2025 ಅಂತ್ಯ ಹಾಗೂ 2026ರ ಆರಂಭದಲ್ಲಿ ಭಾರತದಲ್ಲಿ ಹಲವು ಪ್ರಮುಖ ಎಸ್‌ಯುವಿಗಳು ಮತ್ತು ಎಲೆಕ್ಟ್ರಿಕ್ ವಾಹನಗಳು ಬಿಡುಗಡೆಗೆ ಸಜ್ಜಾಗಿವೆ. ಸುಧಾರಿತ ವೈಶಿಷ್ಟ್ಯಗಳು, ಹಸಿರು ಇಂಧನ ಆಯ್ಕೆಗಳು ಮತ್ತು ವ್ಯಾಪಕ ಬೆಲೆಯ ಶ್ರೇಣಿಯೊಂದಿಗೆ, ಇವು ಭಾರತದ ವಾಹನ ಕ್ಷೇತ್ರವನ್ನು ಹೊಸ ದಿಸೆಯತ್ತ ಕರೆದೊಯ್ಯುವ ಭರವಸೆಯನ್ನು ನೀಡುತ್ತಿವೆ.
ಭಾರತದ ವಾಹನ ಕ್ಷೇತ್ರವು ಹೊಸ ತಂತ್ರಜ್ಞಾನದ ಇವಿ ಮತ್ತು ಎಸ್‌ಯುವಿ ವಾಹನಗಳ ಉತ್ಪಾದನೆಯ ಹಾದಿಯಲ್ಲಿದೆ. ಹೊಸ ತಲೆಮಾರಿನ ಆಂತರಿಕ ದಹಿಸುವ ಎಂಜಿನ್ (ICE) ವಾಹನಗಳು ಮತ್ತು ಎಲೆಕ್ಟ್ರಿಕ್ ವಾಹನಗಳು (EV) ಉತ್ತಮ ದಕ್ಷತೆ, ಆಧುನಿಕ ಸಂಪರ್ಕ ಮತ್ತು ಆಕರ್ಷಕ ವಿನ್ಯಾಸಗಳೊಂದಿಗೆ ಆಕರ್ಷಿಸಲು ಸಜ್ಜಾಗಿವೆ.
ಅವುಗಳಲ್ಲಿ ಪ್ರಮುಖವು…
ಟಾಟಾ ಸಿಯೆರಾ: ಹೊಸ ರೂಪದಲ್ಲಿ ಪ್ರವೇಶ
ಟಾಟಾ ಮೋಟರ್ಸ್ ಇದೇ ನವೆಂಬರ್ 25ರಂದು ತನ್ನ ಒಂದು ಕಾಲದ ಅತ್ಯಂತ ಜನಪ್ರಿಯ ಟಾಟ ಸಿಯೆರಾವನ್ನು ಮತ್ತೊಮ್ಮೆ ಪರಿಚಯಿಸುತ್ತಿದೆ. ಐಸಿಇ ಮತ್ತು ಎಲೆಕ್ಟ್ರಿಕ್ ರೂಪಗಳಲ್ಲಿ ಪರಿಚಯಿಸಲು ಸಜ್ಜಾಗಿದೆ. ₹17–25 ಲಕ್ಷದ ನಿರೀಕ್ಷಿತ ಬೆಲೆಯೊಂದಿಗೆ, ಇದು ಹೊಸ ಹಾಗೂ ನಂಬಲರ್ಹ ತಂತ್ರಜ್ಞಾನ ಮತ್ತು ವಿನ್ಯಾಸವನ್ನು ಬಯಸುವ ಕಾರು ಪ್ರಿಯರ ಆಕರ್ಷಕ ಆಯ್ಕೆಯಾಗಿದೆ. ದ್ವಿತೀಯ ಹಂತದ ಪವರ್‌ಟ್ರೈನ್ ಆಯ್ಕೆಯು ಗ್ರಾಹಕರ ಬದಲಾಗುತ್ತಿರುವ ಆದ್ಯತೆಗಳನ್ನು ಪ್ರತಿಬಿಂಬಿಸುತ್ತದೆ.
ಮಾರುತಿಯ e-ವಿಟಾರಾ: ಎಲೆಕ್ಟ್ರಿಕ್ ಕ್ಷೇತ್ರಕ್ಕೆ ಮತ್ತೊಂದು ಕೊಡುಗೆ
2025ರ ಡಿಸೆಂಬರ್‌ನಲ್ಲಿ ಬಿಡುಗಡೆಗೆ ಸಜ್ಜಾಗಿರುವ ಮಾರುತಿ ಸುಜುಕಿ e-ವಿಟಾರಾ ₹15–20 ಲಕ್ಷದ ಬೆಲೆಯೊಂದಿಗೆ ಎಲೆಕ್ಟ್ರಿಕ್ ಮೋಟಾರ್ ಹೊಂದಿರುವ ಹೊಸ ಆಯ್ಕೆಯಾಗಿದೆ. ಹೊಸ ಇವಿ ವೈಶಿಷ್ಟ್ಯಗಳೊಂದಿಗೆ ಇದು ಲಭ್ಯ.
