Sunday Foglight: ಪ್ರಮುಖ ಕಂಪನಿಗಳು EVಗಳಿಂದ ದೂರ ಸರಿಯುತ್ತಿವೆಯೇ…?
ಫೋರ್ಡ್, ಜನರಲ್ ಮೋಟಾರ್ಸ್, ಮರ್ಸಿಡೀಸ್ ಬೆಂಜ್, ಫೋಕ್ಸ್ವ್ಯಾಗನ್, ಜಾಗ್ವಾರ್ ಲ್ಯಾಂಡ್ರೋವರ್ ಮತ್ತು ಆಸ್ಟನ್ ಮಾರ್ಟಿನ್ ಸೇರಿದಂತೆ ವಿಲಾಸಿ ಕಾರು ತಯಾರಕರು ಎಲೆಕ್ಟ್ರಿಕಲ್ ವಾಹನ ತಯಾರಿಕೆಯಿಂದ ಹಿಂದೆ ಸರಿದಿದ್ದಾರೆ.…
Kannada 1st Auto News Portal
ಫೋರ್ಡ್, ಜನರಲ್ ಮೋಟಾರ್ಸ್, ಮರ್ಸಿಡೀಸ್ ಬೆಂಜ್, ಫೋಕ್ಸ್ವ್ಯಾಗನ್, ಜಾಗ್ವಾರ್ ಲ್ಯಾಂಡ್ರೋವರ್ ಮತ್ತು ಆಸ್ಟನ್ ಮಾರ್ಟಿನ್ ಸೇರಿದಂತೆ ವಿಲಾಸಿ ಕಾರು ತಯಾರಕರು ಎಲೆಕ್ಟ್ರಿಕಲ್ ವಾಹನ ತಯಾರಿಕೆಯಿಂದ ಹಿಂದೆ ಸರಿದಿದ್ದಾರೆ.…
ನಿಸ್ಸಾನ್ ಮೋಟಾರ್ ಇಂಡಿಯಾ ಕಂಪನಿಯು ಆಗಸ್ಟ್ 31ರವರೆಗೆ ತನ್ನ ಗ್ರಾಹಕರಿಗೆ ಮಳೆಗಾಲದ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಿದೆ. ಭಾರತದಲ್ಲಿರುವ ನಿಸ್ಸಾನ್ ನ ಎಲ್ಲಾ ಅಧಿಕೃತ ವರ್ಕ್ ಶಾಪ್ ಗಳಲ್ಲಿ ಈ ಉಚಿತ ತಪಾಸಣೆ ಶಿಬಿರ ನಡೆಯಲಿದೆ. ಮಳೆಗಾಲದಲ್ಲಿ ನಿಸ್ಸಾನ್ ಗ್ರಾಹಕರು ಸುರಕ್ಷಿತವಾಗಿ ವಾಹನ ಚಾಲನೆ ಮಾಡುವ ಉದ್ದೇಶ ಕಂಪನಿಗಿದೆ. ಉಚಿತ ಬ್ಯಾಟರಿ ತಪಾಸಣೆ, ಸಂಪೂರ್ಣ ಬಾಹ್ಯ ಮತ್ತು ಆಂತರಿಕ ತಪಾಸಣೆ, ಕೆಳಭಾಗದ ತಪಾಸಣೆ ಮತ್ತು ರೋಡ್ ಟೆಸ್ಟ್ ಸೇರಿದಂತೆ 30-ಪಾಯಿಂಟ್ ಚೆಕ್ಅಪ್ ಅನ್ನು ಈ ಶಿಬಿರದಲ್ಲಿ ಮಾಡಲಾಗುತ್ತದೆ. ಜೊತೆಗೆ ವಿಶೇಷವಾಗಿ ಉಚಿತ ಟಾಪ್ ವಾಶ್ ಸೌಲಭ್ಯ ದೊರೆಯಲಿದೆ. ಈ ಯೋಜನೆಯ ಭಾಗವಾಗಿ ಬ್ರೇಕ್ ಪ್ಯಾಡ್ ಬದಲಾವಣೆ ಸೇರಿದಂತೆ ಲೇಬರ್ ಶುಲ್ಕಗಳ ಮೇಲೆ ಶೇ 10ರಷ್ಟು ರಿಯಾಯಿತಿ ನೀಡಲಾಗುತ್ತದೆ. ಅಂಡರ್ ಬಾಡಿ ಕೋಟಿಂಗ್, ರೊಡೆಂಟ್ ರಿಪೆಲ್ಲೆಂಟ್, ಎ.ಸಿ. ಡಿಸ್ಇನ್ಫೆಕ್ಷನ್ ಇತ್ಯಾದಿಗಳಂತಹ ವಿಎಎಸ್ ಸರ್ವೀಸ್ಗಳ ಮೇಲೆಯೂ ಶೇ 10ರಷ್ಟು ರಿಯಾಯಿತಿ ದೊರೆಯಲಿದೆ. ನಿಸ್ಸಾನ್ ಒನ್ ಆಪ್ ಅಥವಾ ನಿಸ್ಸಾನ್ ಇಂಡಿಯಾ ವೆಬ್ಸೈಟ್ ಮೂಲಕ ಗ್ರಾಹಕರು ಅಪಾಯಿಂಟ್ಮೆಂಟ್ ಕಾಯ್ದಿರಿಸಬಹುದು. ಈ ಕುರಿತು ನಿಸ್ಸಾನ್ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೌರಭ್ ವತ್ಸ, ‘ಗ್ರಾಹಕರು ಮಳೆಗಾಲದಲ್ಲಿ ಸುರಕ್ಷಿತವಾಗಿ ವಾಹನ ಚಲಾಯಿಸುವಂತೆ ಮಾಡುವುದೇ ಈ ನಮ್ಮ ಉಚಿತ ತಪಾಸಣಾ ಶಿಬಿರದ ಉದ್ದೇಶವಾಗಿದೆ. ಗ್ರಾಹಕರು ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು‘ ಎಂದು ಹೇಳಿದರು. ಹೆಚ್ಚಿನ ಮಾಹಿತಿಗೆ ಭೇಟಿ ಕೊಡಿ- www.nissan.in
