ಭಾರತಕ್ಕೆ ಬಂತು TESLA: ಮುಂಬೈನಲ್ಲಿ ಜುಲೈ 15ಕ್ಕೆ ದೇಶದ ಮೊದಲ ಮಳಿಗೆ ಕಾರ್ಯಾರಂಭ

Tesla Model Y

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್‌ ಮಸ್ಕ್‌ನ ಅಮೆರಿಕದ ಜನಪ್ರಿಯ ಎಲೆಕ್ಟ್ರಿಕ್‌ ಕಾರು ಟೆಸ್ಲಾ ಬಹು ನಿರೀಕ್ಷೆಯ ನಂತರ ಭಾರತದ ರಸ್ತೆಗಳಿಯಲಿದೆ. ಮುಂಬೈನ ಬಾಂದ್ರಾದ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಜುಲೈ 15ರಿಂದ ಟೆಸ್ಲಾ ತನ್ನ ಕಾರ್ಯಾರಂಭ ಮಾಡಲಿದೆ.

ಇದು ಭಾರತದ ಮೊದಲ ಡೀಲರ್‌ಶಿಪ್‌. ಇದರ ನಂತರ ದೆಹಲಿಯಲ್ಲಿ ಡೀಲರ್‌ಶಿಪ್‌ ಆರಂಭಕ್ಕೂ ಕಂಪನಿ ಈಗಾಗಲೇ ಸಿದ್ಧತೆ ಆರಂಭಿಸಿದೆ. ಸ್ಥಳ ಹುಡುಕಾಟ ಮತ್ತು ಸಿಬ್ಬಂದಿ ನೇಮಕಕ್ಕೂ ಚಾಲನೆ ದೊರೆತಿರುವುದು ಸುದ್ದಿಯಾಗಿದೆ.

ಮುಂಬೈನ ಬಾಂಬೇ ಕುರ್ಲಾ ಕಾಂಪ್ಲೆಕ್ಸ್‌ನ 24,565 ಚದರಡಿ ಮಳಿಗೆಯಲ್ಲಿ ಈ ಮಳಿಗೆ ಸ್ಥಾಪನೆಯಾಗುತ್ತಿದೆ. ದಕ್ಷಿಣ ದೆಹಲಿಯ ಗುರುಗ್ರಾಮದ ಸೈಬರ್‌ ಹಬ್‌ನಲ್ಲಿರುವ ಡಿಎಲ್‌ಎಫ್‌ ಅವೆನ್ಯೂ ಮಾಲ್‌ನಲ್ಲಿ ಮಳಿಗೆ ತೆರೆಯಲು ಕಂಪನಿ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ.

ಮುಂಬೈನ ಮಳಿಗೆಗೆ ಕಂಪನಿಯ ₹2.25 ಕೋಟಿ ಭದ್ರತಾ ಠೇವಣಿ ಮತ್ತು ಮುಂದಿನ ಐದು ವರ್ಷಗಳವರೆಗೆ ಮಾಸಿಕ ₹37.5 ಲಕ್ಷ ಬಾಡಿಗೆಯನ್ನು ಕಂಪನಿಯು ಭೂಬಾಡಿಗೆದಾರರಿಗೆ ನೀಡುವ ಕರಾರಾಗಿದೆ.

ಕಂಪನಿಯು ಮಾಡೆಲ್‌ ವೈ ಅನ್ನು ಆರಂಭದಲ್ಲಿ ಭಾರತದಲ್ಲಿ ಪರಿಚಯಿಸುತ್ತಿದೆ. ಇದು ಏಕ ಹಾಗೂ ಎರಡು ಮೋಟಾರ್‌ ಮಾದರಿಯಲ್ಲಿ ಲಭ್ಯವಿದೆ. ಒಂದು ಮೋಟಾರ್‌ ಮತ್ತು ಹಿಂಬದಿ ವೀಲ್‌ ಡ್ರೈವ್‌ ಮಾದರಿ ಲಭ್ಯ. ಈ ಕಾರು ಚೀನಾದ ಶಾಂಘೈನಿಂದ ಆಮದಾಗುವ ಸಾಧ್ಯತೆಗಳಿವೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