ಮಹೀಂದ್ರ XEV 7e/9S ಮತ್ತು ಟೊಯೋಟಾ ಅರ್ಬನ್ ಕ್ರೂಸರ್ EV
ಮಹೀಂದ್ರದ XEV 7e/9S ಮಾದರಿಗಳು ₹21–35 ಲಕ್ಷದ ಬೆಲೆಯೊಂದಿಗೆ ಪ್ರೀಮಿಯಂ EV ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡಿವೆ. ಇವು ಕಾರ್ಯಕ್ಷಮತೆ ಮತ್ತು ವಿನ್ಯಾಸದ ಕ್ಷೇತ್ರದಲ್ಲಿ ಮಹೀಂದ್ರದ ಬದ್ಧತೆಯನ್ನು ತೋರಿಸುತ್ತವೆ.
ಟೊಯೋಟಾ 2025ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿರುವ Urban Cruiser EV ಅನ್ನು ₹20–30 ಲಕ್ಷದಲ್ಲಿ ಪರಿಚಯಿಸುತ್ತಿದೆ. ಇದು ನಂಬಿಕಸ್ತ, ಆಧುನಿಕ ತಂತ್ರಜ್ಞಾನ ಮತ್ತು ಸುಧಾರಿತ ಎರ್ಗೋನಾಮಿಕ್ಸ್ ಅನ್ನು ಒದಗಿಸುವ ನಿರೀಕ್ಷೆಯಿದೆ.
ರಿನೊ ಹೊಸ ಡಸ್ಟರ್: ಐಕಾನ್‌ನ ಪುನರ್ ಆವಿಷ್ಕಾರ
ರಿನೊ ಕಂಪನಿಯ ಹೊಸ ವಿನ್ಯಾಸದ ಡಸ್ಟರ್ 2026ರ ಮಾರ್ಚ್‌ನಲ್ಲಿ ರಸ್ತೆಗಿಳಿಯಲಿದೆ. ₹12–20 ಲಕ್ಷದ ಬೆಲೆಯೊಂದಿಗೆ ಸಂಪೂರ್ಣ ಹೊಸ ರೂಪದಲ್ಲಿ ಮರಳಿ ಬರುತ್ತಿದೆ. ಇದು ಸುಧಾರಿತ ಪವರ್‌ಟ್ರೈನ್, ಆಧುನಿಕ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಹೊಸ ವಿನ್ಯಾಸದೊಂದಿಗೆ ಮೌಲ್ಯಪೂರ್ಣ SUV ಖರೀದಿದಾರರಲ್ಲಿ ತನ್ನ ಸ್ಥಾನವನ್ನು ಪುನಃ ಪಡೆಯುವ ನಿರೀಕ್ಷೆಯಿದೆ.
ಐಷಾರಾಮಿ ಮತ್ತು ಕಾರ್ಯಕ್ಷಮತೆ: BMW, Audi, Tesla
BMW iX 2025 ನವೆಂಬರ್ 14ರಂದು ಬಿಡುಗಡೆಯಾಗುತ್ತಿದೆ. ₹1.45 ಕೋಟಿ ಬೆಲೆಗೆ ಲಭ್ಯವಾಗುವ ನಿರೀಕ್ಷೆ ಇದೆ.
Audi Q6 e-tron ಮತ್ತು Tesla Model X ₹85 ಲಕ್ಷ ಮತ್ತು ಅದಕ್ಕಿಂತಲೂ ಮೇಲ್ಪಟ್ಟ ಬೆಲೆ ನಿಗದಿಪಡಿಸುವ ಸಾಮರ್ಥ್ಯವಿದೆ. ಇವು ಅತ್ಯುನ್ನತ ಕಾರ್ಯಕ್ಷಮತೆ ಮತ್ತು ಸುರಕ್ಷತೆಯೊಂದಿಗೆ ಐಷಾರಾಮಿ ಗ್ರಾಹಕರಿಗೆ ಲಭ್ಯವಾಗಲಿದೆ.
MG Majestor ಮತ್ತು ಟಾಟಾ Curvv CNG: ಹಲವು ಆಯ್ಕೆಗಳು
MG Majestor ಡಿಸೆಂಬರ್‌ನಲ್ಲಿ ಬಿಡುಗಡೆಯಾಗುತ್ತಿದೆ. ಈ ವಿಲಾಸಿ ಎಸ್‌ಯುವಿಗೆ ₹40–45 ಲಕ್ಷದ ಬೆಲೆ ನಿಗದಿಯಾಗುವ ಸಾಧ್ಯತೆ ಇದೆ. ಟಾಟಾ Curvv CNG ಕಾರು ₹11–13 ಲಕ್ಷದ ಬೆಲೆಯೊಂದಿಗೆ ಕ್ಲೀನ್ ಫ್ಯುಯೆಲ್ ಆಯ್ಕೆಯನ್ನು ನೀಡುತ್ತಿದೆ.