ಟೋಲ್ ಇರುವ ಮಾರ್ಗದಲ್ಲಿ ಸಂಚರಿಸಲು ವಾಹನಗಳಿಗೆ ಅಗತ್ಯ ಇರುವ ಫಾಸ್ಟ್‌ಟ್ಯಾಗ್‌ಗಳಿಗೆ ಹೊಸ ಮಾರ್ಗಸೂಚಿಯನ್ನು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಆಗಸ್ಟ್ 1ರಿಂದ ಜಾರಿಗೆ ತಂದಿದೆ. ಇದರನ್ವಯ…
ಜಗತ್ತಿನಲ್ಲಿ ಒಟ್ಟು ಉತ್ಪಾದನೆಯಾಗುತ್ತಿರುವ ಇಂಗಾಲದ ಡೈಆಕ್ಸೈಡ್ ಪ್ರಮಾಣದಲ್ಲಿ ಶೇ 75ರಷ್ಟು ಪ್ರಮಾಣ ಏಷ್ಯಾದ ಆರ್ಥಿಕ ಪ್ರದೇಶಗಳ ರಸ್ತೆ ಸಾರಿಗೆಯ ಕೊಡುಗೆಯಾಗಿದೆ. ಏಷ್ಯಾದಿಂದ ಹೊರಸೂಸುವ ಒಟ್ಟು 79.5 ಕೋಟಿ…
ಟಾಟಾ ಮೋಟರ್ಸ್ 2024–25ನೇ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ₹5,566 ಕೋಟಿ ನಿವ್ವಳ ಲಾಭಗಳಿಸಿದೆ. ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ ₹3,203 ಕೋಟಿ ಲಾಭ ಗಳಿಸಲಾಗಿತ್ತು.…
ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ನಗದು ರಹಿತ ಚಿಕಿತ್ಸೆ ನೀಡಲು ಸರ್ಕಾರವು ಯೋಜನೆ ರೂಪಿಸಿದ್ದು, ಈಗಾಗಲೇ ಚಂಡೀಗಢ ಮತ್ತು ಅಸ್ಸಾಂನಲ್ಲಿ ಇದನ್ನು ಪ್ರಾಯೋಗಿಕವಾಗಿ ಜಾರಿ ಗೊಳಿಸಲಾಗಿದೆ ಎಂದು ಕೇಂದ್ರ…
ಬೆಂಗಳೂರು: ಬೆಂಗಳೂರಿನ ನೈಸ್ ರಸ್ತೆಯಲ್ಲಿ ಹೆಚ್ಚುತ್ತಿರುವ ಅಪಘಾತಗಳಿಗೆ ಅತಿ ವೇಗವೇ ಮುಖ್ಯ ಕಾರಣ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ. ಇದರಿಂದಾಗಿ ರಾತ್ರಿ ವೇಳೆಯಲ್ಲಿ ದ್ವಿ ಚಕ್ರ ವಾಹನಗಳ…
ಸ್ಕೋಡಾ ಕಾರು ತಯಾರಿಕಾ ಕಂಪನಿಯು 4 ಮೀಟರ್ ಒಳಗಿನ ಕಾಂಪ್ಯಾಕ್ಟ್ ಎಸ್‌ಯುವಿ ಪರಿಚಯಿಸಲು ಸಿದ್ಧತೆ ಆರಂಭಿಸಿದೆ. ತನ್ನ ಎಲ್ಲಾ ಕಾರುಗಳ ಹೆಸರನ್ನು ‘ಕ’ ಅಕ್ಷರದಿಂದಲೇ ಪ್ರಾರಂಭಿಸುತ್ತಿರುವ ಸ್ಕೋಡಾ…
ದೇಶದ ಪ್ರಮುಖ ವಾಹನ ತಯಾರಕ ಕಂಪನಿ ಟಾಟಾ ಮೋಟಾರ್ಸ್ ಈ ಬಾರಿ ಕೂಪ್ ಮಾದರಿಯ ಟಾಟಾ ಕರ್ವ್ ಕಾರಿನ ಕಂಬಶ್ಚನ್ ಹಾಗೂ ಇವಿಯನ್ನು ಪರಿಚಯಿಸಿದೆ. ಅತ್ಯಾಕರ್ಷಕ ಫಿಲಾಸಫಿ,…
ಎಲೆಕ್ಟ್ರಿಕ್ ಮೊಬಿಲಿಟಿ ಸ್ಕೀಂ 2024 (EMPS) ಅಡಿಯಲ್ಲಿ ನೀಡುವ ಸಬ್ಸಿಡಿಯನ್ನು ಸೆ. 30ರವರೆಗೂ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ. ಈ ದಿನಾಂಕ ಈ ಮೊದಲು ಜುಲೈ 31ರವರೆಗೂ ಇತ್ತು.…