1991ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಪರಿಚಯಗೊಂಡ ಸಿಯಾರಾವನ್ನು 2025ರಲ್ಲಿ ಟಾಟಾ ಮೋಟಾರ್ಸ್ ಮರಳಿ ತಂದಿದೆ. ಅದೂ ಹೊಸ ವಿನ್ಯಾಸ ಹಾಗೂ ತಂತ್ರಜ್ಞಾನದೊಂದಿಗೆ. ಆ ಮೂಲಕ ಎಸ್‌ಯುವಿ ವಿಭಾಗಕ್ಕೆ ಸಿಯಾರಾ ಹೊಸ ಸೇರ್ಪಡೆಯಾಗಿದೆ.
ಅತಿ ನಿರೀಕ್ಷೆ ಇದ್ದ ಸಿಯಾರಾನ. 26ರಂದು ಬಿಡುಗಡೆಗೊಂಡಿದೆ. ಡಿ. 16ರಿಂದ ಟಾಟಾ ಸಿಯಾರಾ 2025ಕ್ಕೆ ಬುಕ್ಕಿಂಗ್ ಆರಂಭವಾಗಲಿದೆ. ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗಕ್ಕೆ ಸೇರಿದ ಸಿಯಾರಾ, ಪಂಚ್, ನೆಕ್ಸಾನ್, ಕರ್ವ್, ಹ್ಯಾರಿಯರ್ ಮತ್ತು ಸಫಾರಿ ಸಾಲಿಗೆ ನಿಂತಿದೆ.
ಆರಂಭಿಕ ಬೆಲೆಯಾಗಿ ₹11.49 ಲಕ್ಷ (ಎಕ್ಸ್ ಶೋರೂಂ) ಎಂದು ಟಾಟಾ ಬೆಲೆಯನ್ನು ನಿಗದಿಪಡಿಸಿದೆ. ಕಾರಿನ ಡೆಲಿವರಿಯು 2026ರ ಜ. 15ರಿಂದ ಆರಂಭವಾಗಲಿದೆ.

ಈ ಬಾರಿ ಟಾಟಾ ಮೋಟಾರ್ಸ್ ತನ್ನ ಸಿಯಾರಾ ಕಾರಿಯಾಗಿ 1.5 ಲೀಟರ್ ಹೈಪರಿಯಾನ್ ಟಿ–ಜಿಡಿಐ ಪೆಟ್ರೋಲ್ ಎಂಜಿನ್ ಮತ್ತು ಆಟೊಮ್ಯಾಟಿಕ್ ಟಾರ್ಕ್ ಕನ್ವರ್ಟರ್‌ನೊಂದಿಗೆ ಪರಿಚಯಿಸಿದೆ.
ಇದರೊಂದಿಗೆ ಹೊಸ ಮಾದರಿಯ 1.5 ಲೀಟರ್‌ನ ರಿವರ್‌ಟ್ರಾನ್ ನೈಸರ್ಗಿಕ ಆಸ್ಪಿರೇಷನ್ ಪೆಟ್ರೋಲ್ ಎಂಜಿನ್ ಮ್ಯಾನುಯಲ್ ಟ್ರಾನ್ಸ್‌ಮಿಷನ್ ಮತ್ತು ಡಿಸಿಎ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ನೀಡಲಾಗಿದೆ.
1.5 ಲೀಟರ್ ಕ್ರಯೊಜೆಟ್ ಡೀಸೆಲ್ ಎಂಜಿನ್ ಆಯ್ಕೆಯೂ ಸಿಯಾರಾದಲ್ಲಿದ್ದು, ಮ್ಯಾನುಯಲ್ ಮತ್ತು ಆಟೊಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಸೌಲಭ್ಯದೊಂದಿಗೆ ನೀಡಲಾಗಿದೆ.
2025ರ ಟಾಟಾ ಸಿಯಾರಾ ಒಟ್ಟು ಏಳು ವೇರಿಯಂಟ್‌ನಲ್ಲಿ ಲಭ್ಯ. ಅವುಗಳಲ್ಲಿ ಪ್ರಮುಖವಾಗಿ ಸ್ಮಾರ್ಟ್+, ಪ್ಯೂರ್, ಪ್ಯೂರ್+, ಅಡ್ವೆಂಚರ್, ಅಡ್ವೆಂಚರ್+, ಅಕಂಪ್ಲಿಷ್ಡ್ ಮತ್ತು ಅಕಂಪ್ಲಿಷ್ಡ್+ ಇವೆ. ಇವುಗಳಲ್ಲಿ ಸ್ಮಾರ್ಟ್+ ಬೇಸ್ ವೇರಿಯಂಟ್ ಹಾಗೂ ಅಕಂಪ್ಲಿಷ್ಡ್+ ಟಾಪ್ ವೇರಿಯಂಟ್ ಆಗಿದೆ.
ಇದೇ ಪ್ರಥಮ ಬಾರಿಗೆ ಕಾರು ಹಗೂ ಕಾರುಗಳ ನಡುವೆ ಕ್ರಾಶ್ ಟೆಸ್ಟ್ ನಡೆಸಲಾಗಿದೆ. ಪ್ರತಿ ಗಂಟೆಗೆ 50 ಕಿ.ಮೀ. ವೇಗದಲ್ಲಿ ಎರಡು ಸಿಯಾರಾಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದವು. ಇದರಲ್ಲಿ ಇಬ್ಬರು ಮಕ್ಕಳು ಸಹಿತ ಇಬ್ಬರು ವಯಸ್ಕರ ಪ್ರತಿಕೃತಿಯನ್ನು ಇಡಲಾಗಿದೆ. ಇವರನ್ನು ಆರು ಏರ್‌ಬ್ಯಾಗ್‌ಗಳು ರಕ್ಷಿಸಿವೆ. ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಲೆವಲ್ 2+, ಎಡಿಎಎಸ್ ಸೇರಿದಂತೆ 20 ಸುರಕ್ಷತಾ ಸೌಲಭ್ಯವನ್ನು ಸಿಯಾರಾದಲ್ಲಿ ನೀಡಲಾಗಿದೆ.
ಸಿಯಾರದಲ್ಲಿ ಅತ್ಯಂತ ವಿಶಾಲವಾದ ಪ್ಯಾನಾರೊಮಿಕ್ ಸನ್‌ರೂಫ್ ನೀಡಲಾಗಿದೆ. ಆಲ್ ವೀಲ್ ಡ್ರೈವ್ ಕೂಡಾ ಇದೆ. 622 ಲೀಟರ್ ಬೂಟ್ ಸ್ಪೇಸ್ ನೀಡಲಾಗಿದೆ.





