ಹೀರೊಹೊಂಡಾ ಎಂದರೆ ಕೆಲ ದಶಕಗಳ ಹಿಂದೆ ಎರಡು ದೇಹ ಒಂದೇ ಆತ್ಮದಂತಿದ್ದವು. ಭಾರತದ ಹೀರೊ, ಜಪಾನ್‌ನ ಹೊಂಡಾ ಕಂಪನಿ ಜತೆಗೂಡಿ ಹೊರತಂದ 100 ಸಿ.ಸಿ. ಬೈಕ್‌ಗಳು ಮಾಡಿದ ಕ್ರಾಂತಿ ವಾಹನ ಕ್ಷೇತ್ರದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತದ್ದು.
ನಂತರದ ದಿನಗಳಲ್ಲಿ ಈ ಎರಡೂ ದೇಹಗಳು ಬೆರೆಗೊಂಡು, ತಮ್ಮದೇ ಉತ್ಪನ್ನಗಳ ತಯಾರಿಕೆಯತ್ತ ಮುಖ ಮಾಡಿದರು. ಇದೀಗ ಹೀರೊ ಕಂಪನಿಯು ಕ್ಲಾಸಿಕ್ ಸ್ಪ್ಲೆಂಡರ್ 125 ಬಿಡುಗಡೆ ಮಾಡಿದೆ. ಹಿಂದಿನ ಸ್ಪ್ಲೆಂಡರ್ ರೂಪವನ್ನೇ ಹೋಲುವ ಈ ಹೊಸ ಬೈಕ್ ಗುಂಡಾಕಾರದ ಹೆಡ್‌ಲ್ಯಾಂಪ್, ರೆಟ್ರೊ ರೂಪ ಹೊಂದಿದೆ. ಕಿಕ್ ಮತ್ತು ಎಲೆಕ್ಟ್ರಿಕ್ ಸ್ಟಾರ್ಟ್ ಇದರದ್ದು. ಪ್ರತಿ ಲೀಟರ್ ಪೆಟ್ರೋಲ್‌ಗೆ 50ರಿಂದ 60 ಕಿ.ಮೀ. ದೂರ ಕ್ರಮಿಸುವ ಇಂಧನ ಕ್ಷಮತೆ ಇದರದ್ದು.
ಹೀರೊ ಈ ಸಾಹಸಕ್ಕೆ ಪ್ರತಿಯಾಗಿ ಹೊಂಡಾ ಕೂಡಾ ಭಾರತದಲ್ಲಿ ಅತಿ ಬೇಡಿಕೆ ಇರುವ 100 ಸಿ.ಸಿ. ಮೋಟಾರ್‌ಸೈಕಲ್ ಹೊರತರಲು ಸಿದ್ಧತೆ ನಡೆಸಿದೆ. ತನ್ನದೇ ಈ ಹಿಂದಿನ ಶೈನ್ ಹೆಸರಿನಲ್ಲಿ ಬೈಕ್ ಅನ್ನು ಪರಿಚಯಿಸಿ ಸ್ಪರ್ಧೆಗೆ ಸಜ್ಜಾಗಿದೆ.
100ರಿಂದ 110 ಸಿ.ಸಿ. ಬೈಕ್ ಮಾದರಿಯ ಬೈಕ್‌ಗಳ ಮಾರುಕಟ್ಟೆ ಭಾರತದಲ್ಲಿ ಶೇ 78ರಷ್ಟು ಪ್ರಮಾಣ ಹೊಂದಿದೆ. ಇದೀಗ ಈ ಮಾರುಕಟ್ಟೆಯಲ್ಲಿ ಸ್ಪ್ಲೆಂಡರ್ ಹಾಗೂ ಶೈನ್‌ಗಳು ಬೆಳಗಲು ಸಜ್ಜಾಗಿವೆ. ಈ ಸ್ಪರ್ಧೆಯಲ್ಲಿ ಯಾರ ಮಾರುಕಟ್ಟೆ ಪಾಲು ಎಷ್ಟಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ಗ್ರಾಹಕರೇ ನಿರ್ಧರಿಸಲಿದ್ದಾರೆ.