ಅಲ್ಟ್ರಾವೈಲೆಟ್ ಎಂಬ ಭಾರತದ ದ್ವಿಚಕ್ರ ತಯಾರಿಕಾ ಕಂಪನಿಯು ಎಫ್99 ಎಂಬ ರೇಸಿಂಗ್ ಬೈಕ್ ಬಿಡುಗಡೆ ಮಾಡಿದ್ದು, ವಿದ್ಯುತ್ ಚಾಲಿತ ವಿಭಾಗದಲ್ಲಿ ಈವರೆಗಿನ ಎಲ್ಲಾ ದಾಖಲೆಗಳನ್ನೂ ಇದು ಮುರಿದಿದೆ.
ಬೆಂಗಳೂರಿನಲ್ಲೇ ವಿನ್ಯಾಸ ಹಾಗೂ ಅಭಿವೃದ್ಧಿಗೊಂಡ ಈ ಬೈಕ್ ಕ್ವಾರ್ಟರ್ ಕಿಲೋ ಮೀಟರ್ ಚಾಲೆಂಜ್ (250 ಮೀ)ನಲ್ಲಿ ಗರಿಷ್ಠ ವೇಗದಲ್ಲಿ ಸಾಗಿ ದಾಖಲೆ ನಿರ್ಮಿಸಿದೆ. ಗರಿಷ್ಠ ಶಕ್ತಿಯನ್ನು ಉತ್ಪಾದಿಸುವಲ್ಲಿ ಯಶಸ್ವಿಯಾಗಿದೆ. ಆ ಮೂಲಕ ದಹಿಸುವ ಎಂಜಿನ್‌ಗೆ ಪರ್ಯಾಯವಾಗಿ ಮತ್ತು ಪ್ರತಿಸ್ಪರ್ಧಿಯಾಗಿ ಇವಿ ಬೈಕ್‌ಗಳು ನಿಲ್ಲಬಲ್ಲದು ಎಂಬುದನ್ನು ಸಾಬೀತು ಮಾಡಿದೆ.
ಅಲ್ಟ್ರಾವೈಲೆಟ್ ಎಫ್99 ಬೈಕ್ ತನ್ನ ಕಾರ್ಖಾನೆಯ ರೇಸಿಂಗ್‌ನಲ್ಲಿ ಪ್ರದರ್ಶಿಸಿತ್ತು. ನಂತರ ಮಿಲಾನ್‌ನಲ್ಲಿ 2023ರಲ್ಲಿ ನಡೆದ EICMA ನಲ್ಲೂ ಇದು ಪ್ರದರ್ಶನ ಕಂಡಿತು. ಆ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದ ಬೈಕ್ ಸದ್ದು ಮಾಡಿತು. ಇದಾಗಿ ಕೆಲವೇ ದಿನಗಳಲ್ಲಿ ಇದೇ ಎಫ್99 ದಾಖಲೆಗಳನ್ನು ಮುರಿಯುವ ಮೂಲಕ ಮತ್ತೆ ಸುದ್ದಿಯಲ್ಲಿದೆ. ಇದು ವಿದ್ಯುತ್ ಚಾಲಿತ ಬೈಕ್ ತಯಾರಿಕಾ ಕ್ಷೇತ್ರದಲ್ಲೇ ಸಂಚಲನ ಮೂಡಿಸಿದೆ.
ಅಲ್ಟ್ರಾವೈಲೆಟ್ ಎಫ್99 ಬೈಕ್‌ನಲ್ಲಿ 400 ವೋಲ್ಟ್‌ನ ಬ್ಯಾಟರಿ ವ್ಯವಸ್ಥೆ ಇದೆ. ಎಫ್77ನ 60 ವೋಲ್ಟ್ ಸೆಟಪ್ ಇದರದ್ದು. 121 ಬಿಎಚ್‌ಪಿ ಅಶ್ವಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 0ಯಿಂದ 100 ಕಿ.ಮೀ. ವೇಗ ಪಡೆಯಲು 3 ಸೆಕೆಂಡುಗಳ ತೆಗೆದುಕೊಂಡಿತು. ಈ ಅವಧಿಯಲ್ಲಿ ಪ್ರತಿ ಗಂಟೆಗೆ ಎಫ್99 265 ಕಿ.ಮೀ. ವೇಗದಲ್ಲಿ ಸಂಚರಿಸಿ ದಾಖಲೆಯ ಜತೆಗೆ ಅಚ್ಚರಿ ಮೂಡಿಸಿದೆ.
ಅಲ್ಟ್ರಾವೈಲೆಟ್ ಎಫ್99 ಬೈಕ್‌ನದ್ದು ಅಲ್ಯುಮಿನಿಯಂ ಫ್ರೇಮ್ ಹೊಂದಿದೆ. 1,400 ಮಿ.ಮೀ. ವೀಲ್‌ಬೇಸ್ ಹೊಂದಿದೆ. 178 ಕೆ.ಜಿ. ತೂಕ ಹೊಂದಿದೆ. ಅತ್ಯಾಧುನಿಕ ಸಸ್ಪೆನ್ಶನ್ ಹಾಗೂ ಟೈರ್ ಸೆಟಪ್ ಇದರದ್ದು. ಹೀಗಾಗಿ ರೋಡ್‌ಗ್ರಿಪ್ ಅತ್ಯುತ್ತಮವಾಗಿದೆ.
ಬೈಕ್‌ನ ಸಾಮರ್ಥ್ಯದ ಕುರಿತು ಕಂಪನಿಯ ಸಿಇಒ ನಾರಾಯಣ ಸುಬ್ರಮಣ್ಯಮ್ ಹರ್ಷ ವ್ಯಕ್ತಪಡಿಸಿದ್ದಾರೆ.