇಂಧನ ಸಮರ್ಪಕ ಬಳಕೆಯನ್ನು ಸುಧಾರಿಸಿದ ಪರಿಣಾಮ ಸಾಮಾನ್ಯ ಎಂಜಿನ್‌ಗಿಂತ ಮೂರು ಪಟ್ಟು ಹೆಚ್ಚು ಮೈಲೇಜ್ ನೀಡುವ ಎಂಜಿನ್ ರೂಪಿಸಿದ್ದಾರೆ.
ಸಾಂಪ್ರದಾಯಿಕ ಎಂಜಿನ್‌ಗಳು ಪೂರೈಕೆಯಾದ ಇಂಧನದಲ್ಲಿ ಶೇ 30ರಷ್ಟನ್ನು ಮಾತ್ರ ಬಳಸುತ್ತವೆ. ಆದರೆ ಈ ಎಂಜಿನ್ ಶೇ 70ರಷ್ಟು ಇಂಧನ ಬಳಸುತ್ತದೆ. ಹೀಗಾಗಿ ಇದು ಎಲ್ಲಾ ವಾಹನಗಳಿಗೆ ಹೋಲಿಸಿದರೆ ಹೆಚ್ಚು ಪರಿಸರ ಸ್ನೇಹಿ ಎಂದೆನ್ನುತ್ತಾರೆ ಶೈಲೇಂದ್ರ ಅವರು.
ಈ ಎಂಜಿನ್ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಯಾವುದೇ ಇಂಧನ ಆಧಾರಿತ ವಾಹನದಲ್ಲಿ ಅಳವಡಿಸಬಹುದಾಗಿದೆ. ಇದು ಭಾರತಕ್ಕೆ ಇಂಧನ ದಕ್ಷತೆ ಮತ್ತು ಪರಿಸರ ಸಂರಕ್ಷಣೆಯ ದ್ವಂದ್ವ ಪರಿಹಾರ ನೀಡುತ್ತದೆ ಎನ್ನುವುದು ಅವರ ಮಾತು.
ಪ್ರಾಯೋಗಿಕ ಪರೀಕ್ಷೆ
100cc ಬೈಕ್‌ನಲ್ಲಿ 50ml ಪೆಟ್ರೋಲ್ ಬಳಸಿ 35 ನಿಮಿಷಗಳ ಕಾಲ ಚಾಲನೆ ನಡೆಸಿದ ಶೈಲೆಂದ್ರ ಅವರು ತಂತ್ರಜ್ಞರ ಗಮನ ಸೆಳೆದಿದ್ದಾರೆ. ಆ ಮೂಲಕ ಭಾರತದ ನವೋದ್ಯಮ ಶಕ್ತಿಗೆ ಉತ್ತಮ ಉದಾಹರಣೆಯಾಗಿದೆ.




